ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಬಗ್ಗೆ ಜನರು ಚಿಂತಿತರಾಗಿದ್ದಾರೆ. ಈ ಕಾರಣಕ್ಕೆ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಪ್ರಪಂಚದ ಬಹುತೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಬಹುತೇಕ ಎಲ್ಲಾ ದೇಶಗಳು ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ. ಇದರಿಂದ ಭಾರತವೂ ಹೊರತಾಗಿಲ್ಲ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಭಾರತದ ರೂಪಾಯಿ ಮೌಲ್ಯವು ಸದ್ಯಕ್ಕೆ ಕುಸಿತವನ್ನು ಕಾಣುತ್ತಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕರೋನಾ ವೈರಸ್ ನಿಂದ ಹೆಚ್ಚು ತೊಂದರೆಯನ್ನು ಎದುರಿಸುತ್ತಿರುವುದು ಚೀನಾ ಹಾಗೂ ಇಟಲಿ ದೇಶಗಳು.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಕರೋನಾ ವೈರಸ್ ನಿಂದಾಗಿ ಭಾರತದಲ್ಲಿರುವ ಕಮರ್ಷಿಯಲ್ ವಾಹನಗಳು ಹೆಚ್ಚು ತೊಂದರೆಯನ್ನು ಅನುಭವಿಸುತ್ತಿವೆ. ಕರೋನಾದ ಭಯದಿಂದಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಇದರಿಂದಾಗಿ ಕೆಲಸದ ದಿನಗಳಲ್ಲಿ ಜನರಿಂದ ತುಂಬಿರುತ್ತಿದ್ದ ಬೆಂಗಳೂರು, ಮುಂಬೈ, ಪುಣೆ, ದೆಹಲಿ ಮತ್ತು ಚೆನ್ನೈನಂತಹ ನಗರಗಳ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಸಾರ್ವಜನಿಕ ವಾಹನಗಳನ್ನು ಪ್ರಯಾಣಿಕರಿಲ್ಲದೆ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಕರೋನಾ ವೈರಸ್ ಹರಡಬಹುದೆಂಬ ಭಯದಿಂದ ಕೆಲವು ವಾಹನ ಚಾಲಕರು ವಾಹನ ಚಾಲನೆ ಮಾಡುವುದನ್ನು ಬಿಟ್ಟಿದ್ದಾರೆ. ಜನರು ಕ್ಯಾಬ್ ಬಳಕೆಯನ್ನು ಕಡಿಮೆಗೊಳಿಸಿದ್ದಾರೆ. ಹೆಚ್ಚಿನವರು ತಮ್ಮ ಖಾಸಗಿ ವಾಹನಗಳಲ್ಲಿ ಪ್ರಯಾಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಇದರಿಂದಾಗಿ ಬ್ಯಾಂಕುಗಳಿಂದ ಸಾಲ ಪಡೆದು ಕ್ಯಾಬ್ ಗಳನ್ನು ಚಾಲನೆ ಮಾಡುತ್ತಿದ್ದವರು ಇಎಂಐ ಅನ್ನು ಹೇಗೆ ಪಾವತಿಸಬೇಕೆಂಬ ಚಿಂತೆಯಲ್ಲಿದ್ದಾರೆ. ಜನರಿಲ್ಲದೇ ಜೀವನ ಹೇಗೆ ಸಾಗಿಸಬೇಕೆಂಬ ಪ್ರಶ್ನೆ ಎದುರಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಈ ಕಾರಣಕ್ಕೆ ಬ್ಯಾಂಕುಗಳು ಮುಂದಿನ ಎರಡು ತಿಂಗಳ ಇಎಂಐ ಮೊತ್ತವನ್ನು ಮನ್ನಾ ಮಾಡಬೇಕೆಂದು ಟ್ಯಾಕ್ಸಿ ಚಾಲಕರು ಮನವಿ ಮಾಡಿದ್ದಾರೆ. ಕರೋನಾ ವೈರಸ್ ನಿಂದಾಗಿ ಓಲಾ ಹಾಗೂ ಉಬರ್‌ ಚಾಲಕರು ಪ್ರಯಾಣಿಕರಿಲ್ಲದೇ ತೊಂದರೆಯನ್ನು ಎದುರಿಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಕ್ಯಾಬ್ ಚಾಲಕರು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕ್ಯಾಬ್ ಕಂಪನಿಗಳು ಸಹ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ಚಾಲಕರಿಗೆ ಸಲಹೆ ನೀಡಿವೆ. ಮಾಸ್ಕ್ ಹಾಗೂ ಆಂಟಿಸೇಪ್ಕ್ಟಿಕ್ ಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಇಎಂಐ ಮನ್ನಾ ಮಾಡಲು ಮನವಿ ಮಾಡಿದ ಕ್ಯಾಬ್ ಚಾಲಕರು

ಮಾಸ್ಕ್ ಹಾಗೂ ಆಂಟಿಸೇಪ್ಕ್ಟಿಕ್ ಗಳನ್ನು ಒದಗಿಸುವುದಾಗಿ ಹೇಳಿವೆ. ಆದರೆ ಇವುಗಳಿಂದ ಕ್ಯಾಬ್ ಚಾಲಕರ ಆರ್ಥಿಕ ಸ್ಥಿತಿ ಸರಿ ಹೋಗುವುದಿಲ್ಲ. ಕ್ಯಾಬ್ ಚಾಲಕರು ಸರ್ಕಾರ ಮಧ್ಯಪ್ರವೇಶಿಸಿ ಚಾಲಕರ ಸಮಸ್ಯೆಯನ್ನು ಪರಿಹರಿಸ ಬೇಕೆಂದು ಮನವಿ ಮಾಡಿದ್ದಾರೆ.

ಮೂಲ: ಇಟಿ ಆಟೋ

Article Published On: Thursday, March 19, 2020, 14:19 [IST]
English summary
Ola Uber drivers petition to banks to waive interest. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+