Just In
- 8 min ago
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- 11 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 11 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 12 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
Don't Miss!
- News
ಎರಡನೇ ಹಂತದ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಮ್ಯಾಗ್ನೆಟ್ ಕಾಂಪ್ಯಾಕ್ಟ್ ಎಸ್‍ಯುವಿ
ನಿಸ್ಸಾನ್ ಕಂಪನಿಯು ಹೊಸ ಮ್ಯಾಗ್ನೆಟ್ ಸಬ್-4 ಮೀಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಈ ಹೊಸ ನಿಸ್ಸಾನ್ ಮ್ಯಾಗ್ನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ನಿಸ್ಸಾನ್ ಕಂಪನಿಯು ಮ್ಯಾಗ್ನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಮ್ಯಾಗ್ನೆಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್ಲೇನ್ ಬಹಿರಂಗಪಡಿಸಿದೆ. ಮ್ಯಾಗ್ನೆಟ್ ಎಸ್‍ಯುವಿಯು ನಿಸ್ಸಾನ್ ಬ್ರ್ಯಾಂಡ್‌ನ ಸಿಗ್ನೇಚರ್ ಹೆಡ್‌ಲ್ಯಾಂಪ್, ಕ್ರೋಮ್ ಆಕಾರದ ಗ್ರಿಲ್ , ಎದ್ದು ಕಾಣುವ ಕ್ರೀಸ್ ಲೈನ್‌ಗಳನ್ನು ಹೊಂದಿದೆ. ಈ ಮ್ಯಾಗ್ನೆಟ್ ಎಸ್‍ಯುವಿಯಲ್ಲಿ ಎಲ್ಇಡಿ ಡಿಆರ್‌ಎಲ್ ಗಳನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಅಲಾಯ್ ವ್ಹೀಲ್ ಮತ್ತು ರೂಫ್ ಇಂಟಿಗ್ರೇಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.

ಈ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಹಲವಾರು ಫೀಚರುಗಳನ್ನು ಹೊಂದಿರಲಿದೆ. ಈ ಎಸ್‍ಯುವಿಯಲ್ಲಿ ಅತ್ಯಾಧುನಿಕ ಕನೆಕ್ಟಿವಿಟಿ ಫೀಚರುಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಎಂಐಡಿ, ಮಲ್ಟಿ-ಫಂಕ್ಷನ್ ಸ್ಟೀಯರಿಂಗ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿರಲಿದೆ.

ರೆನಾಲ್ಟ್ ನಿಸ್ಸಾನ್ ಅನ್ನು ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ತಯಾರಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹೊಸ ರೆನಾಲ್ಟ್ ಕಿಂಗರ್ ಎಸ್‍ಯುವಿಯನ್ನು ಕೂಡ ಉತ್ಪಾದಿಸಲಾಗುತ್ತದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಸಬ್-4 ಮೀಟರ್ ನಿಸ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಟರ್ಬೋಚಾರ್ಜ್ಡ್ 1 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಶೀಘ್ರದಲ್ಲೇ ರೆನಾಲ್ಟ್ ಟ್ರೈಬರ್ ಕಾಂಪ್ಯಾಕ್ಟ್ ಎಂಪಿವಿಯಲ್ಲಿ ಕೂಡ ಅಳವಡಿಸಲಿದೆ. ಇದೇ ಎಂಜಿನ್ ಅನ್ನು ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿಗೆ ಅಳವಡಿಸಬಹುದು.

ಈ ಎಂಜಿನ್ ಸುಮಾರು 80-100 ಬಿಹೆಚ್‍ಪಿ ಪವರ್ ಮತ್ತು 150-200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಎಂಜಿನ್‍ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.
MOST READ: ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ನಿಸ್ಸಾನ್ ಕಂಪನಿಯು ಈ ಹೊಸ ಮ್ಯಾಗ್ನೆಟ್ ಎಸ್‍ಯುವಿಯನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು. ಈ ಎಸ್‍ಯುವಿಯನ್ನು ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಹೊಸ ನಿಸ್ಸಾನ್ ಮ್ಯಾಗ್ನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರಿಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.