156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ಜಾರಿಗೆ ಬಂದಿದ್ದು, ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರು ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದೆ. ಹೊಸ ಕಾರಿನಲ್ಲಿ ಈ ಬಾರಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡಲಾಗಿದ್ದು, ಪವರ್‌ಫುಲ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಬಿಎಸ್-4 ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಕಿಕ್ಸ್ ಎಸ್‌ಯುವಿ ಮಾದರಿಯು ಇದೀಗ ಹೆಚ್ಚು ಬಿಎಚ್‌ಪಿ ಪ್ರೇರಿತ 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಹೊಸ ಎಂಜಿನ್ ಪ್ರೇರಿತ ಕಾರು ಕರೋನಾ ವೈರಸ್ ತಡೆಗೆ ಹಾಕಲಾಗಿರುವ ಲಾಕ್‌ಡೌನ್ ತೆರವುಗೊಂಡ ಕೆಲವು ದಿನಗಳ ಬಳಿಕ ಅಧಿಕೃವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

1.3-ಲೀಟರ್ ಟರ್ಬೋ ಎಂಜಿನ್ ಮಾದರಿಯ 156-ಬಿಎಚ್‌ಪಿ ಮತ್ತು 254-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿರಲಿದೆ.

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಹೊಸ ಎಂಜಿನ್ ಅನ್ನು ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಸಹಭಾಗಿತ್ವದ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಡಸ್ಟರ್ ಕೂಡಾ ಪಡೆದುಕೊಳ್ಳಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಡಸ್ಟರ್ ಫೇಸ್‌ಲಿಫ್ಟ್ ಕಾರನ್ನು ಹೊಸ 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಅದೇ ಎಂಜಿನ್ ಇದೀಗ ಕಿಕ್ಸ್ ಬಿಎಸ್-6 ಕಾರಿನಲ್ಲೂ ಲಭ್ಯವಾಗುತ್ತಿದೆ.

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಬಿಎಸ್-6 ಎಮಿಷನ್ ಪ್ರಕಾರ ಈ ಹಿಂದಿನ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಉನ್ನತಿಕರಣವು ಆರ್ಥಿಕವಾಗಿ ಹೊರೆಯಾಗಲಿದ್ದು, ಈ ಹಿನ್ನಲೆ ಸಹಭಾಗಿತ್ವದ ಯೋಜನೆ ಅಡಿ ಹೊಸ ಮಾದರಿಯ ಟರ್ಬೋ ಎಂಜಿನ್ ಅನ್ನೇ ಅಭಿವೃದ್ದಿಪಡಿಸಲಾಗಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಇನ್ನು ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ವಿಶೇಷವೆನ್ನಿಸುವ ಹಾಗೆ ಈ ಕಾರು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಅನ್ನು ಪಡೆದುಕೊಂಡಿದ್ದು, GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವುದರಿಂದ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆ ನೀಡಿವೆ.

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

156-ಬಿಹೆಚ್‌ಬಿ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ನಿಸ್ಸಾನ್ ಕಿಕ್ಸ್

ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ನಾಲ್ಕು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದ್ದು, ಇದೇ ತಿಂಗಳಾಂತ್ಯಕ್ಕೆ ಹೊಸ ಬಿಎಸ್-6 ಎಂಜಿನ್ ಪ್ರೇರಿತ ಕಿಕ್ಸ್ ಮಾದರಿಯು ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ರಸ್ತೆಗಳಿಯಲಿದೆ.

Most Read Articles

Kannada
English summary
Nissan Kicks 1.3L turbo petrol to be launched soon. Read in Kannada.
Story first published: Wednesday, April 29, 2020, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X