ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಹುನಿರೀಕ್ಷಿತ ಟಾವೊಸ್ ಮಿಡ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಫೋಕ್ಸ್‌ವ್ಯಾಗನ್ ಟಾವೊಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿ ಬ್ರೆಜಿಲ್, ಅರ್ಜೆಂಟೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಸೇರಿದಂತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಟಾವೊಸ್ ಮಿಡ್ ಎಸ್‍ಯುವಿಯನ್ನು ಟಿ-ಕ್ರಾಸ್ ಮತ್ತು ಟಿಗ್ವಾನ್ ಆಲ್‌ಸ್ಪೇಸ್ ನಡುವೆ ಇರಿಸಲಾಗುವುದು. ಈ ಫೋಕ್ಸ್‌ವ್ಯಾಗನ್ ಟಾವೊಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜೀಪ್ ಕಂಪಾಸ್ ಮತ್ತು ಟೊಯೊಟಾ ಕೊರೊಲಾ ಕ್ರಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ದಪ್ಪ ಫ್ರಂಟ್ ಎಂಡ್‌ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿಡ್ ಎಸ್‍ಯುವಿ ನವೀಕರಿಸಿದ ಬಾನೆಟ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಈ ಎಸ್‍ಯುವಿ ಅಟ್ಲಾಸ್ ಕ್ರಾಸ್ ಸ್ಪೋರ್ಟ್ ಅನ್ನು ನೆನಪಿಸುವ ಎಲ್ಇಡಿ ಲೈಟ್ ಸಿಗ್ನೇಚರ್. ಹೈ-ಎಂಡ್ ವೆರಿಯೆಂಡ್ ಗಳ ಅಡಾಪ್ಟಿವ್ ಫ್ರಂಟ್-ಲೈಟಿಂಗ್ ಸಿಸ್ಟಂ (ಎಎಫ್ಎಸ್) ಯೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಈ ಹೊಸ ಟಾವೊಸ್ ಮಿಡ್ ಎಸ್‍ಯುವಿಯ ಸೈಡ್ ಪ್ರೊಫೈಲ್ ಟಿಗ್ವಾನ್‌ಗೆ ಹೋಲುತ್ತದೆ. ಈ ಎಸ್ಯುವಿಯಲ್ಲಿ ಅಗ್ರೇಸಿವ್ ಲೈನ್ ಗಳನ್ನು ಹೊಂದಿದೆ. 17 ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಎಸ್‍ಯುವಿಯಲ್ಲಿ ಪನೋರಮಿಕ್ ಸನ್‌ರೂಫ್ ಆಯ್ಕೆಯಾಗಿ ನೀಡಲಾಗಿದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿ 5 ಸೀಟುಗಳ ಟಿಗ್ವಾನ್ ಗಿಂತ ಕಡಿಮೆ ಇರುತ್ತದೆ. ಈ ಎಸ್‍ಯುವಿ 4,465 ಎಂಎಂ ಉದ್ದ, 1,841 ಎಂಎಂ ಅಗಲ ಮತ್ತು 1,636 ಎಂಎಂ ಇತ್ತರವನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 796 ಲೀಟರ್ ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಇನ್ನು ಎರಡನೇ ಸಾಲಿನ ಸೀಟುಗಳನ್ನು ಮಡಿಚಿದಾಗ 1,877 ಲೀಟರ್ ಗಳಷ್ಟು ಬೂಟ್ ಸ್ಪೇಸ್ ಅನ್ನು ಲಭ್ಯವಿರುತ್ತದೆ. ಮುಂಭಾಗದಲ್ಲಿ 40.1 ಇಂಚಿನ ಲೆಗ್ ರೂಂ ಮತ್ತು ಹಿಂಭಾಗದಲ್ಲಿ 37.9 ಇಂಚುಗಳಷ್ಟು ಲೆಗ್ ರೂಂ ಇದೆ. ಈ ಎಸ್‍ಯುವಿಯಲ್ಲಿ ಪ್ರಯಾಣಿಕರು ಉತ್ತಮ ಸ್ಪೇಸ್ ಅನ್ನು ಹೊಂದಿರುವುದರಿಂದ ಆರಾಮದಾಯಕವಾಗಿ ಪ್ರಯಾಣಿಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿ ಆಧುನಿಕ ವಿನ್ಯಾಸ ಮತ್ತು ಪ್ರೀಮಿಯಂ ಫಿಟ್ ಮತ್ತು ಫಿನಿಶ್ ಪಡೆಯುತ್ತದೆ. ಈ ಎಸ್‍ಯುವಿಯ ಫ್ಯಾಬ್ರಿಕ್ ಹೊಂದಿರುವ ಡ್ಯುಯಲ್-ಟೋನ್ ಸೀಟುಗಳು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಆದರೆ ಫ್ರೆಂಚ್ ರೋಸ್ಟ್ ಮತ್ತು ಬ್ಲ್ಯಾಕ್ ಕಾಂಬಿನೇಶನ್‌ನಲ್ಲಿ ಆಯ್ಕೆಯ ಲೀಥೆರೆಟ್ ಮತ್ತು ಲೆದರ್ ಅಪ್ಹೋಲ್ಸ್ಟರಿ ಟಾಪ್-ಎಂಡ್ ಮಾದರಿಗಳಲ್ಲಿ ಲಭ್ಯವಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯಲ್ಲಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಪುಶ್ ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, 8-ವೇ ಪವರ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ರೇನ್ ಸೆನ್ಸಿಂಗ್ ವೈಪರ್ಸ್ ಮತ್ತು ಹಾಟ್ ಲೆಥೆರೆಟ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಇದರೊಂದಿಗೆ ವೈರ್‌ಲೆಸ್ ಆಪ್-ಕನೆಕ್ಟ್ ಮತ್ತು ನ್ಯಾವಿಗೇಷನ್‌ನೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಟಾಪ್-ಎಂಡ್ ರೂಪಾಂತರಗಳು 10-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 8 ಸ್ಪೀಕರ್‌ಗಳೊಂದಿಗೆ ಪ್ರೀಮಿಯಂ ಬೀಟ್ಸ್ ಆಡಿಯೊ ಸೌಂಡ್ ಸಿಸ್ಟಂ ಅನ್ನು ಪಡೆಯುತ್ತದೆ

ಅನಾವರಣವಾಯ್ತು ಬಹುನಿರೀಕ್ಷಿತ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 158 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

More from DriveSpark

Article Published On: Wednesday, October 14, 2020, 12:12 [IST]
English summary
Volkswagen Taos Suv Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+