ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಮುಂಬರುವ ಮುಂಗಾರಿಗೆ ಹೊಂದಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಗಳನ್ನು ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ನಿರ್ವಹಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ಪ್ರಾದೇಶಿಕ ಅಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರಿಗೆ ಹೆಚ್ಚಿನ ಆದ್ಯತೆಯ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಇದರ ಮುಖ್ಯ ಉದ್ದೇಶವೆಂದರೆ ಮುಂಗಾರುಗಾಗಿ ಹೆದ್ದಾರಿಗಳನ್ನು ಸಿದ್ಧಪಡಿಸುವುದರಿಂದ ಸಂಚಾರವು ಸರಾಗವಾಗಿರಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳ ಬಾಕಿ ಇರುವ ಕಾಮಗಾರಿಗಳನ್ನು ಜೂನ್ 30ಕ್ಕೆ ಮೊದಲು ಇತ್ಯರ್ಥಪಡಿಸುವ ಗುರಿಯನ್ನು ಹೊಂದಿದೆ. ನಿರ್ವಹಣಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾದೇಶಿಕ ಅಧಿಕಾರಿಗಳಿಗೆ ಹಣಕಾಸಿನ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಕಾರ್-ಮೌಂಟೆಡ್ ಕ್ಯಾಮೆರಾ, ಡ್ರೋನ್‌ ಅಥವಾ ನೆಟ್‌ವರ್ಕ್ ಸರ್ವೆ ವಾಹನಗಳಲ್ಲಿರುವ ತಂತ್ರಜ್ಞಾನ-ಚಾಲಿತ ಸಾಧನಗಳ ಮೂಲಕ ಹೆದ್ದಾರಿಗಳ ಸ್ಥಿತಿಯನ್ನು ನಿರ್ಣಯಿಸಲು ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಎಲ್ಲಾ ಕ್ಷೇತ್ರ ಅಧಿಕಾರಿಗಳಿಗೆ ಗಡುವನ್ನು ಪಾಲಿಸಲು, ನಿರ್ವಹಣಾ ಕಾರ್ಯಗಳ ಪ್ರಗತಿಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಮುಂದಿನ ಎರಡು ವರ್ಷಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ರೂ.15 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದೆಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ತಿಳಿಸಿದ್ದರು. ಆಟೋ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೊಳಿಸಲಾಗುವುದೆಂದು ಅವರು ಹೇಳಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಆಟೋ ಸ್ಕ್ರ್ಯಾಪಿಂಗ್ ನೀತಿಯನ್ನು ತ್ವರಿತವಾಗಿ ಜಾರಿಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಟೋ ಮೊಬೈಲ್ ವಲಯನ್ನು ಆರ್ಥಿಕ ಹಿಂಜರಿತದಿಂದ ಹೊರತಂದು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮುಂಗಾರು ಎದುರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಹೆಚ್‌ಎಐ

ಕರೋನಾ ವೈರಸ್ ಬಿಕ್ಕಟ್ಟನ್ನು ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವ ಅವಕಾಶವನ್ನಾಗಿ ಮಾಡಿಕೊಳ್ಳುವಂತೆ ಹೂಡಿಕೆದಾರರು ಹಾಗೂ ಉದ್ಯಮಗಳಿಗೆ ಗಡ್ಕರಿರವರು ಕರೆ ನೀಡಿದ್ದಾರೆ. ಕರೋನಾ ವೈರಸ್‌ನಿಂದ ಆರ್ಥಿಕತೆ ವ್ಯವಸ್ಥೆಯ ಮೇಲೆ ಬಿಕ್ಕಟ್ಟು ಉಂಟಾಗಿದ್ದು, ಈ ಬಿಕ್ಕಟ್ಟನ್ನು ಆಶೀರ್ವಾದವನ್ನಾಗಿ ಬದಲಿಸಿಕೊಳ್ಳಬೇಕೆಂದು ಹೇಳಿದ್ದಾರೆ.

Article Published On: Thursday, May 28, 2020, 17:21 [IST]
English summary
New guidelines from NHAI for monsoon issues. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+