ಟಿವಿ ಜಾಹೀರಾತು ಚಿತ್ರೀಕರಣದಲ್ಲಿ ಕಾಣಿಸಿಕೊಂಡ ನಿಸ್ಸಾನ್ ಮ್ಯಾಗ್ನೈಟ್ ಕಾರು
ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಇದೇ ತಿಂಗಳಾಂತ್ಯಕ್ಕೆ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲು ಸಜ್ಜಾಗುತ್ತಿದ್ದು, ಹೊಸ ಕಾರು ಆನಾವರಣಕ್ಕೂ ಮುನ್ನ ಕಾರಿನ ತಾಂತ್ರಿಕ ಅಂಶಗಳು ಮತ್ತು ಪರ್ಫಾಮೆನ್ಸ್ ಕುರಿತಾದ ಟಿವಿ ಜಾಹೀರಾತು ಚಿತ್ರೀಕರಣಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮ್ಯಾಗ್ನೈಟ್ ಕಾರು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದ್ದು, ಜಾಹೀರಾತು ಚಿತ್ರೀಕರಣದ ವೇಳೆ ಹೊಸ ಕಾರು ಆಟೋ ಮ್ಯಾಟಿಕ್ ಆವೃತ್ತಿಯಾಗಿರುವ ಬಹಿರಂಗವಾಗಿದೆ. ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಬಿ ಸೆಗ್ಮೆಂಟ್ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಮಾದರಿಯೊಂದನ್ನು ಸಿದ್ದಪಡಿಸುತ್ತಿದೆ.

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್ ಸೌಲಭ್ಯವನ್ನು ಹೊಂದಿದೆ.

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಸದ್ಯಕ್ಕೆ ಹೊಸ ಕಾರನ್ನು ಭಾರತದಲ್ಲಿ EM2 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೈಟ್' ಎಂದು ಕರೆಯಲಾಗಿದೆ. ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟ ಹೊಂದಿರುವ ಹೊಸ ಕಾರು ಕಟಿಂಗ್ಎಡ್ಜ್ ವಿನ್ಯಾಸವನ್ನು ಹೊಂದಿದೆ.

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರು ಮಾಹಿತಿಗಳ ಪ್ರಕಾರ ದೆಹಲಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 6.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 10 ಲಕ್ಷದೊಳಗೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಹೊಂದಿರಲಿದೆ.
Source: Autocar Forum


Click it and Unblock the Notifications