ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ನಿಸ್ಸಾನ್ ಇಂಡಿಯಾ ಕಂಪನಿಯು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿರುವುದಲ್ಲದೆ ಮಾರಾಟ ಮಳಿಗೆಗಳನ್ನು ಪುನಾರಂಭಿದ್ದು, ಉದ್ಯೋಗದ ಸ್ಥಳದಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿದೆ.

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಕಾರು ಉತ್ಪಾದನೆ ಮತ್ತು ಮಾರಾಟ ಶುರು ಮಾಡಿರುವ ನಿಸ್ಸಾನ್ ಮತ್ತು ಸಹ ಸಂಸ್ಥೆಯಾದ ದಟ್ಸನ್ ಕಂಪನಿಯು ದೇಶಾದ್ಯಂತ ಆಯ್ದ ಕಾರು ಮಾರಾಟ ಮಳಿಗೆಗಳನ್ನು ಮಾತ್ರವೇ ತೆರೆದಿವೆ.

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಸದ್ಯ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ಪಡೆದುಕೊಂಡಿರುವ ಆಟೋ ಕಂಪನಿಗಳು ಕೇವಲ ಶೇ.50ಕ್ಕಿಂತ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆಮಾಡಬೇಕು.

MOST READ: ಸಂಕಷ್ಟದಲ್ಲಿರುವ ಆಟೋ ಉದ್ಯಮವನ್ನು ಕೈ ಹಿಡಿಯಲಿದೆ ಹೊಸ ಸ್ಕ್ರ್ಯಾಪಿಂಗ್ ನೀತಿ

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಈ ನಿಟ್ಟಿನಲ್ಲಿ ಹೊಸ ನಿಯಮ ಅನ್ವಯ ನಿಸ್ಸಾನ್ ಕೂಡಾ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ವ್ಯವಹಾರಗಳ ಮೂಲಕ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಕಾರು ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸಲಿದೆ.

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಕಾರು ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ಔಷಧಿಗಳನ್ನು ಸಿಂಪರಣೆ ನಂತರವೇ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲಿದ್ದು, ಈ ವೇಳೆ ಗ್ರಾಹಕರ ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸೋಂಕು ಹರಡುವಿಕೆಯನ್ನು ತಡೆಯಲು ಗರಿಷ್ಠ ಎಚ್ಚರಿಕೆ ಕೈಗೊಳ್ಳಲಾಗುತ್ತಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿದ್ದು, ಸಂಕಷ್ಟದ ನಡುವೆಯೂ ಗ್ರಾಹಕರ ಸೆಳೆಯಲು ಹರಸಾಹಸ ಪಡುತ್ತಿವೆ.

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಕಳೆದ ಒಂದೂವರೆ ತಿಂಗಳಿನಿಂದ ವಿಧಿಸಲಾಗಿರುವ ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಲಾಕ್‌ಡೌನ್ ವಿನಾಯ್ತಿ: ಆಯ್ದ ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ನಿಸ್ಸಾನ್

ಹೀಗಿರುವಾಗ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿದಾರರಿಗೆ ಇಎಂಐ ಹೊರೆ ತಗ್ಗಿಸಲು ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿವೆ.

Article Published On: Monday, May 11, 2020, 21:13 [IST]
English summary
Nissan India resumes business operations as per local guidelines. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+