ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ದೇಶಿಯ ವಿಮಾನಯಾನ ಸಂಚಾರ ಪುನರಾರಂಭವಾದ ನಂತರ, ಓಲಾ ಕಂಪನಿಯು ದೇಶಾದ್ಯಂತವಿರುವ 22 ವಿಮಾನ ನಿಲ್ದಾಣಗಳಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಿದೆ. ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಓಲಾ ಕ್ಯಾಬ್ ಸೇವೆಯನ್ನು ಪುನರಾರಂಭಿಸಲಾಗಿದೆ. ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಕ್ಯಾಬ್‌ ಸೇವೆ ನೀಡುತ್ತಿರುವುದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಓಲಾ ಹೇಳಿದೆ.

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಇತರ ವಿಮಾನ ನಿಲ್ದಾಣಗಳನ್ನು ತೆರೆದ ನಂತರ ಅಲ್ಲಿಯೂ ಸೇವೆಗಳನ್ನು ಆರಂಭಿಸುವುದಾಗಿ ಓಲಾ ಹೇಳಿದೆ. ಸದ್ಯಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಅಮೃತಸರ, ಭೋಪಾಲ್, ಭುವನೇಶ್ವರ, ಚಂಡೀಗಢ, ಕೊಯಮತ್ತೂರು, ಡೆಹ್ರಾಡೂನ್, ಗುವಾಹಟಿ, ಇಂದೋರ್, ಜೈಪುರ, ಕೊಚ್ಚಿ, ಮಧುರೈ, ಮಂಗಳೂರು, ಪಾಟ್ನಾ, ರೈಸಾಪುರ ವಿಮಾನ ನಿಲ್ದಾಣಗಳಲ್ಲಿ ಓಲಾ ಕ್ಯಾಬ್‌ ಸೇವೆಗಳನ್ನು ಆರಂಭಿಸಲಾಗಿದೆ.

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಬೆಂಗಳೂರು, ಮುಂಬೈ, ದೆಹಲಿ ಹಾಗೂ ಹೈದರಾಬಾದ್‌ಗಳಲ್ಲಿ ಚಾಲಕರ ಟೆಂಪರೇಚರ್ ಪರಿಶೀಲಿಸಲು ಹಾಗೂ ಪ್ರತಿ ಪಿಕ್ ಅಪ್‌ಗೆ ಮುಂಚೆ ಕಾರುಗಳನ್ನು ಪರೀಕ್ಷಿಸಲು ವಿಶೇಷವಾಗಿ ತರಬೇತಿ ಪಡೆದಿರುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಓಲಾ ಕಂಪನಿಯು ಪ್ರತಿ ಟ್ರಿಪ್‌ಗೆ ಮೊದಲು ನಿಯಮಿತವಾಗಿ ಡ್ರೈವರ್‌ಗಳ ದೈಹಿಕ ಪರೀಕ್ಷೆಯನ್ನು ನಡೆಸುತ್ತಿರುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು. ನಾಗರಿಕ ವಿಮಾನಯಾನ ಇಲಾಖೆಯ ಆದೇಶದ ಮೇರೆಗೆ ದೇಶಿಯ ವಿಮಾನಯಾನ ಸೇವೆಗಳನ್ನು ಮೇ 25ರಿಂದ ಪುನರಾರಂಭಿಸಲಾಗಿದೆ.

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಕರೋನಾ ವೈರಸ್‌ನಿಂದ ಉಂಟಾದ ನಷ್ಟವನ್ನು ಕಡಿಮೆಗೊಳಿಸಲು ಓಲಾ ಕಂಪನಿಯು 1,400 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಲಾಕ್‌ಡೌನ್‌ನಿಂದಾಗಿ ಓಲಾ ಕಂಪನಿಯ ವ್ಯವಹಾರವು 95%ನಷ್ಟು ಕುಸಿದಿದೆ ಎಂದು ಕಂಪನಿ ಹೇಳಿದೆ. ಇದರಿಂದಾಗಿ ಕಂಪನಿಯ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಕರೋನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಭಾರತವೂ ಸೇರಿದಂತೆ ವಿಶ್ವದಾದ್ಯಂತವಿರುವ ಲಕ್ಷಾಂತರ ಕ್ಯಾಬ್ ಚಾಲಕರು ಹಾಗೂ ಅವರ ಕುಟುಂಬಗಳ ಮೇಲೆ ಹೊಡೆತ ಬಿದ್ದಿದೆ. ಕಂಪನಿಯು ಅನೇಕ ಉದ್ಯೋಗಿಗಳ ವೇತನವನ್ನು ಕಡಿತಗೊಳಿಸಿದ್ದು, ವೆಚ್ಚವನ್ನು ಕಡಿತಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಪುನರಾರಂಭಿಸಿದ ಓಲಾ

ಇತ್ತೀಚೆಗಷ್ಟೇ ಉಬರ್ ಕಂಪನಿಯು ಭಾರತದಲ್ಲಿ 600 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಿಶ್ವಾದ್ಯಂತ 6,700 ಉದ್ಯೋಗಿಗಳನ್ನು ಉಬರ್ ವಜಾಗೊಳಿಸಿದೆ. ಲಾಕ್‌ಡೌನ್ ಕಾರಣದಿಂದಾಗಿ ಕ್ಯಾಬ್ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಿದ ಜನರು ಸೋಂಕು ಹರಡಬಹುದೆಂಬ ಭಯದಿಂದ ಕ್ಯಾಬ್‌ ಹಾಗೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿಲ್ಲ.

Most Read Articles

Kannada
English summary
Ola cabs resume Airport pickup drop services across India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X