ಒಕಾಯಾ ಕಂಪನಿ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ದೇಶಾದ್ಯಂತ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ತೈಲ ಬೆಲೆಗಳ ಏರಿಕೆಯಿಂದ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಆದರೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಹೊಸ ಇವಿ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಬ್ಯಾಟರಿ ರೇಂಜ್ ಸಮಸ್ಯೆ ಬಗೆಹರಿಸಲು ತ್ವರಿತಗತಿಯ ಪಬ್ಲಿಕ್ ಚಾರ್ಜಿಂಗ್ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣವು ಕಾರ್ಯವು ಅತಿಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆಗೆ ಚಾಲನೆ ನೀಡಿರುವ ಒಕಾಯಾ ಕಂಪನಿಯು ಭಾರತದಲ್ಲಿ ತ್ವರಿತಗತಿಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಸಿದ್ದತೆ ನಡೆಸಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಜಪಾನ್ ಮೂಲದ ಬ್ಯಾಟರಿ ಉತ್ಪಾದನಾ ಕಂಪನಿಯಾಗಿರುವ ಒಕಾಯಾ ಭಾರತದಲ್ಲಿ ಈಗಾಗಲೇ ಉದ್ಯಮ ಕಾರ್ಯಾಚರಣೆ ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕೆ ಪೂರಕವಾಗಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಯೋಜನೆ ಹೊಂದಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಇದಕ್ಕಾಗಿ ದೆಹಲಿ ಮೂಲದ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿ ಜೊತೆ ಕೈಜೋಡಿಸಿರುವ ಒಕಾಯಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುತ್ತಿದ್ದು, ಫ್ಲಿಟ್ ಸರ್ವಿಸ್ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಫ್ಲಿಟ್ ಸರ್ವಿಸ್‌ನಲ್ಲಿ ರೆಂಟಲ್ ಕಾರುಗಳು, ಕ್ಯಾಬ್, ಇ-ರಿಕ್ಷಾಗಳಿಗೆ ತ್ವರಿತ ಗತಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡುವುದು ಹೊಸ ಯೋಜನೆಯ ಪ್ರಮಖ ಉದ್ದೇಶವಾಗಿದ್ದು, ಶೀಘ್ರದಲ್ಲೇ ಹೊಸ ಚಾರ್ಜಿಂಗ್ ಸ್ಟೆಷನ್‌ಗಳಿಗೆ ಚಾಲನೆ ನೀಡಲಿವೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಈಗಾಗಲೇ ಸ್ವತಂತ್ರವಾಗಿ ದೆಹಲಿ ಮತ್ತು ಗುರ್‌ಗ್ರಾಮ್‌ಗಳಲ್ಲಿ ಡಿಸಿ ಮತ್ತು ಎಸಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಮೂಲಕ ಹೊಸ ಬದಲಾವಣೆಗೆ ಕಾರಣವಾಗಿದ್ದು, ಇದೀಗ ಒಕಾಯಾ ಜೊತೆಗೂಡಿ ದೇಶದ ಪ್ರಮುಖ ನಗರಗಳಿಗೂ ಚಾರ್ಜಿಂಗ್ ಸ್ಟೆಷನ್‌ಗಳನ್ನು ವಿಸ್ತರಣೆ ಮಾಡುತ್ತಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ವಾತಾವರಣವಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕಂಪನಿಗಳು ಈ ನಿಟ್ಟಿನಲ್ಲಿ ಹೊಸ ಯೋಜನೆಯೊಂದಿಗೆ ಚಾರ್ಜಿಂಗ್ ಸ್ಟೆಷನ್‌ಗಳತ್ತ ಹೆಚ್ಚು ಗಮನಹರಿಸುತ್ತಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಆಟೋ ಉತ್ಪಾದನಾ ವಲಯಕ್ಕೆ ನೀಡಲಾಗಿರುವ ವಿನಾಯ್ತಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ನೀಡಲಾಗುವ ಫೇಮ್-2 ಯೋಜನೆಯ ಸಬ್ಸಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

2019-20ರ ಆರ್ಥಿಕ ವರ್ಷದ ಫೇಮ್-2 ಸಬ್ಸಡಿ ಅವಧಿಯು ಮಾರ್ಚ್‌ಗೆ ಅಂತ್ಯಗೊಳ್ಳಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸಿದ್ದರಿಂ ಸಬ್ಸಡಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಒಕಾಯಾ ಜೊತೆಗೂಡಿ ಇವಿ ಚಾರ್ಜಿಂಗ್ ಸ್ಟೆಷನ್ ತೆರಲಿದೆ ಬ್ಲ್ಯೂಸ್ಮಾರ್ಟ್

ಹೊಸ ಸುತ್ತೋಲೆ ಪ್ರಕಾರ, ವಿಸ್ತರಣೆಗೊಂಡ ಫೇಮ್-2 ಸಬ್ಸಡಿಯು ಜುಲೈ 1ರಿಂದ ಸೆಪ್ಟೆಂಬರ್ 30ರ ತನಕ ಅನ್ವಯವಾಗಲಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡುವ ಆಟೋ ಕಂಪನಿಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೂ ಈ ಹೊಸ ಯೋಜನೆ ಅಡಿ ಸಬ್ಸಡಿ ಲಭ್ಯವಿರುತ್ತದೆ.

Most Read Articles

Kannada
English summary
Okaya & BluSmart Electic Mobility Partner To Install Electric Charging Stations. Read in Kannada.
Story first published: Sunday, August 30, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X