6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಬಿಡುಗಡೆಗೊಂಡ ಕೇವಲ ಎರಡೇ ವಾರದಲ್ಲಿ 12 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಬುಕ್ಕಿಂಗ್ ನಂತರ ಹೊಸ ಕಾರು ವಿತರಣೆ ಪಡೆದುಕೊಳ್ಳಲು ಗ್ರಾಹಕರು ಕನಿಷ್ಠ 2 ವಾರಗಳಿಂದ 24 ವಾರ ಕಾಯಬೇಕಾಗುತ್ತದೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಸೆಗ್ಮೆಂಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿರುವ ನಿಸ್ಸಾನ್ ಕಾರು ಮಾದರಿಯ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌‌ಯುವಿ ಜೊತೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ತನ್ನತ್ತ ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಕಾರು ವಿತರಣೆಯ ಅವಧಿಯು ಬುಕ್ಕಿಂಗ್ ಆಧಾರದ ಏರಿಕೆಯಾಗುತ್ತಲೇ ಇದ್ದು, ಸದ್ಯ ಹೊಸ ಕಾರು ಖರೀದಿಗೆ ಬುಕ್ಕಿಂಗ್ ದಾಖಲಿಸುವ ಗ್ರಾಹಕರು ಉತ್ಪಾದನೆ ಆಧಾರದ ಮೇಲೆ ಕನಿಷ್ಠ 15 ದಿನ ಮತ್ತು ಗರಿಷ್ಠ 6 ತಿಂಗಳು ಕಾಲ ಕಾಯಬೇಕಿದೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಬುಕ್ಕಿಂಗ್ ನಂತರ ಕಾಯುವಿಕೆ ಅವಧಿಯು ವೆರಿಯೆಂಟ್ ಮೇಲೆ ನಿರ್ಧಾರವಾಗಲಿದ್ದು, ಬೆಸ್ ವೆರಿಯೆಂಟ್ ಖರೀದಿಗೆ ಹೆಚ್ಚು ಕಾಯುವಿಕೆ ಅವಧಿಯನ್ನು ನಿರ್ಧರಿಸಿರುವ ಕಂಪನಿಯು ಟಾಪ್ ಎಂಡ್ ಮಾದರಿಯನ್ನು 2 ವಾರದಿಂದ 4 ವಾರಗಳ ಅವಧಿಯಲ್ಲಿ ವಿತರಣೆ ಮಾಡುತ್ತದೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಉತ್ತಮ ಬೆಲೆ ಪೈಪೋಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರು ಕೂಡಾ ಮ್ಯಾಗ್ನೈಟ್ ಕಾರಿನ ಖರೀಗೆ ಮುಂದಾಗುತ್ತಿದ್ದಾರೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿಲ್ಲ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

6 ತಿಂಗಳಿಗೆ ಹೆಚ್ಚಿದ ನಿಸ್ಸಾನ್ ಮ್ಯಾಗ್ನೈಟ್ ಕಾರು ಖರೀದಿಯ ಕಾಯುವಿಕೆ ಅವಧಿ

ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

Article Published On: Saturday, December 19, 2020, 8:45 [IST]
English summary
Nissan Magnite SUV Waiting Period Crosses Over 6 Months. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+