ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಬರೋಬ್ಬರಿ ಒಂದೂವರಿ ತಿಂಗಳ ನಂತರ ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ಸಡಲಿಕೆ ಮಾಡಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಪುನಾರಂಭಕ್ಕೆ ಕೆಲವು ಷರತ್ತುಬದ್ದ ಅವಕಾಶ ನೀಡಿದೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಕರೋನಾ ವೈರಸ್ ವ್ಯಾಪಿಸಿರುವ ಆಧಾರದ ಮೇಲೆ ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳನ್ನಾಗಿ ವಿಂಗಡಿ ಕೆಲವು ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿರುವ ಕೇಂದ್ರ ಸರ್ಕಾರವು ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಪುನಾರಂಭಕ್ಕೆ ಅವಕಾಶ ನೀಡಿದೆ. ಹೀಗಾಗಿ ಕೆಲವು ಸುರಕ್ಷಾ ಕ್ರಮಗಳೊಂದಿಗೆ ವಾಣಿಜ್ಯ ಚಟುವಟಿಕೆಗಳನ್ನು ಪುನಾರಂಭಿಸಿರುವ ಪ್ರಮುಖ ಆಟೋ ಕಂಪನಿಗಳು ಮತ್ತು ಕ್ಯಾಬ್ ಸೇವಾ ಕಂಪನಿಗಳು ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ನೀಡುವ ಭರವಸೆ ನೀಡಿವೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಕ್ಯಾಬ್ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಓಲಾ ಮತ್ತು ಉಬರ್ ಕಂಪನಿಗಳು ಸಹ ಕಳೆದ ಒಂದೂವರೆ ತಿಂಗಳ ನಂತರ ವಾಣಜ್ಯ ಚಟುವಟಿಕೆಗೆ ಪುನಾರಂಭಿಸುತ್ತಿದ್ದು, ಮೊದಲ ಹಂತವಾಗಿ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮಾತ್ರವೇ ಸೇವೆಗೆ ಮರುಚಾಲನೆ ನೀಡಲು ಸಿದ್ದತೆ ನಡೆಸಿವೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಕಳೆದ ಒಂದೂವರೆ ತಿಂಗಳಿನಿಂದಲೇ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಲ್ಲದಿರುವುದರಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿಯು ಶೋಚನೀಯ ಸ್ಥಿತಿಗೆ ತಲುಪಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಕೆಲವು ವಿನಾಯ್ತಿಗಳನ್ನು ನೀಡಲಾಗಿದೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಇನ್ನು ಮಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಓಲಾ ಮತ್ತು ಉಬರ್ ಕಂಪನಿಗಳು ತಮ್ಮದೆ ಆದ ಸೇವೆಯನ್ನು ನೀಡುತ್ತಿದ್ದು, ಕರೋನಾ ವಾರಿರ್ಯಸ್‌ಗಳಿಗೆ ದೇಶದ ವಿವಿಧಡೆ ಸುಮಾರು ರೂ.1 ಕೋಟಿ ಮೌಲ್ಯದಷ್ಟು ಉಚಿತ ಸೇವೆಗಳನ್ನು ನೀಡಿವೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಇದರ ಜೊತೆಗೆ ಸುರಕ್ಷತೆಯನ್ನು ಕಾಪಾಡಲು ಎಲ್ಲಾ ಚಾಲಕರಿಗೆ ಸುರಕ್ಷತಾ ಕಾರ್ಯವಿಧಾನಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಟ್ರಿಪ್‌ಗಳ ನಡುವೆ ಕಾರುಗಳನ್ನು ಸ್ವಚ್ವಗೊಳಿಸಲು ಚಾಲಕರಿಗೆ ಸ್ಯಾನಿಟೈಜರ್‌ಗಳು ಹಾಗೂ ಸೋಂಕುನಿವಾರಕಗಳನ್ನು ಒದಗಿಸಲಾಗುತ್ತದೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಲಾಕ್‌ಡೌನ್ ಸಮಯದಲ್ಲಿ ಉಬರ್ ತನ್ನ ಚಾಲಕರು ಹಾಗೂ ಕ್ಯಾಬ್ ಪಾಲುದಾರರಿಗೆ ನೆರವಾಗುವ ಉದ್ದೇಶದಿಂದ ಡ್ರೈವರ್ ಕೇರ್ ಫಂಡ್ ಅನ್ನು ರಚಿಸಿದೆ. ಈ ಫಂಡ್ ಮೂಲಕ ಕಂಪನಿಯು ದೇಶದಲ್ಲಿರುವ 55,000 ಉಬರ್ ಚಾಲಕರಿಗೆ ರೂ.20 ಕೋಟಿಯನ್ನು ಹಂಚಿಕೆ ಮಾಡಲಿದೆ.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ಉಬರ್ ಈ ಫಂಡ್ ಅನ್ನು ರೂ.50 ಕೋಟಿಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉಬರ್‌ನ ಸೆಂಟ್ರಲ್ ಆಪರೇಷನ್ ಮುಖ್ಯಸ್ಥರಾದ ಪವನ್ ವೈಶ್‌ರವರು ಮಾತನಾಡಿ ಈ ವಾರದ ಕೊನೆಗೆ ರೂ.20 ಕೋಟಿ ಸಂಗ್ರಹಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಲಾಕ್‌ಡೌನ್ ಸಡಿಲಿಕೆ- ಕ್ಯಾಬ್ ಸೇವೆಗಳ ಪುನಾರಂಭಕ್ಕೆ ಸಿದ್ದವಾದ ಓಲಾ, ಉಬರ್

ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಲ್ಲಿ ಆರೋಗ್ಯ, ಬ್ಯಾಂಕಿಂಗ್ ಹಾಗೂ ಮೀಡಿಯಾಗಳಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಓಲಾ ಹಾಗೂ ಉಬರ್‌ ಕಂಪನಿಗಳು ಸೇವೆಯನ್ನು ರದ್ದುಪಡಿಸಿರುವುದರಿಂದ ಈ ಕಂಪನಿಗಳ ಚಾಲಕರ ಆದಾಯವೂ ಸ್ಥಗಿತಗೊಂಡಿದೆ.

Article Published On: Tuesday, May 5, 2020, 8:45 [IST]
English summary
Ola, Uber Resume Services in Green, Orange Zones As India Enters Lockdown 3।0।Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+