ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಬಗ್ಗೆ ಜನರು ಚಿಂತಿತರಾಗಿದ್ದಾರೆ. ಈ ಕಾರಣಕ್ಕೆ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಪ್ರಪಂಚದ ಬಹುತೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಬಹುತೇಕ ಎಲ್ಲಾ ದೇಶಗಳು ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ. ಇದರಿಂದ ಭಾರತವೂ ಹೊರತಾಗಿಲ್ಲ.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಭಾರತದ ರೂಪಾಯಿ ಮೌಲ್ಯವು ಸದ್ಯಕ್ಕೆ ಕುಸಿತವನ್ನು ಕಾಣುತ್ತಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕರೋನಾ ವೈರಸ್ ನಿಂದ ಹೆಚ್ಚು ತೊಂದರೆಯನ್ನು ಎದುರಿಸುತ್ತಿರುವುದು ಚೀನಾ ಹಾಗೂ ಇಟಲಿ ದೇಶಗಳು.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಕರೋನಾ ವೈರಸ್ ಹರಡಬಹುದೆಂಬ ಭಯದಿಂದ ಕೆಲವು ವಾಹನ ಚಾಲಕರು ವಾಹನ ಚಾಲನೆ ಮಾಡುವುದನ್ನು ಬಿಟ್ಟಿದ್ದಾರೆ. ಜನರು ಕ್ಯಾಬ್ ಬಳಕೆಯನ್ನು ಕಡಿಮೆಗೊಳಿಸಿದ್ದಾರೆ. ಹೆಚ್ಚಿನವರು ತಮ್ಮ ಖಾಸಗಿ ವಾಹನಗಳಲ್ಲಿ ಪ್ರಯಾಸುತ್ತಿದ್ದಾರೆ.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಆನ್‌ಲೈನ್ ಕ್ಯಾಬ್ ಕಂಪನಿ ಓಲಾ ತನ್ನ ಎಲ್ಲ ಚಾಲಕರಿಂದ ವಿಧಿಸುವ ಬಾಡಿಗೆ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಈ ಕಷ್ಟದ ಸಮಯದಲ್ಲಿ ಕಂಪನಿಯು ತನ್ನ ಕ್ಯಾಬ್ ಚಾಲಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಮುಂದಾಗಿದೆ. ಆದ್ದರಿಂದ ಬಾಡಿಗೆ ಶುಲ್ಕವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ ಎಂದು ಓಲಾ ಹೇಳಿದೆ.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಓಲಾ ತನ್ನ ಕ್ಯಾಬ್ ಚಾಲಕರಿಗೆ ಬಾಡಿಗೆ ಶುಲ್ಕವಾಗಿ ದಿನಕ್ಕೆ ರೂ.700 - 1,150 ಶುಲ್ಕ ವಿಧಿಸುತ್ತದೆ. ಈ ಶುಲ್ಕವು ನಗರದಿಂದ ನಗರಕ್ಕೆ ಹಾಗೂ ಕಾರುಗಳಿಂದ ಕಾರುಗಳಿಗೆ ಬೇರೆ ಬೇರೆಯಾಗಿರುತ್ತದೆ. ಇದರ ಜೊತೆಗೆ ಕಂಪನಿಯು ಚಾಲಕರಿಂದ ರಿಫಂಡ್ ಮಾಡಲಾಗದ ರೂ.4,000ಗಳನ್ನು ಡೆಪಾಸಿಟ್ ಆಗಿ ಪಡೆಯುತ್ತದೆ.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಕರೋನಾ ವೈರಸ್‌ನಿಂದಾಗಿ ಓಲಾ ಎಲ್ಲಾ ದೇಶಗಳಲ್ಲಿ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ ತುರ್ತು ಸೇವೆಗಳಿಗೆ ಸೇವೆ ನೀಡಲಿದೆ. ಇದರ ಜೊತೆಗೆ ಓಲಾ ಕಂಪನಿಯು ಕ್ಯಾಬ್ ಚಾಲಕರಿಗೆ ವೈದ್ಯಕೀಯ ವಿಮೆ ನೀಡುವುದಾಗಿಯೂ ಹೇಳಿದೆ.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಕಂಪನಿಯ ಅಧಿಕಾರಿಯೊಬ್ಬರು ಮಾತನಾಡಿ, ಓಲಾದ ಕ್ಯಾಬ್ ಚಾಲಕ ಅಥವಾ ಅವರ ಪತ್ನಿ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಅವರ ಚಿಕಿತ್ಸೆಗಾಗಿ ಕಂಪನಿಯು ರೂ.30,000ಗಳವರೆಗೆ ವೈದ್ಯಕೀಯ ವಿಮೆಯನ್ನು ನೀಡುತ್ತದೆ ಎಂದು ಹೇಳಿದರು.

ಕ್ಯಾಬ್ ಚಾಲಕರಿಗೆ ಭರ್ಜರಿ ಕೊಡುಗೆ ನೀಡಿದ ಓಲಾ..!

ಕ್ಯಾಬ್ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಕ್ಯಾಬ್ ಚಾಲಕರಿಗೆ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಓಲಾ ಕಂಪನಿಯು ಚಾಲಕರಿಗೆ ದಿನಕ್ಕೆ ರೂ.1,000ಗಳ ನೆರವು ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಸೌಲಭ್ಯವು ದೇಶದಲ್ಲಿರುವ ಎಲ್ಲಾ ಓಲಾ ಕಾರು, ಬೈಕ್‌ ಹಾಗೂ ಆಟೋಗಳಿಗೆ ಅನ್ವಯಿಸುತ್ತದೆ.

Article Published On: Wednesday, March 25, 2020, 14:41 [IST]
English summary
Ola leased car rental fees waived off. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+