ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ನಿಸ್ಸಾನ್ ಕಂಪನಿಯು ಯುರೋಪಿಯನ್ ಮಾರುಕಟ್ಟೆಗಳಿಗೆ ತನ್ನ ಹೊಸ ಮೈಕ್ರಾ ಹ್ಯಾಚ್‌ಬ್ಯಾಕ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಗಲ್ಲಿ ಹೊಸ ನಿಸ್ಸಾನ್ ಹ್ಯಾಚ್‌ಬ್ಯಾಕ್‌ ಬಿಡುಗಡೆಯಾಗಲಿದೆ.

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇನ್ನು ಈ ಕಾರಿನಲ್ಲಿ "ಜೆಂಕಿ" ಎಂದು ಕರೆಯಲ್ಪಡುವ ಹೊಸ 16-ಇಂಚಿನ ಡ್ಯುಯಲ್ ಟೋನ್ ವ್ಹೀಲ್ ಗಳು ಎನ್-ಡಿಸೈನ್ ಮತ್ತು ಟೆಕ್ನಾ ಶ್ರೇಣಿಗಳೆರಡರಲ್ಲೂ ಇರುತ್ತದೆ. 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

2021ರ ನಿಸ್ಸಾನ್ ಮೈಕ್ರಾ ಹೊಸ ಎನ್-ಸ್ಪೋರ್ಟ್ ವೆರಿಯೆಂಟ್ ನಲ್ಲಿ ಲಭ್ಯವಿರುತ್ತದೆ. ನಿಸ್ಸಾನ್ ಮೈಕ್ರಾ ಎನ್-ಸ್ಪೋರ್ಟ್ ವೆರಿಯೆಂಟ್ ಅಗ್ರೇಸಿವ್ ವಿನ್ಯಾಸ ಅಂಶಗಳನ್ನು ಹೊಂದಿರುತ್ತದೆ. ಮೈಕ್ರಾ ಎನ್-ಸ್ಪೋರ್ಟ್ ವೆರಿಯೆಂಟ್ ನಲ್ಲಿ ಗ್ಲೋಸ್ ಬ್ಲ್ಯಾಕ್ ಫ್ರಂಟ್, ರಿಯರ್ ಮತ್ತು ಸೈಡ್ ಫಿನಿಶರ್ ಮತ್ತು ಹೊಸ ಬ್ಲ್ಯಾಕ್ ಮಿರರ್ ಕ್ಯಾಪ್ ಗಳನ್ನು ಪಡೆಯುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ಮೈಕ್ರಾ ಎನ್-ಸ್ಪೋರ್ಟ್ ವೆರಿಯೆಂಟ್ ನಲ್ಲಿ 17-ಇಂಚಿನ ಬ್ಲ್ಯಾಕ್ ಪರ್ಸೊ ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿದೆ. ಎನ್-ಸ್ಪೋರ್ಟ್‌ನಲ್ಲಿ ಫಾಗ್ ಲ್ಯಾಂಪ್ ಗಳು ಮತು ಹೆಡ್‌ಲ್ಯಾಂಪ್‌ಗಳು ಪೂರ್ಣ ಎಲ್ಇಡಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ.

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ಮೈಕ್ರಾ ಎನ್-ಸ್ಪೋರ್ಟ್ ವೆರಿಯೆಂಟ್ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿರಲಿದೆ. ಎನ್-ಸ್ಪೋರ್ಟ್ ವೆರಿಯೆಂಟ್ ಡ್ಯಾಶ್ ಬೋರ್ಡ್ ಮತ್ತು ಸೀಟುಗಳನ್ನು ಅಳವಡಿಸಲಾಗಿದೆ. ದೀರ್ಘ ಪ್ರಯಾಣದ ಚಾಲಕರ ಆಯಾಸ ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

2021ರ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಸುಧಾರಿತ ಚಾಲನ ವಿಧಾನ ಮತ್ತು ಕಾರಿನಲ್ಲಿ ಮನರಂಜನಾ ತಂತ್ರಜ್ಞಾನದ ಫೀಚರ್ ಗಳನ್ನು ಹೊಂದಿರಲಿವೆ. 2021ರ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಬ್ಲೈಂಡ್ ಸ್ಪಾಟ್ ಅಲರ್ಟ್ ನೊಂದಿಗೆ ಇಂಟೆಲಿಜೆಂಟ್ ಅರೌಂಡ್ ವ್ಯೂ ಮಾನಿಟರ್ ಕ್ಯಾಮೆರಾ ಸಿಸ್ಟಂ ಅನ್ನು ಒಳಗೊಂಡಿದೆ.

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ಇನ್ನು ಹೊಸ ಸ್ಸಾನ್ ಮೈಕ್ರಾ ಕಾರಿನಲ್ಲಿ ಬೋಸ್ ಪರ್ಸನಲ್ ಆಡಿಯೋ, ಟಾಮ್‌ಟಾಮ್ ನ್ಯಾವಿಗೇಷನ್‌ನೊಂದಿಗೆ ನಿಸ್ಸಾನ್ ಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಿರಿ ವಾಯ್ಸ್ ಗ್ರಹಿಸುವುಕೆಯೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಆಂಡ್ರಾಯ್ಡ್ ಆಟೋವನ್ನು ಸಹ ಪಡೆಯುತ್ತದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ಹೊಸ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಸುಧಾರಿತ 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ ಅನ್ನು ಯುರೋ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್ "ವರ್ಧಿತ ಟಾರ್ಕ್ ಡೆಲಿವರಿ ಕರ್ವ್ ಕಡಿಮೆ ಗೇರ್ ಬದಲಾವಣೆಗಳೊಂದಿಗೆ ಹೆಚ್ಚಿನ ಚಾಲನಾ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ನಿಸ್ಸಾನ್ ಹೇಳಿಕೊಂಡಿದೆ.

ಅನಾವರಣವಾಯ್ತು 2021ರ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಕಾರು

ಹೊಸ ಮೈಕ್ರಾ ಕಾರಿನಲ್ಲಿ ಹಿಲ್ ಸ್ಟಾರ್ಟ್ ಅಸಿಸ್ಟೆನ್ಸ್, ಇಂಟೆಲಿಜೆಂಟ್ ರೈಡ್ ಕಂಟ್ರೋಲ್ ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿ ಸುಧಾರಿತ ನಿರ್ವಹಣೆಗಾಗಿ ಇಂಟೆಲಿಜೆಂಟ್ ಟ್ರೇಸ್ ಕಂಟ್ರೋಲ್ ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿರಲಿದೆ. ಇದರೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಲ್ಲಿ ಹೈ ಭೀಮ್ ಅಸಿಸ್ಟ್, ಇಂಟೆಲಿಜೆಂಟ್ ಲೇನ್ ಇಂಟರ್ವೆಷನ್ ಮತ್ತು ಫಾರ್ವರ್ಡ್ ಎಮರ್ಜನ್ಸಿ ಬ್ರೇಕಿಂಗ್ ಅನ್ನು ಸಹ ಹೊಂದಿರಲಿದೆ.

Most Read Articles

Kannada
English summary
2021 Nissan Micra Facelift Unveiled. Read In Kannada.
Story first published: Thursday, November 19, 2020, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X