ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ಕರೋನಾ ವೈರಸ್ ಹರಡದಂತೆ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿರುವ ಎಲ್ಲಾ ವಹಿವಾಟುಗಳು ಬಂದ್ ಆಗಿವೆ. ಇದರಿಂದಾಗಿ ಬಹುತೇಕ ಎಲ್ಲಾ ಉದ್ಯಮಗಳು ನಷ್ಟವನ್ನು ಅನುಭವಿಸುತ್ತಿವೆ.

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಹ ಹೊರತಾಗಿಲ್ಲ. ಲಾಕ್‌ಡೌನ್‌ನಿಂದ ನಷ್ಟ ಅನುಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಲ್ಲಾ ಟೋಲ್ ಆಪರೇಟರ್‌ಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿಂತನೆ ನಡೆಸಿದೆ.

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ಲಾಕ್‌ಡೌನ್ ಸಮಯದಲ್ಲಿ ತುರ್ತು ಸೇವೆಗಳನ್ನು ನೀಡುತ್ತಿರುವ ವಾಹನಗಳ ಸಂಚಾರವನ್ನು ಸರಾಗಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಟೋಲ್ ಆಪರೇಟರ್‌ಗಳ ಆದಾಯಕ್ಕೆ ಖೋತಾ ಆಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ವರದಿಗಳ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಉಂಟಾದ ನಷ್ಟಕ್ಕೆ ತನ್ನ ಟೋಲ್ ಆಪರೇಟರ್‌ಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎ‌ಐ) ಯೋಜಿಸುತ್ತಿದೆ.

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟೋಲ್ ಆಪರೇಟರ್‌ಗಳಿಗೆ ಆಗಿರುವ ನಷ್ಟವನ್ನು ಸರಿದೂಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ಇತ್ತೀಚೆಗೆ ತಿಳಿಸಿದ್ದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ಪ್ರಧಾನ ಮಂತ್ರಿಗಳು ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ, ತುರ್ತು ಸೇವೆ ವಾಹನಗಳ ಸಂಚಾರವನ್ನು ಸರಾಗಗೊಳಿಸಲು ಹಾಗೂ ಟೋಲ್ ಪ್ಲಾಜಾಗಳಲ್ಲಿನ ಸಮಯವನ್ನು ಉಳಿಸಲು ನಿತಿನ್ ಗಡ್ಕರಿರವರು ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದ್ದರು.

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎ‌ಐ) ಟೋಲ್‌ಗಳಲ್ಲಿನ ಕಾಯುವ ಅವಧಿಯನ್ನು ಕಡಿಮೆಗೊಳಿಸುವ ಸಲುವಾಗಿ 2019ರ ಡಿಸೆಂಬರ್‌ ತಿಂಗಳಿನಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು 500ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಜಾರಿಗೊಳಿಸಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಟೋಲ್ ಆಪರೇಟರ್‌ಗಳ ನಷ್ಟ ಭರಿಸಲಿದೆ ಹೆದ್ದಾರಿ ಪ್ರಾಧಿಕಾರ

ಇದರನ್ವಯ ಫಾಸ್ಟ್‌ಟ್ಯಾಗ್ ಇಲ್ಲದೆ ಫಾಸ್ಟ್‌ಟ್ಯಾಗ್‌ ಲೇನ್‌ಗಳನ್ನು ಪ್ರವೇಶಿಸುವ ವಾಹನಗಳಿಗೆ ಎರಡರಷ್ಟು ಟೋಲ್ ಶುಲ್ಕ ವಿಧಿಸಲಾಗುತ್ತದೆ. ಮಲ್ಟಿಪಲ್ ಪಾಯಿಂಟ್ ಆಫ್ ಸೇಲ್‌ಗಳ (ಪಿಒಎಸ್) ಮೂಲಕ ಸುಮಾರು ಎರಡು ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಕಳೆದ ತಿಂಗಳು ನಲ್ವತ್ತು ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್‌ ವ್ಯವಹಾರಗಳು ನಡೆದಿದ್ದವು.

Most Read Articles

Kannada
English summary
NHAI will compensate loss of toll operators. Read in Kannada.
Story first published: Wednesday, April 15, 2020, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X