ಉತ್ಪಾದನಾ ಆವೃತ್ತಿಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ನಿಸ್ಸಾನ್ ಮ್ಯಾಗ್ನೈಟ್
ನಿಸ್ಸಾನ್ ಕಂಪನಿಯು ತನ್ನ ಹೊಚ್ಚ ಹೊಸ ಕಾರು ಮಾದರಿಯಾದ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿರುವ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತಿದೆ.

ಕಳೆದ 2 ತಿಂಗಳ ಹಿಂದಷ್ಟೇ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದ ನಿಸ್ಸಾನ್ ಕಂಪನಿಯು ಇದೀಗ ಇದೇ ತಿಂಗಳು 21ರಂದು ಹೊಸ ಕಾರಿನ ಉತ್ಪಾದನಾ ಕಾರು ಮಾದರಿಯನ್ನು ಅನಾವರಣಗೊಳಿಸುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಅಂತಿಮ ಹಂತದ ಸಿದ್ದತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಳ್ಳುತ್ತಿದೆ. ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಬಿ ಸೆಗ್ಮೆಂಟ್ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಮಾದರಿಯೊಂದನ್ನು ಸಿದ್ದಪಡಿಸುತ್ತಿದೆ.

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್ ಸೌಲಭ್ಯವನ್ನು ಹೊಂದಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.

ಸದ್ಯಕ್ಕೆ ಹೊಸ ಕಾರನ್ನು ಭಾರತದಲ್ಲಿ EM2 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೈಟ್' ಎಂದು ಕರೆಯಲಾಗಿದೆ. ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟ ಹೊಂದಿರುವ ಹೊಸ ಕಾರು ಕಟಿಂಗ್ಎಡ್ಜ್ ವಿನ್ಯಾಸವನ್ನು ಹೊಂದಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.
Source: Shifting-Gears


Click it and Unblock the Notifications