ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ನಿಸ್ಸಾನ್ ಬಿಡುಗಡೆ ಮಾಡಿರುವ ಹೊಸ ಕಿಕ್ಸ್ ಫೇಸ್‌ಲಿಫ್ಟ್ ಮಾದರಿಯು ಇದೀಗ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ಈ ಬಾರಿ ಹೊಸದಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.3-ಲೀಟರ್ ಟರ್ಬೋ ಪೆಟ್ರೋಲ್ ಹೊಂದಿರುವುದು ಭಾರೀ ಬೇಡಿಕೆಗೆ ಕಾರಣವಾಗಲಿದೆ.

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ಕಿಕ್ಸ್ ಹೊಸ ಎಸ್‌ಯವಿ ಕಾರು ಬಿಎಸ್-6 ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.14.15 ಲಕ್ಷ ಬೆಲೆ ಹೊಂದಿದೆ. ಈ ಬಾರಿ ಕಿಕ್ಸ್ ಫೇಸ್‌ಲಿಫ್ಟ್‌ನಲ್ಲ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಹೊಸ ಎಮಿಷನ್ ನಿಯಮದ ಪ್ರಕಾರ ಸಾಮಾನ್ಯ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದೆ.

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಜೊತೆಯಾಗಿ ನಿರ್ಮಾಣ ಮಾಡಲಾಗಿರುವ 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಕಿಕ್ಸ್ ಕಾರು ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಆವೃತ್ತಿಯ ಖರೀದಿಗೆ ಲಭ್ಯವಿದೆ.

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

1.3-ಲೀಟರ್ ಎಂಜಿನ್ ಮಾದರಿಯು 7-ಸ್ಟೇಪ್ ಎಂ-ಮೋಡ್ ಟ್ರಾನ್ಸ್‌ಮಿಷನ್‌ನೊಂದಿಗೆ 156-ಬಿಎಚ್‌ಪಿ ಮತ್ತು 254-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಬಿಎಚ್‌ಪಿ ಉತ್ಪಾದನಾ ಮಾದರಿಯಾಗಿದೆ.

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ಇದರಲ್ಲಿ ಸಾಮಾನ್ಯ 1.5-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 105-ಬಿಎಚ್‌ಪಿ ಮತ್ತು 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಗ್ರಾಹಕರ ಬೇಡಿಕೆ ಅನುಸಾರ ಒಟ್ಟು 8 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ಈ ಬಾರಿ ಹೊಸ ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಹಲವಾರು ವಿನೂತನ ಫೀಚರ್ಸ್‌ಗಳನ್ನು ಸೇರಿಸಲಾಗಿದ್ದು, ಟಾಪ್ ಎಂಡ್ ಮಾದರಿಯಲ್ಲಿ ನಿಸ್ಸಾನ್ ಕೆನೆಕ್ಟ್, ಆ್ಯಂಬಿಯೆಂಟ್ ಲೈಟಿಂಗ್, ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ ಗಳನ್ನು ಜೋಡಣೆಮಾಡಲಾಗಿದೆ.

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ಹಾಗೆಯೇ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, 4-ಏರ್‌ಬ್ಯಾಗ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಸ್ಪೆಷಲ್ ಏನು?

ಈ ಮೂಲಕ ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರು ಉತ್ತಮ ಇಂಧನ ದಕ್ಷತೆಯನ್ನು ಸಹ ಹೊಂದಿದ್ದು, ಗ್ರಾಹಕರ ಬೇಡಿಕೆ ಅನುಗುಣವಾಗಿ 6 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳನ್ನು ನೀಡಲಾಗಿದೆ.

Most Read Articles

Kannada
English summary
Here are the variant-wise features of the Nissan Kicks Facelift model. Read in Kannada.
Story first published: Friday, May 22, 2020, 21:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X