ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ನಿವಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಕೂಪ್ ಎಸ್‍ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ನಿವಸ್ ಎಸ್‍ಯುವಿಯನ್ನು ಬ್ರೆಜಿಲ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಫೋಕ್ಸ್‌ವ್ಯಾಗನ್ ಕಂಪನಿಯು ಈಗಾಗಲೇ ಸಾವೊ ಬರ್ನಾರ್ಡೊ ಡೂ ಕ್ಯಾಂಪೊದಲ್ಲಿನ ಆಂಚಿಯೆಟಾ ಘಟಕದಲಿ ಈ ನಿವಸ್ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಇನ್ನು ಈ ಹೊಸ ನಿವಸ್ ಎಸ್‍ಯುವಿಯನ್ನು ಇದೇ ತಿಂಗಳ 25ರಂದು ಬ್ರೆಜಿಲ್ ದೇಶದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ನಿವಸ್ ಎಸ್‍ಯುವಿಯು ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಫೋಕ್ಸ್‌ವ್ಯಾಗನ್ ಟಿ-ರಾಕ್ ಕೂಡ ಇದೆ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿಯಲ್ಲಿ ಟಿ-ಕ್ರಾಸ್ ಟಿ-ಕ್ರಾಸ್‌ಗೆ ಹೋಲುವಂತೆ ಕಾಣುವ ಟೈಗನ್ ಕ್ರಾಸ್‌ಒವರ್‌ಗೆ ಆಧಾರವಾಗಿರುವ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಭಾರತಕ್ಕಾಗಿ ತಯಾರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಟ್ವಿಗನ್ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

MOST READ: ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ದಕ್ಷಿಣ ಅಮೆರಿಕಾದ ನಂತರ ನಿವಸ್ ಎಸ್‍ಯುವಿಯನ್ನು ಇತರ ಯುರೋಪಿನ ಮಾರುಕಟ್ಟೆಯಲ್ಲಿ ಪ್ರದರ್ಶಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಸ್‌ಒವರ್ ಅಥವಾ ‘ಅರ್ಬನ್ ಎಸ್‌ಯುವಿಗಳಿಗೆ' ಬೇಡಿಕೆ ಹೆಚ್ಚಾಗುತ್ತಿದೆ. ಫಸ್ಟ್ ಜನರೇಷನ್ ಬಿಎಂಡಬ್ಲ್ಯು ಎಕ್ಸ್ 6 ಮೊದಲ ಕ್ರಾಸ್‌ಒವರ್ ಕೂಪ್ ಎಸ್‍ಯುವಿಯಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು 4,266 ಎಂಎಂ ಉದ್ದ ಮತ್ತು 2,560 ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯ ಎರಡು ಟಯರ್ ಗಳ ವಿಸ್ತರಣೆಯನ್ನು 2,650 ಎಂಎಂ ಅಷ್ಟು ಇದೆ. ನಿವಸ್ ಎಸ್‍ಯುವಿಯು ಟೈಗನ್ ಎಸ್‍ಯುವಿಗಿಂತ ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ನಿವಸ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 17 ಇಂಚಿನ ವ್ಹೀಲ್, ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ, ಕೀ ಲೆಸ್ ಎಂಟ್ರಿ ಮತ್ತು ಪೂರ್ಣ-ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆರಲಿದೆ.

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ ‘ವೋಕ್ಸ್ ಪ್ಲೇ' ಎಂದು ಕರೆಯಲ್ಪಡುವ ವೈಫೈ-ಒಳಗೊಂಡ ಸಿಸ್ಟಂ ಅನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಬ್ರೆಜಿಲ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ 10ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು ಹೆಚ್ಚುವರಿಯಾಗಿ ಅಪ್ಲಿಕೇಶನ್ ಸ್ಟೋರ್ ಅನ್ನು ಕೂಡ ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ 1.0-ಲೀಟರ್ ಟಿಎಸ್‌ಐ ಟರ್ಬೊ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಚಕ್ರಗಳಿಗೆ 6-ಸ್ಪೀಡ್ ಟಾರ್ಕ್-ಕರ್ನವಾಟರ್ ಮೂಲಕ ಪವರ್ ಅನ್ನು ಕಳುಹಿಸಲಾಗುತದೆ.

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗ

ಭವಿಷ್ಯದಲ್ಲಿ ಹೆಚ್ಚುವರಿಯಾಗಿ ಈ ಹೊಸ ನಿವಸ್ ಎಸ್‍ಯುವಿಯಲ್ಲಿ 1.5-ಲೀಟರ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಬಹುದು. ಈ ಪ್ರೀಮಿಯಂ ಕ್ರಾಸ್‌ಒವರ್ ಆದ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಆಡಿ ಕ್ಯೂ3 ಸ್ಪೋರ್ಟ್‌ಬ್ಯಾಕ್, ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Monday, June 22, 2020, 11:59 [IST]
English summary
Volkswagen Nivus Coupe SUV To Launch In Brazil In June. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+