ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಕ್ಯಾಬ್ ಸೇವಾ ಕಂಪನಿಯಾದ ಓಲಾ ತನ್ನ ಕ್ಯಾಬ್ ಪಾಲುದಾರರು ಹಾಗೂ ಚಾಲಕರಿಗಾಗಿ ಸೋಂಕು ನಿವಾರಕ ಕೇಂದ್ರಗಳನ್ನು ತೆರೆದಿದೆ. ದೇಶಾದ್ಯಂತವಿರುವ ಓಲಾ ಕೇಂದ್ರಗಳಲ್ಲಿ ಈ ಸೋಂಕುನಿವಾರಕ ಕೇಂದ್ರಗಳನ್ನು ತೆರೆಯಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಈ ಕೇಂದ್ರಗಳಲ್ಲಿ ಚಾಲಕರನ್ನು ಸೋಂಕುರಹಿತಗೊಳಿಸಲಾಗುತ್ತದೆ. ಇದರಿಂದಾಗಿ ಕರೋನಾ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಬಹುದು. ಓಲಾ ಕಂಪನಿಯು ಹಲವು ರೀತಿಯ ಸುರಕ್ಷತಾ ಕ್ರಮಗಳಿಗಾಗಿ ರೂ.500 ಕೋಟಿಗಳನ್ನು ಘೋಷಿಸಿದೆ. ತನ್ನ ರೈಡ್ ಸೇಫ್ ಇಂಡಿಯಾ ಯೋಜನೆಯ ಭಾಗವಾಗಿ ದೇಶಾದ್ಯಂತ 500ಕ್ಕೂ ಹೆಚ್ಚು ಸೋಂಕುನಿವಾರಕ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದು ಓಲಾ ಕಂಪನಿ ಹೇಳಿದೆ.

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಈ ಬಗ್ಗೆ ಮಾತನಾಡಿರುವ ಓಲಾ ಕಂಪನಿಯ ವಕ್ತಾರರಾದ ಆನಂದ್ ಸುಬ್ರಮಣಿಯನ್ ರವರು ನಮ್ಮ ಚಾಲಕ-ಪಾಲುದಾರರು ದೇಶಾದ್ಯಂತ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ನಾವು ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್‌ ಹಾಗೂ ಸೋಂಕುನಿವಾರಕಗಳನ್ನು ಕಡ್ಡಾಯವಾಗಿ ಬಳಸುವಂತೆ ನೋಡಿಕೊಂಡು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು. ಚಾಲಕರ ಆರೋಗ್ಯವನ್ನು ಆರೋಗ್ಯ ಸೇತು ಆ್ಯಪ್ ಮೂಲಕ ಪರಿಶೀಲಿಸಲಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಓಲಾ ಪ್ಲಾಟ್‌ಫಾರ್ಮ್‌ನಲ್ಲಿ ಚಾಲಕನ ಆರೋಗ್ಯವನ್ನು ಗ್ರಾಹಕರ ಎದುರಿನಲ್ಲಿಯೇ ತಪಾಸಣೆ ನಡೆಸಲಾಗುತ್ತದೆ. ಇದರ ಜೊತೆಗೆ ಪ್ರತಿ ಟ್ರಿಪ್‌ಗೆ ಮುಂಚೆ ಕ್ಯಾಬ್‌ನ ಇಂಟಿರಿಯರ್ ಅನ್ನು ಪ್ರಯಾಣಿಕರ ಮುಂದೆಯೇ ಸ್ವಚ್ವಗೊಳಿಸಲಾಗುತ್ತದೆ. ಇದರಿಂದ ಗ್ರಾಹಕರು ಸೋಂಕಿನ ಬಗ್ಗೆ ಚಿಂತಿಸಬೇಕಾಗಿಲ್ಲವೆಂದು ಓಲಾ ಹೇಳಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಈ ಸೋಂಕುನಿವಾರಕ ಕೇಂದ್ರಗಳಲ್ಲಿ ಕ್ಯಾಬ್ ಅನ್ನು ಸ್ವಚ್ವಗೊಳಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಈ ಕೇಂದ್ರಗಳಲ್ಲಿ ಆಸ್ಪತ್ರೆಯಲ್ಲಿ ಬಳಸಲಾಗುವ ಸಾಧನ ಹಾಗೂ ಸೋಂಕುನಿವಾರಕಗಳನ್ನು ಬಳಸಲಾಗುತ್ತದೆ. ಪ್ರತಿ 48 ಗಂಟೆಗಳಿಗೊಮ್ಮೆ ಕಾರನ್ನು ಸ್ವಚ್ವಗೊಳಿಸಲಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ಸೋಂಕು ನಿವಾರಕ ಕೇಂದ್ರಗಳನ್ನು ತೆರೆದ ಓಲಾ

ಪ್ರತಿ 48 ಗಂಟೆಗಳಿಗೊಮ್ಮೆ ಪ್ರತಿ ಚಾಲಕ ಹಾಗೂ ಕಾರನ್ನು ಪರಿಶೀಲಿಸಲಾಗಿದೆಯೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಓಲಾ ಚಾಲಕರಿಗೆ ನೋಟಿಫಿಕೇಶನ್ ಗಳನ್ನು ಕಳುಹಿಸುತ್ತದೆ. 48 ಗಂಟೆಗಳ ಒಳಗೆ ಕಾರನ್ನು ಸ್ವಚ್ವಗೊಳಿಸದಿದ್ದರೆ, ಆ ಕಾರನ್ನು ಬುಕ್ಕಿಂಗ್ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

Article Published On: Sunday, July 19, 2020, 10:55 [IST]
English summary
Ola opens fumigation centers to check corona infection. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+