ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಕರೋನಾ ವೈರಸ್‌ನಿಂದಾಗಿ ಜನರ ಜೀವನದಲ್ಲಿ ಹಲವು ಬದಲಾವಣೆಗಳಾಗಿವೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಬದಲಾವಣೆಗಳಲ್ಲಿ ಕಂಡು ಬರುವ ಪ್ರಮುಖ ಬದಲಾವಣೆಯೆಂದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿರುವುದು.

ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಜನರು ಪ್ರತಿದಿನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಈ ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು, ದೇಶದ ಅತಿದೊಡ್ಡ ಕ್ಯಾಬ್ ಸೇವಾ ಕಂಪನಿಗಳಲ್ಲಿ ಒಂದಾದ ಓಲಾ, ತನ್ನ ಆಟೋ ಚಾಲಕರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.

ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಇತ್ತೀಚೆಗಷ್ಟೇ ರೈಟ್ ಸೇಫ್ ಇಂಡಿಯಾ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯಡಿಯಲ್ಲಿ ಓಲಾ ಕಂಪನಿಯು ತನ್ನ ಆಟೋಗಳಿಗಾಗಿ ಸುಪೀರಿಯರ್ ವೆಹಿಕಲ್ ಸ್ಟ್ಯಾಂಡರ್ಡ್ ಅನ್ನು ಘೋಷಿಸಿದೆ. ಸುರಕ್ಷಿತವಾದ ಹಾಗೂ ಆರಾಮದಾಯಕವಾದ ಸೇವೆಯನ್ನು ನೀಡುವುದು ಈ ಯೋಜನೆಯ ಹಿಂದಿರುವ ಉದ್ದೇಶ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಓಲಾದ ಎಲ್ಲಾ ಆಟೋಗಳಲ್ಲಿ ಪ್ರೊಟೆಕ್ಟಿವ್ ಪಾರ್ಟಿಷನ್ ಸ್ಕ್ರೀನ್‌ಗಳನ್ನು ಅಳವಡಿಸುವುದಾಗಿ ಓಲಾ ಕಂಪನಿಯು ತಿಳಿಸಿದೆ. ಈ ಸ್ಕ್ರೀನ್‌ಗಳನ್ನು ಚಾಲಕರ ಹಾಗೂ ಪ್ರಯಾಣಿಕರ ನಡುವೆ ಹೆಚ್ಚುವರಿ ಸ್ಕ್ರೀನ್ ಆಗಿ ಇಡಲಾಗುತ್ತದೆ. ಇದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.

ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಇದರ ಜೊತೆಗೆ ಪ್ರತಿ 48 ಗಂಟೆಗಳಿಗೊಮ್ಮೆ ಎಲ್ಲಾ ಆಟೋಗಳನ್ನು ಸ್ಯಾನಿಟೈಜ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಕಂಪನಿಯು ದೇಶಾದ್ಯಂತ 100ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆದಿದೆ. ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ಎಂದು ಓಲಾ ಕಂಪನಿ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಓಲಾ ಈ ಸೆಗ್‌ಮೆಂಟಿನಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಮುಂದಾಗಿದೆ. ಓಲಾ ಆಟೊಗಳು ಕಾರ್ಯನಿರ್ವಹಿಸುತ್ತಿರುವ 120ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರ ಸುರಕ್ಷತೆಗಾಗಿ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಆಟೋಗಳಲ್ಲಿ ಪ್ರೊಟೆಕ್ಟಿವ್ ಸ್ಕ್ರೀನ್ ಅಳವಡಿಸಿದ ಓಲಾ

ಈ ಬಗ್ಗೆ ಮಾತನಾಡಿರುವ ಓಲಾ ಕಂಪನಿಯ ವಕ್ತಾರರಾದ ಆನಂದ್ ಸುಬ್ರಮಣ್ಯಂ ಆಟೋ ರಿಕ್ಷಾಗಳು ಭಾರತದ ಸಂಚಾರ ವಿಧಾನಗಳಲ್ಲಿ ಒಂದಾಗಿವೆ. ಓಲಾ ತನ್ನ ಆಟೋಗಳಲ್ಲಿ ಈ ಹೆಚ್ಚುವರಿ ಸುರಕ್ಷತಾ ಫೀಚರ್‌ನೊಂದಿಗೆ ಚಾಲಕರ ಹಾಗೂ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಿದೆ ಎಂದು ಹೇಳಿದರು.

Most Read Articles

Kannada
English summary
Ola installs protective partition screens in its auto. Read in Kannada.
Story first published: Wednesday, June 24, 2020, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X