ಮುಂದಿನ ನಾಲ್ಕು ವರ್ಷಗಳಲ್ಲಿ ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಜಪಾನ್ ಕಾರು ಉತ್ಪಾದನಾ ಕಂಪನಿಯಾಗಿರುವ ನಿಸ್ಸಾನ್ ತನ್ನ ಭವಿಷ್ಯ ಯೋಜನೆಗಳನ್ನು ಬಹಿರಂಗಪಡಿಸಿದ್ದು, ಹೊಸ ಕಾರು ಮಾದರಿಗಳ ಬಿಡುಗಡೆಗಾಗಿ ಭಾರತ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಕಾರುಗಳ ಅಭಿವೃದ್ದಿ ತಂತ್ರಜ್ಞಾನದಲ್ಲಿ ಹಲವು ಹೊಸ ಆಯಾಮಗಳನ್ನು ಪರಿಚಯಿಸಿರುವ ನಿಸ್ಸಾನ್ ಕಂಪನಿಯು ಗ್ರಾಹಕರ ಆದ್ಯತೆ ಮೇರೆಗೆ ಹೊಸ ವಾಹನಗಳ ಉತ್ಪಾದನೆ ನಿರಂತರ ಬದಲಾವಣೆ ತರುವ ಮೂಲಕ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದೆ. ಹೀಗಾಗಿ ಯುರೋಪ್ ಮಾರುಕಟ್ಟೆಗಳಲ್ಲಿನ ಯಶಸ್ವಿಯಾಗಿರುವ ಹಲವು ಕಾರು ಮಾದರಿಗಳನ್ನು ಇದೀಗ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತ(ಎಎಂಐ)ದಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಎಂಟು ಹೊಸ ಮಾದರಿಯ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಯುರೋಪ್ ಮಾರುಕಟ್ಟೆಯಲ್ಲಿ ಹಲವಾರು ಎಸ್‌ಯುವಿ ಕಾರುಗಳ ಮಾರಾಟವನ್ನು ಹೊಂದಿರುವ ನಿಸ್ಸಾನ್ ಕಂಪನಿಯು ಎಎಂಐ ವಲಯದಲ್ಲೂ ಹೊಸ ಎಸ್‌ಯುವಿ ಕಾರುಗಳ ಮೂಲಕ ಎಸ್‌ಯುವಿ ಕಾರು ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಯಾಗಲಿರುವ ಹೊಸ ಎಸ್‌ಯುವಿ ಕಾರುಗಳಲ್ಲಿ ಕೆಲವು ಮಧ್ಯಮ ಕ್ರಮಾಂಕದಲ್ಲಿ ಬಿಡುಗಡೆಯಾಗಲಿದ್ದರೆ ಇನ್ನು ಕೆಲವು ಕಾರು ಮಾದರಿಗಳು ಐಷಾರಾಮಿ ಎಸ್‌ಯುವಿ ಕಾರು ಮಾದರಿಗಳಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಸದ್ಯ ಭಾರತದಲ್ಲಿ ಬಿ-ಸೆಗ್ಮೆಂಟ್ ಮತ್ತು ಸಿ-ಸೆಗ್ಮೆಂಟ್‌ನಲ್ಲಿ ಹಲವು ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳು ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿದ್ದು, ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಆಧಾರ ಮೇಲೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಇದೇ ಆಧಾರದ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿರುವ ಜ್ಯೂಕೆ, ಪ್ಯಾಟ್ರೊಲ್ ಸೇರಿದಂತೆ ವಿವಿಧ ಎಸ್‌ಯುವಿ ಮಾದರಿಗಳ ಆಧಾರ ಮೇಲೆ ಆಫ್ರಿಕಾ ಮತ್ತು ಭಾರತದಲ್ಲಿ ಹೊಸ ಕಾರುಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಕಾರುಗಳ ಬಿಡುಗಡೆಗೂ ಮುನ್ನ ನಿಸ್ಸಾನ್ ಕಂಪನಿಯು ಭಾರತದಲ್ಲಿರುವ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಹೂಡಿಕೆ ಮಾಡಲಿದ್ದು, ತಂತ್ರಜ್ಞಾನ ಸಹಕಾರ, ಕಾರು ಮಾರಾಟಕ್ಕೆ ಪರಸ್ಪರ ಸಹಕರಿಸುವುದಕ್ಕಾಗಿ ಭಾರತದಲ್ಲಿ ರೆನಾಲ್ಟ್ ಜೊತೆಗೂ ಸಹಭಾಗಿತ್ವದ ಯೋಜನೆಗೆ ಚಾಲನೆ ನೀಡಿದೆ.

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಕಾರುಗಳ ಮುಂಬರುವ 2021ಕ್ಕೆ ಅಧಿಕೃತವಾಗಿ ರಸ್ತೆಗಿಳಿಯಲಿದ್ದು, ಸದ್ಯ ನಿಸ್ಸಾನ್ ಕಂಪನಿಯು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯಾದ ಮಾಗ್ನೆಟ್ ಕಾರು ಮಾದರಿಯನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆಯ ಯೋಜನೆಯಲ್ಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಎಂಟು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ ನಿಸ್ಸಾನ್

ಕಿಕ್ಸ್ ಕಾರು ಮಾದರಿಗಿಂತಲೂ ಅತ್ಯುತ್ತಮ ಹೊಸ ವಿನ್ಯಾಸವನ್ನು ಹೊಂದಿರುವ ಹೊಸ ಕಾರು ರೆನಾಲ್ಟ್ ಜೊತೆಗೂಡಿ ಅಭಿವೃದ್ದಿಗೊಳಿಸಿಲಾದ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.50 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
Nissan Reveals Four-Year Strategy for AMI Region. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X