ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಫೋಕ್ಸ್‌ವ್ಯಾಗನ್ ಕಂಪನಿಯು ಚೀನಾದಲ್ಲಿ ಹೊಸ ಟಿಗ್ವಾನ್ ಎಕ್ಸ್ ಎಸ್‍ಯುವಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ. ಇದರ ನಡುವೆ ಈ ಹೊಸ ಕೂಪೆ ಶೈಲಿಯ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿವೆ.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಚೀನಾ ಮೂಲದ ಸಂಸ್ಥೆಯು ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿದೆ ಎಂದು ವರದಿಗಳು ಪ್ರಕಟವಾಗಿದೆ. ಸಾಮಾನ್ಯ ಟಿಗ್ವಾನ್ ಮಾದರಿಗೆ ಹೋಲಿಸಿದರೆ ಈ ಎಸ್‍ಯುವಿಯ ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲಾಗಿಲ್ಲ. ಈ ಹೊಸ ಎಸ್‍ಯುವಿಯ ಮುಂಭಾಗದಲ್ಲಿ ಗ್ರಿಲ್ ಸಾಕಷ್ಟು ಅಗಲವಾಗಿದ್ದು, ಅದರ ಉದ್ದಕ್ಕೂ ಕ್ರೋಮ್ ಸ್ಲ್ಯಾಟ್‌ಗಳನ್ನು ಅಳವಡಿಸಿದೆ. ಇನ್ನು ಈ ಎಸ್‍ಯುವಿಯ ಮುಂಭಾಗ ಬಂಪರ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಇನ್ನು ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯಲ್ಲಿ ಅಗಲವಾದ ಏರ್ ಡ್ಯಾಮ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಬದಿಗಳಲ್ಲಿ ಸಿ-ಆಕಾರದ ಕ್ರೋಮ್ ಅಂಶಗಳಿವೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಟಿಗ್ವಾನ್ ಎಕ್ಸ್ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಸಿಲೂಯೆಟ್ ಅನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯ ಮೇಲ್ಭಾಗದಲ್ಲಿ ರೂಫ್ ಲೈನ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಹೊಸ ಅಲಾಯ್ ವ್ಹೀಲ್ ಅನ್ನು ಅಳವಡಿಸಿದೆ.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಹೊಸ ಟೈಲ್‌ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ಬೂಟ್ ಲಿಡ್ ನೊಂದಿಗೆ ಸಂಯೋಜಿಸಲ್ಪಟ್ಟ ಸ್ಪಾಯ್ಲರ್ ಹೊಂದಿದೆ. ಹಿಂಭಾಗದ ಎರಡು ಕಡೆಗಳಲ್ಲಿ ಎಕ್ಸಾಸ್ಟ್ ಟಿಪ್ಸ್ ನೀಡಿದೆ. ಬಂಪರ್‌ಗೆ ಫಾಕ್ಸ್ ರಿಯರ್ ಡಿಫ್ಯೂಸರ್ ಸಹ ನೀಡಲಾಗಿದೆ. ಇದು ಎಸ್‍ಯುವಿಯ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಟಿಗ್ವಾನ್ ಎಕ್ಸ್ ಎಸ್‍ಯುವಿಯ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಟರ್ಬೋಚಾರ್ಜ್ಡ್ 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 189 ಬಿಹೆಚ್‍ಪಿ ಅಥವಾ 223 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಇದರೊಂದಿಗೆ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಟಿಗ್ವಾನ್ ಮಾದರಿಯು ಫೋಕ್ಸ್‌ವ್ಯಾಗನ್ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಟಿಗ್ವಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2007ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದರು. ಹಿಂದಿನ ಮಾದರಿ ಟಿಗ್ವಾನ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗ 6 ದಶಲಕ್ಷಕ್ಕೂ ಹೆಚ್ಚಿನ ಯುನಿಟ್ ಗಳು ಮಾರಾಟವಾಗಿತ್ತು.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಬಹಿರಂಗ

ಫೋಕ್ಸ್‌ವ್ಯಾಗನ್ ಕಂಪನಿಯು ಈ ಟಿಗ್ವಾನ್ ಎಕ್ಸ್ ಎಸ್‍ಯುವಿಯನ್ನು ಚೀನಾದಲ್ಲಿ ಈ ವರ್ಷದ ಕೊನೆಯಲ್ಲಿ ಅನಾವರಣಗೊಳಿಸಬಹುದು. ಇನ್ನು ಈ ಟಿಗ್ವಾನ್ ಎಕ್ಸ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಪರಿಚಯಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Monday, July 27, 2020, 16:43 [IST]
English summary
Volkswagen Tiguan X Coupe SUV Leaked On Social Media. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+