ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಕರೋನಾ ಮಹಾಮಾರಿಯು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಲವಾರು ಸೇವೆಗಳನ್ನು ಕುಂಠಿತಗೊಳಿಸಿದೆ. ಈಗ ಭಾರತದಲ್ಲಿ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಓಲಾ ಕಂಪನಿಗೂ ಕರೋನಾ ವೈರಸ್ ನ ಬಿಸಿ ತಟ್ಟಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಓಲಾ ಕಂಪನಿಯ ವಾಹನಗಳು ದೇಶದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಓಲಾ ಕಂಪನಿಯು ಭಾರತದಲ್ಲಿ ಬಹು-ಹಂತದ ವಾಹನ ಸೇವೆಯನ್ನು ನೀಡುತ್ತಿದೆ.ಶೇರ್ ರೈಡ್ ಓಲಾ ಕಂಪನಿಯು ಜಾರಿಗೆ ತಂದ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ. ಇದರಲ್ಲಿ ಒಂದಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಹುದಾಗಿದೆ. ಆದರೆ ಈ ಸೇವೆಯಲ್ಲಿ ಆಟೋದಂತೆ ಜನರು ಕಿಕ್ಕಿರಿದು ತುಂಬುವುದಿಲ್ಲ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಓಲಾ ಕಂಪನಿಯು ತಿಳಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕರೋನಾ ವೈರಸ್. ಈ ಸೇವೆಯಿಂದಾಗಿ ಕರೋನಾ ಸೋಂಕು ಹರಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶೇರ್ ರೈಡ್ ಅನ್ನು ಸ್ಥಗಿತಗೊಳಿಸಲಾಗಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಕೋವಿಡ್ -19 ಎಂದು ಕರೆಯಲ್ಪಡುವ ಈ ಮಾರಕ ವೈರಸ್‌ನ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರೋನಾ ವೈರಸ್‌ನಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಇದುವರೆಗೂ 10 ಸಾವಿರಕ್ಕೂ ಹೆಚ್ಚು ಜನ ಕರೋನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಈ ಮಹಾಮಾರಿಯನ್ನು ತಡೆಗಟ್ಟಲು ವಿಶ್ವದ ಎಲ್ಲಾ ದೇಶಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಇದಕ್ಕಾಗಿ ಸಾರ್ವಜನಿಕ ಸಭೆಗಳನ್ನು ತಪ್ಪಿಸಲಾಗುತ್ತಿದೆ. ಪ್ರಮುಖ ಸಾರ್ವಜನಿಕ ಸ್ಥಳಗಳಾದ ದೇವಾಲಯ, ಚಿತ್ರಮಂದಿರ, ಅಂಗಡಿ ಹಾಗೂ ಶಾಪಿಂಗ್ ಮಾಲ್‌ಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಓಲಾ ಕಂಪನಿಯು ಸಹ ಕರೋನಾ ವೈರಸ್ ಅನ್ನು ಹರಡದಂತೆ ತಡೆಗಟ್ಟಲು ತನ್ನ ಶೇರ್ ಸೇವೆಯನ್ನು ಸ್ಥಗಿತಗೊಳಿಸಿದೆ. ಓಲಾ ಕಂಪನಿಯ ಈ ಸೇವೆಯು ಪ್ರಯಾಣದ ಶುಲ್ಕವನ್ನು ಕಡಿಮೆಗೊಳಿಸುತ್ತದೆ. ಒಂದೇ ಸ್ಥಳಕ್ಕೆ ಪ್ರಯಾಣಿಸುವ ಹಲವು ಜನರು ಈ ಸೇವೆಯನ್ನು ಪಡೆಯಬಹುದು. ಹೆಚ್ಚಿನ ಹಣವನ್ನು ಪಡೆಯುವ ಬದಲು ಅರ್ಧದಷ್ಟು ಶುಲ್ಕವನ್ನು ಪಾವತಿಸಬಹುದು.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಈ ಸೇವೆಯು ಭಾರತೀಯ ಗ್ರಾಹಕರಲ್ಲಿ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿತ್ತು. ಆದರೆ ಕರೋನಾ ಎಂಬ ಮಹಾಮಾರಿ ಈ ಸೇವೆಗೆ ತಡೆಯೊಡ್ಡಿದೆ. ಕರೋನಾ ವೈರಸ್ ನಿಂದಾಗಿ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಇದರಿಂದಾಗಿ ಇವುಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಚಾಲಕರಿಗೆ ಆತಂಕ ಎದುರಾಗಿದೆ. ಮುಂದೇನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ. ಕರೋನಾದ ಭಯ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮನೆ ಮಾಡಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಹೊರಗಿನಿಂದ ಬಂದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು. ಸ್ನಾನ ಮಾಡಿದರೆ ಇನ್ನೂ ಒಳ್ಳೆಯದು. ಉಸಿರಾಟದ ಮೂಲಕವೂ ಕರೋನಾ ವೈರಸ್ ಹರಡುವ ಸಾಧ್ಯತೆಗಳಿರುವುದರಿಂದ ಮಾಸ್ಕ್ ಗಳಿಂದ ಮೂಗು ಹಾಗೂ ಬಾಯಿಯನ್ನು ಮುಚ್ಚುವ ಅಗತ್ಯವಿದೆ.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಸ್ವಚ್ವತೆಗೆ ಆದ್ಯತೆ ನಿಡುವುದರಿಂದ ಕರೋನಾ ವೈರಸ್ ಹರಡದಂತೆ ತಡೆಗಟ್ಟಬಹುದು. ನಾವು ವಾಸವಿರುವ ಜಾಗವನ್ನು ಸ್ವಚ್ವವಾಗಿಸುವುದರಿಂದ ಇತರರು ಸೋಂಕಿಗೆ ಒಳಗಾಗುವುದನ್ನು ತಡೆಗಟ್ಟಬಹುದು.

ಶೇರ್ ರೈಡ್ ಸೇವೆಯನ್ನು ಸ್ಥಗಿತಗೊಳಿಸಿದ ಓಲಾ

ಎಲ್ಲಕ್ಕಿಂತ ಮುಖ್ಯವಾಗಿ, ಹೊರಗೆ ಹೋಗುವುದನ್ನು ತಪ್ಪಿಸುವುದು ಅವಶ್ಯವಾಗಿದೆ. ಈ ಕಾರಣದಿಂದಾಗಿ, ಓಲಾದಂತಹ ಕಂಪನಿಗಳು ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ. ಕರೋನಾ ವೈರಸ್ ಹರಡದಂತೆ ತಡೆಗಟ್ಟಲು ಓಲಾ ಕಂಪನಿಯು ತೆಗೆದುಕೊಂಡಿರುವ ಈ ನಿರ್ಧಾರ ಶ್ಲಾಘನೀಯ.

ಮೂಲ: ಇಟಿ ಆಟೋ

Most Read Articles

Kannada
English summary
Ola call taxi temporarily stops shared ride. Read in Kannada.
Story first published: Saturday, March 21, 2020, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X