ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ
ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಬಾಲಿವುಡ್ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಮಾಡೆಲ್ ಕಾರುಗಳನ್ನು ಖರೀದಿಸುವುದು ಸಿನಿಮಾ ನಟರಿಗೆ ಒಂದು ಬಗೆಯ ಚಟ ಎಂದು ಹೇಳಬಹುದು.

ಬಾಲಿವುಡ್ ಖ್ಯಾತ ನಟ ಅಭಯ್ ಡಿಯೋಲ್ ಅವರು ಇತ್ತೀಚೆಗೆ ಹೊಸ ಎಸ್‍ಯುವಿಯನ್ನು ಖರೀದಿಸಿದ್ದಾರೆ. ನಟ ಅಭಯ್ ಡಿಯೋಲ್ ಅವರು ಹೂಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ನಟ ಅಭಯ್ ಅವರು ಹೊಸ ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜಿಂದಗಿ ನಾ ಮಿಲೇಗಿ ದುಬಾರ ಮತ್ತು ದೇವ್ ಡಿ ಅಂತಹ ಹಿಟ್ ಚಿತ್ರದಲ್ಲಿ ಇವರು ನಾಯಕರಾಗಿ ಅಭಿನಯಿಸಿದ್ದಾರೆ.

ಇನ್ನು ಅವರು ಖರೀದಿಸಿದ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಹೊಸ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.13 ಲಕ್ಷಗಳಾಗಿದೆ. ಈ ಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿದೆ.
MOST READ: ಮಿನಿ ಕ್ಲಬ್‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಎಸ್‍ಯುವಿಯಲ್ಲಿ 2.0 ಲೀಟರಿನ ಟರ್ಬೊಚಾರ್ಜ್ಡ್ ಟಿಎಸ್‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್‍ಗಳಿಗೆ ಫೋಕ್ಸ್‌ವ್ಯಾಗನ್ ಕಂಪನಿಯ 4 ಮೋಷನ್ ಆಲ್ ವ್ಹೀಲ್ ಡ್ರೈವ್ (ಎಡಬ್ಲ್ಯುಡಿ) ಮೂಲಕ ಪವರ್ ಕಳುಹಿಸುತ್ತದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‍ಸ್ಪೇಸ್ ಐದು ಸೀಟ್‍ನ ಟಿಗ್ವಾನ್ ಹೊಂದಿರುವ ಅದೇ ಮಾದರಿಯ ವಿನ್ಯಾಸವನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮೂರನೇ ಸಾಲಿನ ಸೀಟಿಂಗ್‍ಗಳಿಗಾಗಿ ಹೊಸ ಎಸ್‍ಯುವಿಯ ಗಾತ್ರ ಹಾಗೂ ವ್ಹೀಲ್‍ಬೇಸ್ ಅನ್ನು ಹೆಚ್ಚಿಸಲಾಗಿದೆ. ಹೊಸ ಟಿಗ್ವಾನ್ ಆಲ್ಸ್ಪೇಸ್ ಎಸ್‍ಯುವಿಯು ಇಂಟಿಗ್ರೇಟೆಡ್ ಎಲ್‍ಇಡಿ ಡಿಆರ್‍ಎಲ್ ಹೊಂದಿರುವ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್, ಟರ್ನ್ ಇಂಡಿಕೇಟರ್, ಎಲ್‍ಇಡಿ ಫಾಗ್ ಲ್ಯಾಂಪ್ ಹಾಗೂ ಹಿಂಭಾಗದಲ್ಲಿ ಎಲ್‍ಇಡಿ ಟೇಲ್‍ಲೈಟ್‍ಗಳನ್ನು ಹೊಂದಿದೆ.

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್‍ನಲ್ಲಿ ವ್ರಾಪ್ ಮಾಡಲಾದ ಮಲ್ಟಿಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪ್ಯಾಡಲ್ ಶಿಫ್ಟರ್, ಪನೋರಾಮಿಕ್ ಸನ್‌ರೂಫ್, ಮೂರು ಜೋನ್ ಕ್ಲೈಮೆಟ್ ಕಂಟ್ರೋಲ್, ಒಆರ್‌ವಿಎಂಗಳಿಗೆ ಪವರ್ ಅಡ್ಜಸ್ಟಬಲ್ ಹಾಗೂ ಮೆಮೊರಿ ಫಂಕ್ಷನ್‍ಗಳಿವೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಇದರ ಜೊತೆಗೆ ಪ್ರೀಮಿಯಂ ವಿಯೆನ್ನಾ ಲೆದರ್ ಅಪ್‍ಹೊಲೆಸ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟ್ ಇನ್ಸೂಲೇಟೆಡ್ ವಿಂಡ್‌ಶೀಲ್ಡ್, ಆಟೋ ಹೆಡ್‌ಲ್ಯಾಂಪ್, ರೇನ್ ಸೆನ್ಸಾರ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕೀಲೆಸ್ ಎಂಟ್ರಿ ಹಾಗೂ ಡ್ರೈವ್ ಮೋಡ್ ಸೆಲೆಕ್ಟರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‍ಗಳನ್ನು ಹೊಂದಿದೆ.

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್ಸ್ಪೇಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕೊಡಿಯಾಕ್, ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಹಾಗೂ ಮಹೀಂದ್ರಾ ಅಲ್ತುರಾಸ್ ಜಿ4ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








