ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ನಿಸ್ಸಾನ್ ಮ್ಯಾಗ್ನೈಟ್ ಕಂಪನಿಯು ನಿರ್ವಹಣಾ ವೆಚ್ಚದಲ್ಲೂ ಗ್ರಾಹಕರ ಸೆಳೆಯುತ್ತಿದ್ದು, ಹೊಸ ಕಾರಿನ ನಿರ್ವಹಣಾ ವೆಚ್ಚ ಕುರಿತು ಕಂಪನಿಯು ಹೊಸ ಮಾಹಿತಿ ಹಂಚಿಕೊಂಡಿದೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಪ್ರತಿಸ್ಪರ್ಧಿಕಾರು ಮಾದರಿಗಳಿಂತಲೂ ಶೇ. 25 ರಿಂದ ಶೇ.40ರಷ್ಟು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಮ್ಯಾಗ್ನೈಟ್ ಕಾರು ಮಾದರಿಯು ಪ್ರತಿ ಕಿ.ಮೀ ಗೆ 29 ಪೈಸೆ ನಿರ್ವಹಣಾ ವೆಚ್ಚ ಹೊಂದಿದ್ದು, ಹೊಸ ಕಾರಿನ ಮೇಲೆ ನಿಸ್ಸಾನ್ ಕಂಪನಿಯೇ 2 ವರ್ಷ ಅಥವಾ 50 ಸಾವಿರ ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತದೆ. ಸ್ಟ್ಯಾಂಡರ್ಡ್ ವಾರಂಟಿ ಅವಧಿ ಮುಗಿದ ನಂತರ ಗ್ರಾಹಕರು ಹೆಚ್ಚುವರಿ ದರ ಪಾವತಿಯೊಂದಿಗೆ 1 ಲಕ್ಷ ಕಿ.ಮೀ ಅಥವಾ 5 ವರ್ಷಗಳಿಗೆ ವಾರಂಟಿ ವಿಸ್ತರಣೆ ಮಾಡಿಕೊಳ್ಳಬಹುದು.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ವಾರಂಟಿ ಅವಧಿಯ ಮೊತ್ತವು ಸೆಗ್ಮೆಂಟ್ ಮಾದರಿಗಳಲ್ಲೇ ಅತಿ ಕಡಿಮೆ ನಿರ್ವಹಣಾ ವೆಚ್ಚವಾಗಿದ್ದು, ಕಂಪನಿಯ ಮತ್ತೊಂದು ಹೊಸ ವಾರಂಟಿ ಪ್ಯಾಕೇಜ್ ಖರೀದಿ ಮಾಡುವ ಮೂಲಕ ಮತ್ತಷ್ಟು ಉಳಿತಾಯ ಮಾಡಬಹುದಾಗಿದೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್ ಕೇರ್ ಎನ್ನುವ ವಾರಂಟಿ ಪ್ಯಾಕೇಜ್ ಖರೀದಿ ಮಾಡುವುದರಿಂದ ನಿರ್ವಹಣಾ ವೆಚ್ಚಗಳ ಮೇಲೆ ಗ್ರಾಹಕರು ಹೆಚ್ಚುವರಿಯಾಗಿ ಶೇ.22 ರಷ್ಟು ಉಳಿತಾಯ ಮಾಡಬಹುದಾಗಿದ್ದು, ನಿಸ್ಸಾನ್ ಮ್ಯಾಗ್ನೈಟ್ ಕೇರ್‌ನಲ್ಲಿ ಗೋಲ್ಡ್ ಮತ್ತು ಸಿಲ್ವರ್ ಎನ್ನುವ ಎರಡು ಆಯ್ಕೆ ನೀಡಲಾಗಿದೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್ ಕೇರ್ ಗೋಲ್ಡ್ ಪ್ಯಾಕೇಜ್‌ನಲ್ಲಿ ಸಮಗ್ರ ನಿರ್ವಹಣಾ ಸೇವೆಗಳು ಲಭ್ಯವಾದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕೇರ್ ಸಿಲ್ವರ್ ಪ್ಯಾಕೇಜ್ ಬೇಸಿಕ್ ಸರ್ವಿಸ್ ಸೇವೆಗಳನ್ನು ಮಾತ್ರ ಒಳಗೊಂಡಿರುತ್ತದೆ. ಗೋಲ್ಡ್ ಪ್ಯಾಕೇಜ್‌ನಲ್ಲಿ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ನಿರ್ವಹಣಾ ವೆಚ್ಚಗಳನ್ನು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಹೋಲಿಕೆ ಮಾಡಿದಾಗ ಸಾಕಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ನಿರ್ವಹಣಾ ವೆಚ್ಚ ಇದಾಗಿದೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಇನ್ನು ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಉತ್ತಮ ಬೆಲೆ ಪೈಪೋಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರು ಕೂಡಾ ಮ್ಯಾಗ್ನೈಟ್ ಕಾರಿನ ಖರೀಗೆ ಮುಂದಾಗುತ್ತಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿಲ್ಲ.

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆಯ ನೀರಿಕ್ಷೆಯಲ್ಲಿದೆ. ಹೊಸ ಕಾರು ಬಿಡುಗಡೆಯಾದ ಕೇವಲ 2 ವಾರಗಳಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಹಲವು ಕಾರಣಗಳಿಗೆ ವಿಶೇಷ ಎನ್ನಿಸಲಿದೆ.

Most Read Articles

Kannada
English summary
Nissan Magnite Maintenance Costs Claim To Be The Lowest-In-Segment. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X