ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ದೇಶದಲ್ಲಿ ಲಾಕ್‌ಡೌನ್ ಸಡಿಲಗೊಂಡಿರುವ ಕಾರಣಕ್ಕೆ ಜನರು ಮನೆಯಿಂದ ಹೊರಬರಲು ಆರಂಭಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಇಂಧನ ಮಾರಾಟವು ಸಂಪೂರ್ಣವಾಗಿ ಕುಸಿದಿತ್ತು. ಜೂನ್ ಮೊದಲ ಭಾಗದಲ್ಲಿ ಇಂಧನ ಮಾರಾಟದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಬಿಡುಗಡೆಯಾಗಿರುವ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಿಗಿಂತ ಜೂನ್ ತಿಂಗಳಿನ ಪೆಟ್ರೋಲ್ ಮಾರಾಟವು 63%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜೂನ್ ತಿಂಗಳಿನಲ್ಲಿ 903,000 ಟನ್ಪೆಟ್ರೋಲ್ ಮಾರಾಟ ಮಾಡಲಾಗಿದೆ. ಡೀಸೆಲ್ ಮಾರಾಟವು 39%ನಷ್ಟು ಏರಿಕೆಯಾಗಿ ಒಟ್ಟಾರೆಯಾಗಿ 2.68 ಮಿಲಿಯನ್ ಟನ್ ಮಾರಾಟವಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಆದರೂ ಪೆಟ್ರೋಲ್, ಡೀಸೆಲ್ ಮಾರಾಟವು ಕಳೆದ ವರ್ಷದ ಜೂನ್ ತಿಂಗಳ ಮೊದಲ ಭಾಗಕ್ಕೆ ಹೋಲಿಸಿದರೆ ಕ್ರಮವಾಗಿ 18% ಹಾಗೂ 15%ನಷ್ಟು ಕುಸಿತವನ್ನು ದಾಖಲಿಸಿದೆ. ಜೂನ್ ಮೊದಲ ವಾರದಲ್ಲಿ, ಎಲ್‌ಪಿಜಿ ಮಾರಾಟವು 6%ನಷ್ಟು ಹೆಚ್ಚಳವನ್ನು ದಾಖಲಿಸಿದ್ದು, 960,000 ಟನ್‌ ಮಾರಾಟವಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಎಲ್‌ಪಿಜಿ ಮಾರಾಟವು ಸಹ ಹಿಂದಿನ ವರ್ಷಕ್ಕಿಂತ 20%ನಷ್ಟು ಕುಸಿತವನ್ನು ದಾಖಲಿಸಿದೆ. ಜೆಟ್ ಇಂಧನ ಬಳಕೆ ದ್ವಿಗುಣಗೊಂಡಿದ್ದು 85,000 ಟನ್ ಮಾರಾಟವಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ 73%ನಷ್ಟು ಇಳಿಕೆಯಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಪೆಟ್ರೋಲ್, ಡೀಸೆಲ್ ಬೆಲೆಯು ಕಳೆದ 12 ದಿನಗಳಿಂದ ಸತತವಾಗಿ ಹೆಚ್ಚುತ್ತಿದೆ. ಮೂಲಗಳ ಪ್ರಕಾರ, ತೈಲ ಬೆಲೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಲಾಕ್‌ಡೌನ್ ಕಾರಣದಿಂದಾಗಿ ಮಾರ್ಚ್ ಕೊನೆಯ ಭಾಗದಿಂದ ಪೆಟ್ರೋಲ್, ಡೀಸೆಲ್‌ಗೆ ಬೇಡಿಕೆ ಕುಸಿದಿದೆ. ಏಪ್ರಿಲ್‌ನಲ್ಲಿ ಭಾರೀ ಪ್ರಮಾಣದ ಕುಸಿತ ಉಂಟಾಗಿತ್ತು. ಮೇ ತಿಂಗಳಿನಿಂದ ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಲಾದ ಕಾರಣಕ್ಕೆ ಇಂಧನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ಮಾರಾಟ

ಕಳೆದ ಹಣಕಾಸು ವರ್ಷದಲ್ಲಿ ಫೆಬ್ರವರಿ ತಿಂಗಳವರೆಗೆ, ಪೆಟ್ರೋಲಿಯಂ ಉತ್ಪನ್ನ ಮಾರಾಟವು 1.9%ನಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಕೋವಿಡ್ -19 ಕಾರಣದಿಂದಾಗಿ ಈ ಬೆಳವಣಿಗೆ ದರವು 18%ನಷ್ಟು ಕಡಿಮೆಯಾಗಿದೆ.

Most Read Articles

Kannada
English summary
Petrol Diesel sale increases in first half of June. Read in Kannada.
Story first published: Thursday, June 18, 2020, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X