ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಕ್ಯಾಬ್ ಸೇವಾ ಕಂಪನಿಗಳಾದ ಓಲಾ ಹಾಗೂ ಉಬರ್ ದೇಶದ ಆಯ್ದ ನಗರಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ತಿಳಿಸಿವೆ. ಓಲಾ ಸೋಮವಾರ 160ಕ್ಕೂ ಹೆಚ್ಚು ನಗರಗಳಲ್ಲಿ ಕ್ಯಾಬ್ ಸೇವೆಯನ್ನು ಆರಂಭಿಸಿದರೆ, ಉಬರ್ 34ಕ್ಕೂ ಹೆಚ್ಚು ನಗರಗಳಲ್ಲಿ ಸೇವೆಗಳನ್ನು ಆರಂಭಿಸಿರುವುದಾಗಿ ಹೇಳಿದೆ.

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಕ್ಯಾಬ್ ಸೇವೆಗಳ ಜೊತೆಗೆ ಸರ್ಕಾರ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದೆಂದು ಓಲಾ, ಉಬರ್ ಕಂಪನಿಗಳು ಹೇಳಿವೆ. ತನ್ನ ಅಡಿಯಲ್ಲಿ ಸೇವೆ ನೀಡುತ್ತಿರುವ ಎಲ್ಲಾ ಮೂರು ಚಕ್ರ ಹಾಗೂ ನಾಲ್ಕು ಚಕ್ರಗಳ ಚಾಲಕ-ಪಾಲುದಾರರು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ ಎಂದು ಓಲಾ ಹೇಳಿದೆ. ಕರೋನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ, ತೆಲಂಗಾಣ, ದೆಹಲಿ, ಹರಿಯಾಣ, ಚಂಡೀಗಢ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪಂಜಾಬ್ ಹಾಗೂ ಅಸ್ಸಾಂಗಳಲ್ಲಿ ಕ್ಯಾಬ್ ಚಾಲಕರು ಹೆಚ್ಚು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಚಾಲಕರು ಹಾಗೂ ಪ್ರಯಾಣಿಕರು ಮಾಸ್ಕ್‌ಗಳನ್ನು ಧರಿಸುವುದನ್ನು ಸುರಕ್ಷತಾ ನಿಯಮಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಂದು ಟ್ರಿಪ್‌ನ ನಂತರ ಕಾರುಗಳನ್ನು ಸ್ವಚ್ವಗೊಳಿಸಲಾಗುವುದು. ಜೊತೆಗೆ ಟ್ರಿಪ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಓಲಾ ಕಂಪನಿಯು ಸುರಕ್ಷಿತ ಸವಾರಿಗೆ 10 ಕ್ರಮಗಳು ಎಂಬ ಯೋಜನೆಯನ್ನು ಆರಂಭಿಸಿರುವುದಾಗಿ ತಿಳಿಸಿದೆ. ಈ ಕ್ಯಾಬ್ ಕಂಪನಿಗಳು ಸರ್ಕಾರವು ಗುರುತಿಸಿರುವ ರೆಡ್ ಝೋನ್ ಹಾಗೂ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸುತ್ತಿಲ್ಲ.

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಪ್ರತಿಯೊಂದು ಟ್ರಿಪ್ ಆರಂಭಿಸುವ ಮುನ್ನ ಎಲ್ಲಾ ಚಾಲಕರು ಮಾಸ್ಕ್ ಧರಿಸಿ ಸೆಲ್ಫಿ ತೆಗೆದು ಅದನ್ನು ಆ್ಯಪ್ ಮೂಲಕ ಕಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಗ್ರಾಹಕರು ಮಾಸ್ಕ್‌ಗಳನ್ನು ಧರಿಸದೇ ಇದ್ದರೆ ಟ್ರಿಪ್ ರದ್ದುಗೊಳಿಸುವ ಅಧಿಕಾರವನ್ನು ಓಲಾ ಚಾಲಕರಿಗೆ ನೀಡಲಾಗಿದೆ. ಕ್ಯಾಬ್‌ಗಳಲ್ಲಿ ಎಸಿಯನ್ನು ಆಫ್ ಮಾಡಿ, ವಿಂಡೋಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ.

ಕಾರ್ಯಾಚರಣೆ ಪುನರಾರಂಭಿಸಿದ ಕ್ಯಾಬ್ ಸೇವಾ ಕಂಪನಿಗಳು

ಕರೋನಾ ವೈರಸ್‌ ಹರಡದಂತೆ ತಡೆಯಲು ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಕ್ಯಾಬ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಕೆಲವು ದಿನಗಳ ಹಿಂದೆ, ಉಬರ್ ಕಂಪನಿಯು ತನ್ನ 3500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತು. ಉಬರ್‌ನ ಈ ನಿರ್ಧಾರವು ವಿಶ್ವದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ.

Most Read Articles

Kannada
English summary
Ola, Uber resumes service in over 130 cities. Read in Kannada.
Story first published: Tuesday, May 19, 2020, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X