ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಗ್ರಾಹಕರು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ‌ಫೀಚರ್ಸ್‌ಗಳೊಂದಿಗೆ ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಆಕ್ಸೆಸರಿಸ್ ಪ್ಯಾಕೇಜ್‌ ಮೂಲಕ ಅಳವಡಿಸಿಕೊಳ್ಳಬಹುದು.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ‌ಸೆಗ್ಮೆಂಟ್‌ನಲ್ಲಿಯೇ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ಫೀಚರ್ಸ್‌ಗಳನ್ನು ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ ಖರೀದಿ ಮಾಡಬಹುದಾಗಿದೆ. ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ ಹೊಂದಿರುವ ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡ ಆಕ್ಸೆಸರಿಸ್ ನೀಡಲಾಗಿದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಸೆನ್ಷಿಯಲ್ ಪ್ಯಾಕ್, ಪ್ರೀಮಿಯಂ ಪ್ಯಾಕ್, ಸ್ಟೈಲ್ ಪ್ಯಾಕ್, ಅಲಾಯ್ ವೀಲ್ಹ್ ಪ್ಯಾಕ್ ಮತ್ತು ವಿವಿಧ ಆಕ್ಸೆಸರಿಸ್ ಒಳಗೊಂಡ ಟೆಕ್ ಪ್ಯಾಕ್ ಹೊಂದಿದ್ದು, ಹೈ ಎಂಡ್ ಪ್ಯಾಕೇಜ್ ಸುಮಾರು ರೂ. 38,698 ದರ ಹೊಂದಿದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಕಾರು ಮಾದರಿಯಾಗಿ ಮತ್ತಷ್ಟು ಪ್ರೀಮಿಯಂ ಲುಕ್ ನೀಡಬಹುದಾಗಿದ್ದು, ಹೊಸ ಮ್ಯಾಗ್ನೈಟ್ ಕಾರಿನ ಮೂಲಕ ನಿಸ್ಸಾನ್ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಗ್ನೈಟ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದೆ. ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿಲ್ಲ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಈ ಮೂಲಕ ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮ್ಯಾಗ್ನೈಟ್ ಕಾರಿನ ಟಾಪ್ ಎಂಡ್ ಟರ್ಬೋ ಪೆಟ್ರೋಲ್ ಮಾದರಿಗಾಗಿ ಹೆಚ್ಚಿನ ಮಟ್ಟದ ಬುಕ್ಕಿಂಗ್ ಸಲ್ಲಿಕೆಯಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮ್ಯಾಗ್ನೈಟ್ ಕಾರು ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ನಿಸ್ಸಾನ್

ಮ್ಯಾಗ್ನೈಟ್ ಹೊಸ ಕಾರು ಮಾದರಿಯು ಕೇವಲ 15 ದಿನಗಳಲ್ಲಿ ಬರೋಬ್ಬರಿ 10 ಸಾವಿರ ಬುಕ್ಕಿಂಗ್ಸ್ ಪಡೆದುಕೊಳ್ಳುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದೆ.

Article Published On: Thursday, December 17, 2020, 18:47 [IST]
English summary
Nissan Revealed Official Accessories For Magnite Compact SUV. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+