ಕೋವಿಡ್ 19: ಮತ್ತೊಂದು ತುರ್ತು ಸೇವೆಯನ್ನು ಆರಂಭಿಸಿದ ಓಲಾ

ಆ್ಯಪ್ ಆಧಾರಿತ ಕ್ಯಾಬ್ ಸೇವಾ ಕಂಪನಿಯಾದ ಓಲಾ ತನ್ನ ಓಲಾ ಎಮರ್ಜೆನ್ಸಿ ಸೇವೆಯನ್ನು ಮುಂಬೈನಲ್ಲಿ ಆರಂಭಿಸಿತ್ತು. ಈಗ ಓಲಾ ಕಂಪನಿಯು ಈ ಸೇವೆಯನ್ನು ಭಾರತದ ಇತರ 15 ನಗರಗಳಲ್ಲಿ ಆರಂಭಿಸಲು ಮುಂದಾಗಿದೆ. ಈ ಸೇವೆಯಿಂದಾಗಿ ಓಲಾ ಕಂಪನಿಯು ಮೆಡಿಕಲ್ ಕೇರ್ ಸೌಲಭ್ಯಗಳನ್ನು ಕಡಿಮೆ ಸಮಯದಲ್ಲಿ ಒದಗಿಸಲಿದೆ.

ಮತ್ತೊಂದು ಸೇವೆ ಆರಂಭಿಸಿದ ಓಲಾ

ಓಲಾ ಎಮರ್ಜೆನ್ಸಿ ಸೇವೆಯು ಮುಂಬೈ ಜೊತೆಗೆ ಬೆಂಗಳೂರು, ಗುರಗಾಂವ್, ವಿಶಾಖಪಟ್ಟಣಂ, ನಾಸಿಕ್, ವಾರಣಾಸಿ, ಇಂದೋರ್, ಭೋಪಾಲ್, ಅಮೃತಸರ, ಲುಧಿಯಾನ, ಜಲಂಧರ್, ಪಟಿಯಾಲ, ಮೊಹಾಲಿ, ರೂರ್‌ಕೆಲಾ ಹಾಗೂ ಭುವನೇಶ್ವರ ನಗರಗಳಲ್ಲಿ ಆರಂಭವಾಗಲಿದೆ.

ಮತ್ತೊಂದು ಸೇವೆ ಆರಂಭಿಸಿದ ಓಲಾ

ಓಲಾ ಎಮರ್ಜೆನ್ಸಿ ಸೇವೆಯ ಕುರಿತು ಪ್ರತಿಕ್ರಿಯೆ ನೀಡಿರುವ ಓಲಾ ಕಂಪನಿಯು, ಕರೋನಾ ವೈರಸ್ ಸೋಂಕಿತ ಜನರಿಗೆ ಈ ಸೇವೆಯನ್ನು ನೀಡುವುದಿಲ್ಲ. ನಿಯಮಿತವಾಗಿ ತಪಾಸಣೆ, ಡಯಾಲಿಸಿಸ್ ಹಾಗೂ ಕೀಮೋಥೆರಪಿಗೆ ಹೋಗಬೇಕಾದವರಿಗೆ ಈ ಸೇವೆ ನೀಡಲಾಗುವುದು ಎಂದು ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತೊಂದು ಸೇವೆ ಆರಂಭಿಸಿದ ಓಲಾ

ಈ ಸೇವೆಯು ಅಪಘಾತದಲ್ಲಿ ಗಾಯಗೊಂಡವರಿಗೆ ಹಾಗೂ ವೈದ್ಯಕೀಯ ನೆರವಿನ ಅಗತ್ಯವಿರುವವರಿಗೆ ನೆರವಾಗಲಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು ಓಲಾ ಕಂಪನಿಯ ಅಪ್ಲಿಕೇಶನ್‌ನಲ್ಲಿರುವ ಓಲಾ ಎಮರ್ಜೆನ್ಸಿ ಫೀಚರ್ ಬಳಸಬೇಕಾಗುತ್ತದೆ.

ಮತ್ತೊಂದು ಸೇವೆ ಆರಂಭಿಸಿದ ಓಲಾ

ಈ ಫೀಚರ್ ಸಹಾಯದಿಂದ, ಜನರು ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು. ಇದಕ್ಕಾಗಿ ತಮ್ಮ ನಗರಗಳಲ್ಲಿರುವ ಪಟ್ಟಿ ಮಾಡಿರುವ ಆಸ್ಪತ್ರೆಯನ್ನು ನಮೂದಿಸಬೇಕಾಗುತ್ತದೆ. ಮುಂಬೈನಲ್ಲಿ ಈ ಸೇವೆಗಾಗಿ 200 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮತ್ತೊಂದು ಸೇವೆ ಆರಂಭಿಸಿದ ಓಲಾ

ಈ ಕುರಿತು ಮಾತನಾಡಿರುವ ಕಂಪನಿಯ ವಕ್ತಾರರಾದ ಆನಂದ್ ಸುಬ್ರಮಣ್ಯಂರವರು, ಈ ಸೇವೆಯನ್ನು ಮುಂಬೈನಲ್ಲಿ ಆರಂಭಿಸಿದ ಎರಡು ವಾರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮುಂಬೈನಲ್ಲಿ ಸಾವಿರಾರು ಜನರು ಈ ರೀತಿಯ ಸೇವೆಯನ್ನು ನಿರೀಕ್ಷಿಸುತ್ತಿದ್ದರು. ಈಗ ಅನೇಕ ಜನರು ಈ ಸೇವೆಯನ್ನು ಪಡೆಯಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.

ಮತ್ತೊಂದು ಸೇವೆ ಆರಂಭಿಸಿದ ಓಲಾ

ಈ ಸೇವೆಯನ್ನು ನೀಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಾಗಿ ಕಂಪನಿ ಹೇಳಿದೆ. ಇದಕ್ಕಾಗಿ ಕಾರಿನ ಗುಣಮಟ್ಟ, ಸುರಕ್ಷತಾ ಮಾನದಂಡ ಹಾಗೂ ಟೈಮ್‌ಲೈನ್‌ಗಳನ್ನು ನೋಡಿಕೊಳ್ಳಲಾಗುವುದು. ಈ ಸೇವೆಯಿಂದಾಗಿ ಅನೇಕ ಚಾಲಕರು ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

Article Published On: Wednesday, April 22, 2020, 18:32 [IST]
English summary
Ola emergency services expanded to 15 major cities across India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+