ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಕಾರಣದಿಂದಾಗಿ ಜುಲೈ ತಿಂಗಳ ಮೊದಲ 15 ದಿನಗಳಲ್ಲಿ ಪೆಟ್ರೋಲ್- ಡೀಸೆಲ್ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿದೆ. ಇದರ ಜೊತೆಗೆ ಲಾಕ್ ಡೌನ್ ಸಹ ಪೆಟ್ರೋಲ್-ಡೀಸೆಲ್ ಬೇಡಿಕೆ ಕುಸಿಯಲು ಮತ್ತೊಂದು ಕಾರಣ ಎಂದು ಹೇಳಲಾಗಿದೆ.

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಭಾರತದಲ್ಲಿ ಕರೋನಾ ವೈರಸ್ ಅಟ್ಟಹಾಸ ಇನ್ನೂ ಮುಂದುವರೆದಿದೆ. ಈ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಇನ್ನೂ ಮುಂದುವರೆದಿದೆ. ಇದರಿಂದಾಗಿ ಪೆಟ್ರೋಲ್-ಡೀಸೆಲ್ ಬೇಡಿಕೆ ಕಡಿಮೆಯಾಗಿದೆ. ಸದ್ಯಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವುದರೊಂದಿಗೆ ಭಾರತವು ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಕರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಅಮೆರಿಕಾ ಹಾಗೂ ಬ್ರೆಜಿಲ್ ಮೊದಲ ಎರಡು ಸ್ಥಾನದಲ್ಲಿವೆ. ಆ ದೇಶಗಳಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಾಗಿವೆ. ಭಾರತವು ಪೆಟ್ರೋಲ್-ಡೀಸೆಲ್ ಬಳಕೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಕಾರಣದಿಂದಾಗಿ ಪೆಟ್ರೋಲ್-ಡೀಸೆಲ್ ಬೇಡಿಕೆಯಲ್ಲಿ ಹಿಂದೆಂದೂ ಕಂಡರಿಯದ ಕುಸಿತ ಉಂಟಾಗಿತ್ತು. ಇಂಡಿಯನ್ ಆಯಿಲ್ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಡೀಸೆಲ್ ಮಾರಾಟವು ಗಣನೀಯವಾಗಿ ಕುಸಿದಿದೆ.

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಜುಲೈ ತಿಂಗಳ ಮೊದಲ 15 ದಿನಗಳಲ್ಲಿ ಡೀಸೆಲ್ 18%ನಷ್ಟು ಕುಸಿದು, ಮಾರಾಟ ಪ್ರಮಾಣವು 2.2 ದಶಲಕ್ಷ ಟನ್‌ಗಳಿಗೆ ಇಳಿದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಭಾರತ್ ಪೆಟ್ರೋಲಿಯಂನಂತಹ ಸರ್ಕಾರಿ ಕಂಪನಿಗಳು ಭಾರತದ 90%ಗೂ ಅಧಿಕ ಮಾರಾಟ ಮಳಿಗೆಗಳನ್ನು ಹೊಂದಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಲಾಕ್ ಡೌನ್ ಸಡಿಲಿಕೆಯ ನಂತರ ಮೇ ತಿಂಗಳಿನಲ್ಲಿ ಇಂಧನ ಬೇಡಿಕೆ ಹೆಚ್ಚಾಗಿತ್ತು. ಆದರೆ ಕರೋನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರಗಳು ಕಳೆದ ವಾರ ಹೊಸ ಕಂಟೈನ್ ಮೆಂಟ್ ಜೋನ್ ಗಳನ್ನು ರಚಿಸಿ, ಲಾಕ್‌ಡೌನ್ ಜಾರಿಗೊಳಿಸಿವೆ.

ಮತ್ತೆ ಕುಸಿದ ಪೆಟ್ರೋಲ್ - ಡೀಸೆಲ್ ಮಾರಾಟ

ಅಂಕಿಅಂಶಗಳ ಪ್ರಕಾರ, ಜುಲೈ ತಿಂಗಳ ಮೊದಲ 15 ದಿನಗಳಲ್ಲಿ ಪೆಟ್ರೋಲ್ ಮಾರಾಟವು 6.7%ನಷ್ಟು ಕುಸಿದು 8,80,000 ಟನ್‌ಗಳಿಗೆ ಇಳಿದಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ದೆಹಲಿಯಲ್ಲಿ ಈಗ ಡೀಸೆಲ್ ಬೆಲೆ ರೂ.81.35ಗಳಾಗಿದೆ.

Most Read Articles

Kannada
English summary
Petrol Diesel sales falls again due to corona virus and high price. Read in Kannada.
Story first published: Saturday, July 18, 2020, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X