ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಭಾರತೀಯ ಮೂಲದ ಒಮೆಗಾ ಸೀಕಿ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಾಹನಗಳ ಬಿಡಿಭಾಗಗಳು ಹಾಗೂ ಬಾಡಿ ಪಾರ್ಟ್ ಸೇರಿದಂತೆ ಪ್ರಮುಖ ಘಟಕಗಳನ್ನು ತಯಾರಿಸುತ್ತದೆ. ಇದರ ಜೊತೆಗೆ ಕಂಪನಿಯು ಕಮರ್ಷಿಯಲ್ ವಾಹನಗಳನ್ನು ಸಹ ತಯಾರಿಸುತ್ತದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಕಂಪನಿಯು ಶೀಘ್ರದಲ್ಲೇ ಶೈತ್ಯೀಕರಣ (ರೆಫ್ರಿಜರೇಟರ್) ಹೊಂದಿರುವ ವಾಹನಗಳನ್ನು ಉತ್ಪಾದಿಸಲಿದೆ ಎಂದು ವರದಿಯಾಗಿದೆ. ಇದರನ್ವಯ ತ್ರಿಚಕ್ರ ವಾಹನ (ಆಟೋ)ಗಳಲ್ಲಿ ಶೈತ್ಯೀಕರಣ ಸೌಲಭ್ಯವನ್ನು ಪರಿಚಯಿಸಲಾಗುವುದು. ಅಂದರೆ ಆಟೋಗಳು ಸಂಸ್ಕರಿಸುವ ಕಂಟೇನರ್ ಗಳನ್ನು ಹೊಂದಲಿವೆ. ಸಾಮಾನ್ಯವಾಗಿ, ದೊಡ್ಡ ಟ್ರಕ್‌ಗಳಲ್ಲಿ ಸರಕುಗಳನ್ನು ಸಂಸ್ಕರಿಸಲು ಶೈತ್ಯೀಕರಣ ಸೌಲಭ್ಯಗಳನ್ನು ನೀಡಲಾಗುತ್ತದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಒಮೆಗಾ ಸೀಕಿ ಕಂಪನಿಯು ಮೊದಲ ಬಾರಿಗೆ ತ್ರಿ ಚಕ್ರ ವಾಹನದಲ್ಲಿ ಈ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ಟ್ರಾನ್ಸ್ ಎಸಿಎನ್ಆರ್ (ಸಾರಿಗೆ ಹವಾನಿಯಂತ್ರಣ ಮತ್ತು ಶೈತ್ಯೀಕರಣ) ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಟ್ರಾನ್ಸ್ ಎಸಿಎನ್ಆರ್ ಸಹಭಾಗಿತ್ವದಲ್ಲಿ ತ್ರಿಚಕ್ರ ವಾಹನಗಳಲ್ಲಿ ರೆಫ್ರಿಜರೇಟರ್ ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿಯು ನಿನ್ನೆ ಹೇಳಿಕೆಯಲ್ಲಿ ತಿಳಿಸಿದೆ. ಆಟೋ ರಿಕ್ಷಾವನ್ನು ಸಂಸ್ಕರಣಾ ಸೌಲಭ್ಯಗಳೊಂದಿಗೆ ಕಾನ್ಸೆಪ್ಟ್ ಮಾದರಿಯಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ಹೇಳಿದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಇದನ್ನು ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದು ಲಿಥಿಯಂ ಐಯಾನ್ ಬ್ಯಾಟರಿಗಳಿಂದ ಚಾಲನೇಯಾಗಲಿದೆ. ಈ ಉದ್ದೇಶಕ್ಕಾಗಿ ಎರಡು ಕಂಪನಿಗಳು ಮೈತ್ರಿ ಮಾಡಿಕೊಂಡಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ವಾಹನಗಳಿಂದ ಹಿಡಿದು ಪ್ರೊಸೆಸಿಂಗ್ ಕಂಟೇನರ್ ಗಳವರೆಗೆ ಎಲ್ಲವನ್ನೂ ವಿನ್ಯಾಸಗೊಳಿಸಲು ಈ ಕಂಪನಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಲಿವೆ. ಭವಿಷ್ಯದಲ್ಲಿ ಹಣ್ಣು, ಹೂ ಹಾಗೂ ಇತರ ಸಂಸ್ಕರಿಸಿದ ವಸ್ತುಗಳನ್ನು ನಿರ್ವಹಿಸಲು ಈ ವಾಹನಗಳನ್ನು ಬಳಸಲಾಗುತ್ತದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಕರೋನಾ ವೈರಸ್‌ ಸಂದರ್ಭದಲ್ಲಿ ಔಷಧ ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಈ ವಾಹನಗಳು ನೆರವಾಗುತ್ತವೆ ಎಂದು ಒಮೆಗಾ ಸೀಕಿ ಕಂಪನಿ ಹೇಳಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರೆಫ್ರಿಜರೇಟರ್ ಹೊಂದಿರುವ ಆಟೋಗಳು

ಈ ವರ್ಷದ ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಮೊದಲ ಬಾರಿಗೆ ರೇಜ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಅನಾವರಣಗೊಳಿಸಿತ್ತು. ಇದರ ಆಧಾರದ ಮೇಲೆ ಕೂಲಿಂಗ್ ರೂಂ ಹೊಂದಿರುವ ಆಟೋ ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Omega Seiki electric three wheelers to have refrigerators. Read in Kannada.
Story first published: Friday, November 20, 2020, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X