ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಕೋವಿಡ್ -19 ಕಾರಣದಿಂದಾಗಿ ವಿಶ್ವಾದ್ಯಂತ ನಾನಾ ಸಮಸ್ಯೆಗಳು ಎದುರಾಗಿವೆ. ಪಾಕಿಸ್ತಾನದಲ್ಲಿ ಹೊಸ ರೀತಿಯ ಸಮಸ್ಯೆ ತಲೆದೋರಿದೆ. ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಉಂಟಾಗಿದೆ. ಇದರಿಂದಾಗಿ ಪೆಟ್ರೋಲ್ ಬಂಕ್ ಹೊರಗೆ ಕಾರುಗಳು ಸಾಲುಗಟ್ಟಿ ನಿಲ್ಲುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಪಾಕಿಸ್ತಾನದ ಕ್ವೆಟ್ಟಾ ಹಾಗೂ ಕರಾಚಿ ನಗರಗಳ ಪೆಟ್ರೋಲ್ ಬಂಕ್ ಮಾಲೀಕರು ಇಂಧನ ಪೂರೈಕೆಯಲ್ಲಿ ಕೊರತೆಯುಂಟಾಗಿರುವ ಕಾರಣಕ್ಕೆ ಇಂಧನದ ಬೆಲೆಯನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿದ್ದಾರೆ. ಈ ನಗರಗಳ ಪೆಟ್ರೋಲ್ ಬಂಕ್ ಮಾಲೀಕರು ಬೆಲೆ ಏರಿಕೆಗೆ ಕರೆ ನೀಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಪೆಟ್ರೋಲ್ ಬಂಕ್ ಹೊರಗೆ ಕಿ.ಮೀಗಳವರೆಗೆ ಹಲವು ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಈ ಸಮಸ್ಯೆ ಸದ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆಗಳಿಲ್ಲ. ಸಮಸ್ಯೆ ಇದೇ ರೀತಿ ಮುಂದುವರಿದರೆ ಪೆಟ್ರೋಲ್ ಬಂಕ್‌ಗಳನ್ನೇ ಮುಚ್ಚಬೇಕಾಗುತ್ತದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಲಾಹೋರ್, ಪೇಶಾವರ್, ಕರಾಚಿ ಹಾಗೂ ಕ್ವೆಟ್ಟಾದಲ್ಲಿರುವ ಹಲವು ಪೆಟ್ರೋಲ್ ಬಂಕ್‌ಗಳನ್ನು ಈಗಾಗಲೇ ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಅಲ್ಪ ಪ್ರಮಾಣದಲ್ಲಿರುವ ಇಂಧನ ಈ ವಾರದ ಅಂತ್ಯದ ವೇಳೆಗೆ ಖಾಲಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಪಾಕಿಸ್ತಾನ ಸರ್ಕಾರವು ಈ ಸಮಸ್ಯೆಗೆ ತೈಲ ಕಂಪನಿಗಳನ್ನು ದೂಷಿಸಿದ್ದು, ಕೃತಕ ಕೊರತೆಯನ್ನು ಸೃಷ್ಟಿಸಿವೆ ಎಂದು ಆರೋಪಿಸಿದೆ. ಅಲ್ಲಿನ ಪೆಟ್ರೋಲಿಯಂ ಸಚಿವರು ತೈಲ ಕಂಪನಿಗಳು ಹೆಚ್ಚಿನ ಲಾಭ ಗಳಿಸಲು ಈ ರೀತಿ ಮಾಡುತ್ತಿದ್ದು, ಪಾಕಿಸ್ತಾನದಲ್ಲಿ ಇಂಧನ ಕೊರತೆಯಿಲ್ಲ ಎಂದು ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಆದರೆ ತೈಲ ಕಂಪನಿಗಳು ಅಲ್ಲಿನ ಪೆಟ್ರೋಲಿಯಂ ಇಲಾಖೆಯ ಅಧಿಕಾರಿಗಳನ್ನು ದೂಷಿಸುತ್ತಿವೆ. ಪಾಕಿಸ್ತಾನದಲ್ಲಿ ಸದ್ಯಕ್ಕೆ 2.72 ಲಕ್ಷ ಟನ್ ಪೆಟ್ರೋಲ್ ಹಾಗೂ 3.76 ಲಕ್ಷ ಟನ್ ಡೀಸೆಲ್ ಇದ್ದು, ಕ್ರಮವಾಗಿ 12 ದಿನ ಹಾಗೂ 17 ದಿನಗಳವರೆಗೆ ಇರಲಿದೆ ಎಂದು ಅಲ್ಲಿನ ಪೆಟ್ರೋಲಿಯಂ ವಿಭಾಗವು ತಿಳಿಸಿದೆ.

ಕರೋನಾ ವೈರಸ್ ಎಫೆಕ್ಟ್: ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ಗೂ ಬರ

ಪಾಕಿಸ್ತಾನವು ಈಗಾಗಲೇ ಹಣದ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕೋವಿಡ್ 19 ಹಾಗೂ ಪೆಟ್ರೋಲ್-ಡೀಸೆಲ್ ಕೊರತೆಯಿಂದಾಗಿ ನಾಗರಿಕರು ತೊಂದರೆಗೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಗಳಿವೆ.

ಸೂಚನೆ: ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರಗಳನ್ನು.

Article Published On: Wednesday, June 10, 2020, 13:26 [IST]
English summary
Pakistan Faces shortage of fuel long queues outside petrol stations. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+