ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕರೋನಾ ವೈರಸ್ ಪರಿಣಾಮ ಹೊಸ ವಾಹನ ಮಾರಾಟದಲ್ಲಿ ಸತತ ಇಳಿಕೆ ಮುಂದುವರಿದಿದ್ದು, ಲಾಕ್‌ಡೌನ್ ತೆರವುಗೊಂಡ ನಂತರವೂ ಪ್ರಮುಖ ನಗರಗಳಲ್ಲಿ ವಾಹನ ಮಾರಾಟ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

2019ರ ಜೂನ್ ಅವಧಿಯ ವಾಹನ ಮಾರಾಟಕ್ಕೂ 2020ರ ಜೂನ್ ಅವಧಿಯ ವಾಹನ ಮಾರಾಟ ಪ್ರಮಾಣಕ್ಕೂ ಹೋಲಿಕೆ ಮಾಡಿದ್ದಲ್ಲಿ ಈ ವರ್ಷದ ವಾಹನ ಮಾರಾಟ ಮತ್ತು ನೋಂದಣಿ ಪ್ರಮಾಣದಲ್ಲಿ ಶೇ. 38 ರಷ್ಟು ಇಳಿಕೆಯಾಗಿದೆ. 2020ರ ಜೂನ್ ಅವಧಿಯಲ್ಲಿ ಒಟ್ಟು 1,26,417 ಪ್ರಯಾಣಿಕರ ವಾಹನಗಳು ಮಾರಾಟಗೊಂಡಿದ್ದು, ವಾಣಿಜ್ಯ ಬಳಕೆಯ ವಾಹನ ಮಾರಾಟವು ಸಹ ಗಣನೀಯವಾಗಿ ಕುಸಿತ ಕಂಡಿದೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ವಾಣಿಜ್ಯ ವಾಹನ ಮಾರಾಟ ಪ್ರಮಾಣದಲ್ಲಿ ಶೇ.84 ರಷ್ಟು ಕುಸಿತ ಕಂಡಿದ್ದು, 2019ರ ಜೂನ್ ಅವಧಿಯಲ್ಲಿ 64,976 ಯುನಿಟ್ ಮಾರಾಟವಾಗಿದ್ದ ವಾಣಿಜ್ಯ ವಾಹನಗಳು 2020ರ ಜೂನ್ ಅವಧಿಯಲ್ಲಿ ಕೇವಲ 10 ಸಾವಿರ ಯುನಿಟ್ ಮಾತ್ರವೇ ಮಾರಾಟಗೊಂಡಿವೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕಾರು ಮತ್ತು ದ್ವಿಚಕ್ರ ವಾಹನ ಮಾರಾಟವು ಸಹ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶೇ.46 ರಿಂದ ಶೇ.60 ರಷ್ಟು ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದರೆ ಗಮನಿಸಬೇಕಾದ ಅಂಶ ಅಂದ್ರೆ ಕೃಷಿ ಚಟುವಟಿಕೆಯ ಪ್ರಮುಖ ವಾಹನ ಮಾದರಿಯಾಗಿರುವ ಟ್ರ್ಯಾಕ್ಟರ್ ಮಾತ್ರ ಲಾಕ್‌ಡೌನ್ ಸಂದರ್ಭದಲ್ಲೂ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

2019ರ ಮೇ ಮತ್ತು ಜೂನ್ ಅವಧಿಯ ಟ್ರ್ಯಾಕ್ಟರ್ ಮಾರಾಟಗಿಂತಲೂ 2020ರ ಮೇ ಮತ್ತು ಜೂನ್ ಅವಧಿಯ ಟ್ರ್ಯಾಕ್ಟರ್ ಮಾರಾಟವು ಅಧಿಕ ಬೇಡಿಕೆಯೊಂದಿಗೆ ಮುಂಚೂಣಿಯಲ್ಲಿದ್ದು, 2020ರ ಜೂನ್ ಅವಧಿಯಲ್ಲಿ ಒಟ್ಟು 45,358 ಯುನಿಟ್ ಮಾರಾಟದೊಂದಿಗೆ ಶೇ.11ರಷ್ಟು ಕಳೆದ ವರ್ಷಕ್ಕಿಂತಲೂ ಹೆಚ್ಚು ಮಾರಾಟಗೊಂಡಿವೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಇನ್ನು ಮಾಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿರುವುದು ಆಟೋ ಕಂಪನಿಗಳಿಗೆ ಭೀತಿ ಉಂಟು ಮಾಡಿದೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.60 ರಿಂದ ಶೇ. 80ರಷ್ಟು ಕುಸಿತ ಕಂಡುಬಂದಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಮಾರಾಟದಲ್ಲಿ ಚೇತರಿಕೆ ಕಾಣಬಹುದು ಎನ್ನಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಕರೋನಾ ಮಹಾಮಾರಿಯಿಂದಾಗಿ ಕೇವಲ ಆಟೋ ಉದ್ಯಮದಲ್ಲಿ ಮಾತ್ರವಲ್ಲ ಎಲ್ಲಾ ವಾಣಿಜ್ಯ ವಹಿವಾಟಿನಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿದೆ.

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 3 ರಿಂದ 4 ವರ್ಷ ಬೇಕಾಗಬಹುದು ಅಂದಾಜಿಸಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಜೂನ್ ಅವಧಿಯಲ್ಲಿ ಶೇ.38ರಷ್ಟು ಕುಸಿತ ಕಂಡ ಪ್ರಯಾಣಿಕ ವಾಹನಗಳ ಮಾರಾಟ

ಭಾರತೀಯ ಆಟೋ ಮೊಬೈಲ್ ಉದ್ಯಮದ ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಗರಿಷ್ಠ ವಿನಾಯ್ತಿಗಳಿಗೆ ಬೇಡಿಕೆಯಿಡುತ್ತಿದೆ.

Most Read Articles

Kannada
English summary
Passenger Vehicle Registrations Drop 38 Percent in June. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X