ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ನಿಸ್ಸಾನ್ ಕಂಪನಿಯು ಹೊಸ ಪ್ಯಾಟ್ರೋಲ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ನಿಸ್ಸಾನ್ ಪ್ಯಾಟ್ರೋಲ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ಹೊಸ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ ಎಂದು ಆಟೋಕಾರ್ ಇಂಡಿಯಾ ವರದಿಯನ್ನು ಪ್ರಕಟಿಸಿದೆ. ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿಯನ್ನು ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಮಾರ್ಗದ ಮೂಲಕ ತರಲಾಗುತ್ತದೆ. ವಿದೇಶದ ಮಾರುಕಟ್ಟೆಯಲ್ಲಿ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿಯು ಅನೇಕ ಬಾರಿ ನವೀಕರಣವನ್ನು ನಡೆಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿಯನ್ನು 2019ರಲ್ಲಿ ಕೂಡ ಪ್ರಮುಖ ನವೀಕರಣವನ್ನು ನಡೆಸಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ನಿಸ್ಸಾನ್ ಫೇಸ್ ಲಿಫ್ಟ್ ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿಯು ಈಗಾಗಲೇ ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದರಲ್ಲಿ ಬಲಗೈ ಡ್ರೈವ್ ಆವೃತ್ತಿಯನ್ನು ಕೂಡ ಒಳಗೊಂಡಿದೆ. ಈ ಆವೃತ್ತಿಗಳು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಮಾರಾಟದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ನಿಸ್ಸಾನ್ ಅತ್ಯಂತ ದೊಡ್ಡ ಗಾತ್ರದ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯು 5 ಮೀಟರ್ ಉದ್ದವನ್ನು ಮತ್ತು 2 ಮೀಟರ್ ಅಗಲವನ್ನು ಹೊಂದಿದೆ. ಕ್ಯಾಬಿನ್‍ನಲ್ಲಿ ವಿಶಾಲವಾದ ಸ್ಪೇಸ್ ಅನ್ನು ಹೊಂದಿದೆ. ಎಲ್ಲಾ ಮೂರು ಸಾಲುಗಳಲ್ಲಿ ಪ್ರಯಾಣಿಕರು ಅರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ಈ ನಿಸ್ಸಾನ್ ಎಸ್‍ಯುವಿಯು 5.6-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 405 ಬಿಹೆಚ್‍ಪಿ ಪವರ್ ಮತ್ತು 560 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಯುಎಇ ಮಾರುಕಟ್ಟೆಯಲ್ಲಿ ಸಣ್ಣ 4.0-ಲೀಟರ್ ವಿ 6 ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಹ ಲಭ್ಯವಿದೆ.

MOST READ: ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ 2020ರ ಹೋಂಡಾ ಸಿಟಿ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ಪ್ರೀಮಿಯಂ ಎಸ್‍ಯುವಿಯು ಆಗಿರುವುದರಿಂದ ನಿಸ್ಸಾನ್ ಪ್ಯಾಟ್ರೋಲ್ ಸ್ಟ್ಯಾಂಡರ್ಡ್ ಆಗಿ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಈ ಎಸ್‍ಯುವಿಯಲ್ಲಿ ಹಲವಾರು ಸುರಕ್ಷಾತ ಪೀಚರ್ಸ್‍ಗಳನ್ನು ಕೂಡ ಅಳವಡಿಸಲಾಗಿದೆ.ಈ ನಿಸ್ಸಾನ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.5 ಕೋಟಿ ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು 2020ರ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಎಸ್‍ಯುವಿಯ ಬಿಡುಗಡೆಮಾಡುವುದರಿಂದ ಬ್ರ್ಯಾಂಡ್ ಜನಪ್ರಿಯತೆಯನ್ನು ಹೆಚ್ಚಿಸಲು ಇದು ಸಹಾಯವಾಗುತ್ತದೆ.ಹೊಸ ಎಸ್‍ಯುವಿಯನ್ನು ಬಿಡುಗಡೆ ಮಾಡುವ ಮೂಲಕ ನಿಸ್ಸಾನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸಲು ಸಜ್ಜಾಗುತ್ತಿದೆ.

MOST READ: ಸ್ಕೋಡಾ ಬಿಡುಗಡೆ ಮಾಡಲಿರುವ ಹೊಸ ಎಸ್‍ಯುವಿಗಳಿವು

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ನಿಸ್ಸಾನ್ ಪ್ಯಾಟ್ರೋಲ್ ಎಸ್‍ಯುವಿ

ಪೆಟ್ರೋಲ್ ಎಸ್‍ಯುವಿಯ ಬಿಡುಗಡೆಗೆ ಸಂಬಂಧಿಸಿದಂತೆ ಕಂಪನಿಯಿಂದ ಯವುದೇ ಅಧಿಕೃತ ಮಾಹಿತಿಯು ಪ್ರಕಟಿಸಲಾಗಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಈ ನಿಸ್ಸಾನ್ ಎಸ್‍ಯುವಿಯು ಬಿಡುಗಡೆಯಾದರೆ ಟೊಯೊಟಾ ಲ್ಯಾಂಡ್ ಕ್ರೂಸರ್‍ಗೆ ಪೈಪೋಟಿ ನೀಡುತ್ತದೆ.

Article Published On: Wednesday, April 1, 2020, 11:20 [IST]
English summary
Nissan Patrol SUV India Launch On The Cards?. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+