ಹೊಸ ಎಸ್‍ಯುವಿಯ ಟೀಸರ್ ಬಿಡುಗಡೆಗೊಳಿಸಿದ ನಿಸ್ಸಾನ್
ಜಪಾನಿನ ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಎಸ್‍ಯುವಿಗಳು ಹೆಚ್ಚಾಗಿ ಬಿಡುಗಡೆಗೊಳಿಸಲು ಮುಂದಾಗಿದೆ. ಇದೀಗ ನಿಸ್ಸಾನ್ ಕಂಪನಿಯು ಕೂಡ ಭಾರತದ ಮಾರಕಟ್ಟೆಯಲ್ಲಿ ಉತ್ತಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ಇದರ ಭಾಗವಾಗಿ ನಿಸ್ಸಾನ್ ಇಂಡಿಯಾ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ನಿಸ್ಸಾನ್ ಹೊಸ ಸಬ್ 4 ಮೀಟರ್ ಬಿ-ಸೆಗ್‍ಮೆಂಟ್ ಎಸ್‍ಯುವಿಯ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಈ ಎಸ್‍ಯುವಿಯ ಬೆಲೆ ಮತ್ತು ಇತರ ವಿಷಯಗಳು ನಿಸ್ಸಾನ್ ಕಿಕ್ ಕೆಳಗಿನ ಸ್ಥಾನದಲ್ಲಿರುತ್ತದೆ. ಹೊಸ ನಿಸ್ಸಾನ್ ಎಸ್‍ಯುವಿಯು ಸಿಎಂಎಫ್-ಎ ಪ್ಲಾಟ್‍ಫಾರ್ಮ್ ಅನ್ನು ಆಧರಿಸಬಹುದು.

ಈ ಎಸ್‍ಯುವಿ ಮುಂಬರುವ ರೆನಾಲ್ಟ್ ಸಬ್-4 ಮೀಟರ್ ಹೆಚ್‍ಬಿಸಿ ಕಾಂಪ್ಯಾಕ್ಟ್ ಎಸ್‍ಯುವಿಯ ಇದೇ ಪ್ಲಾಟ್‍ಫಾರ್ಮ್ ಅನ್ನು ಹೊಂದಿದೆ. ನಿಸ್ಸಾನ್ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಯ ಕಾನ್ಸೆಪ್ಟ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸುವ ಸಾಧ್ಯತೆಗಳಿದೆ.

ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಿರುವುದರಿಂದ ಡೀಸೆಲ್ ಕಾರುಗಳಿಂದ ದೂರ ಉಳಿಯಬಹುದು. ಹೆಚ್ಚಾಗಿ ಪೆಟ್ರೋಲ್ ಆವೃತ್ತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ರೆನಾಲ್ಟ್ ಮತ್ತು ನಿಸ್ಸಾನ್ ಎರಡು ದೊಡ್ಡ ವಾಹನ ಉತ್ಪಾದನ ಕಂಪನಿಗಳು ಸಹಭಾಗಿತ್ವದಲ್ಲಿದೆ. ಈ ಎರಡೂ ಕಂಪನಿಗಳು ಡೀಸೆಲ್ ಆವೃತ್ತಿಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

ಹೊಸ ಸಬ್-4 ಮೀಟರ್ ನಿಸ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಟರ್ಬೋಚಾರ್ಜ್ಡ್ 1 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಶೀಘ್ರದಲ್ಲೇ ರೆನಾಲ್ಟ್ ಟ್ರೈಬರ್ ಕಾಂಪ್ಯಾಕ್ಟ್ ಎಂಪಿವಿಯಲ್ಲಿ ಕೂಡ ಅಳವಡಿಸಲಿದೆ. ಇದೇ ಎಂಜಿನ್ ಅನ್ನು ನಿಸ್ಸಾನ್ ಹೊಸ ಎಸ್‍ಯುವಿಗೆ ಅಳವಡಿಸುವ ಸಾಧ್ಯತೆಗಳಿದೆ.

ಈ ಎಂಜಿನ್ ಸುಮಾರು 80-100 ಬಿಹೆಚ್‍ಪಿ ಪವರ್ ಮತ್ತು 150-200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಎಂಜಿನ್‍ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.

ಈ ಎಸ್‍ಯುವಿಯಲ್ಲಿ ಫ್ರಂಟ್ ಗ್ರಿಲ್‍ನಂತಹ ನಿಸ್ಸಾನ್ ಸಿಗ್ನೇಚರ್ ಅಂಶಗಳಿಂದ ಆಕರ್ಷಕ ಲುಕ್ ಅನ್ನು ಹೊಂದಿರಬಹುದು. ಈ ಎಸ್‍ಯುವಿಯಲ್ಲಿ 16 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಿದೆ. ಈ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.5 ಲಕ್ಷದಿಂದ ರೂ.9 ಲಕ್ಷಗಳಾಗಿರಬಹುದು.

ಟೀಸರ್ ಚಿತ್ರದಲ್ಲಿ ನಿಸ್ಸಾನ್ ಡ್ಯುಯಲ್ ಟೋನ್ ವಿನ್ಯಾಸವು ಕಿಕ್ಸ್ ನಂತೆ ಅಳವಡಿಸಿರುವುದು ಕಂಡುಬಂದಿದೆ. ಈ ಎಸ್‍ಯುವಿಯ ಸೈಡ್ ಪ್ರೊಫೈಲ್ ವಿಂಡ್‍ಶೀಲ್ಡ್, ರೂಫ್‍ಲೈನ್, ಸ್ಟೆಪ್‍ಬ್ಯಾಕ್ ಸ್ಲಿಕ್ ಹೆಡ್‍ಲ್ಯಾಂಪ್, ಎಲ್‍ಇಡಿ ಟೇಲ್ ಲ್ಯಾಂಪ್‍ಗಳು, ಮಸ್ಕ್ಯುಲರ್ ಪೆಂಡರ್‍ಗಳು, ಸ್ಪೋರ್ಟಿ ಕ್ಯಾರೆಕ್ಟರ್ ಲೈನ್ಸ್ ಮತ್ತು ಕ್ರೀಸ್‍ಗಳು, ಕ್ರೋಮ್ಡ್ ವಿಂಡೋ ಲೈನ್, ಡಾರ್ಕ್ ಥೀಮ್‍ನ ಮಿರರ್ ಮತ್ತು ಮುಂತಾದವುಗಳನ್ನುಅಳವಡಿಸಲಾಗಿದೆ.

ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರಿಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications