ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರಿಗೆ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕಾರು, ಬೈಕ್‌ಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದಾಗಿ ಡೀಸೆಲ್ ಹಾಗೂ ಪೆಟ್ರೋಲ್ ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿದೆ.

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಮೇಘಾಲಯ ಸರ್ಕಾರವು ಲಾಕ್‌ಡೌನ್ ಸಮಯದಲ್ಲಿಯೂ ತನ್ನ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬುಧವಾರದಿಂದ ಜಾರಿಗೆ ತರಲಾಗಿದೆ. ಹೊಸ ದರದ ಪ್ರಕಾರ, ಮೇಘಾಲಯದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.74.9ಗಳಾದರೆ, ಡೀಸೆಲ್ ಬೆಲೆ ಪ್ರತಿ ಲೀಟರಿಗೆ ರೂ.67.5ಗಳಾಗಿದೆ.

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಇಂಧನ ಬೆಲೆ ಏರಿಕೆಯ ಬಗ್ಗೆ ಮೇಘಾಲಯ ಸರ್ಕಾರವು ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ ರೂ.17.6 ಹಾಗೂ ಪ್ರತಿ ಲೀಟರ್ ಡೀಸೆಲ್‌ ಮೇಲೆ ರೂ.12.5 ತೆರಿಗೆ ವಿಧಿಸಲಾಗುವುದು. ಜೊತೆಗೆ ರೂ.2 ಸರ್‌ಚಾರ್ಜ್ ವಿಧಿಸಲಾಗುವುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಮೇಘಾಲಯದ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ತೀವ್ರವಾಗಿ ಕುಸಿದಿದ್ದರೂ ಬೆಲೆ ಏರಿಸಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ವಿರೋಧ ಪಕ್ಷಗಳು ಹೇಳಿವೆ.

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಸರ್ಕಾರದ ಈ ನಿರ್ಧಾರವು ಜನರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿರೋಧ ಪಕ್ಷಗಳು ಹೇಳಿವೆ. ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇಂಧನದ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎಂದು ವಿರೋಧಪಕ್ಷಗಳು ಹೇಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಲಾಕ್‌ಡೌನ್ ಸಮಯದಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ ಅಸ್ಸಾಂ ಸರ್ಕಾರ ಸಹ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಅಸ್ಸಾಂನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ರೂ.5 ಹೆಚ್ಚಿಸಲಾಗಿದೆ.

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಬೆಲೆ ಏರಿಕೆಯ ನಂತರ, ಅಸ್ಸಾಂನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ರೂ.77.46 ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.70.50 ಗಳಾಗಿದೆ. ಈ ಬೆಲೆ ಏರಿಕೆಯನ್ನು ಏಪ್ರಿಲ್ 22ರ ಮಧ್ಯರಾತ್ರಿಯಿಂದ ಜಾರಿಗೆ ತರಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ನಡುವೆಯೂ ಏರಿಕೆಯಾದ ಡೀಸೆಲ್-ಪೆಟ್ರೋಲ್ ಬೆಲೆ

ಈ ಬಗ್ಗೆ ಮಾತನಾಡಿರುವ ಅಸ್ಸಾಂನ ರಾಜ್ಯ ಹಣಕಾಸು ಹಾಗೂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾರವರು, ಇಂಧನ ಬೆಲೆ ಏರಿಕೆ ತಾತ್ಕಾಲಿಕವಾಗಿದೆ. ಎಲ್ಲರೂ ಇದನ್ನು ಭರಿಸಬೇಕಾಗುತ್ತದೆ. ಕರೋನಾ ವೈರಸ್ ಸಮಸ್ಯೆ ಬಗೆಹರಿದ ನಂತರ ಮತ್ತೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

Most Read Articles

Kannada
English summary
Petrol Diesel price hike in Meghalaya and Assam. Read in Kannada.
Story first published: Thursday, April 23, 2020, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X