ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡುತ್ತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ದಪಡಿಸುತ್ತಿವೆ. ಬೆಂಗಳೂರು ಮೂಲದ ಕಂಪನಿಯೊಂದು ಕೂಡಾ ವಿಶೇಷ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಿದ್ದಪಡಿಸಿದ್ದು, ಮೈಲೇಜ್ ವಿಚಾರವಾಗಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗುತ್ತಿರುವ ಬೆಂಗಳೂರು ಮೂಲದ ಹಲವು ಸ್ಟಾಟ್ಅಪ್ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸುವ ತವಕದಲ್ಲಿದ್ದು, ವಿಶೇಷ ಮಾದರಿಯ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡಿರುವ ಪ್ರವೈಗ್ ಡೈಮಾನಿಕ್ ಕಂಪನಿಯು ಸಹ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಪ್ರವೈಗ್ ಡೈಮಾನಿಕ್ ಕಂಪನಿಯು ನಿರ್ಮಾಣ ಮಾಡಿರುವ ವಿಶೇಷ ವಿನ್ಯಾಸದ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಮಾದರಿಯ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೇ ವರ್ಷ ದೀಪಾವಳಿ ಹೊತ್ತಿಗೆ ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಅನಾವರಣಗೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಮೆಲ್ನೋಟಕ್ಕೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಮಾದರಿಯು ಟೆಸ್ಲಾ ಕಾರಿನಂತೆ ಕಂಡರೂ ವಿಭಿನ್ನ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಬ್ಯಾಟರಿ ಪ್ಯಾಕ್ ಆಫರ್ ನೀಡಲಿದೆ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಹೈ ಎಂಡ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 504ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸಾಮಾನ್ಯ ಕಾರುಗಳಂತೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಕೂಡಾ ಫರ್ಪಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ. ಇದಕ್ಕಾಗಿಯೇ ಹೊಸ ಕಾರಿನಲ್ಲಿ ವಿವಿಧ ಡ್ರೈವ್ ಮೊಡ್‌ಗಳನ್ನು ನೀಡಲಾಗಿದ್ದು, 201.5-ಬಿಎಚ್‌ಪಿ ಉತ್ಪಾದನೆಯೊಂದಿಗೆ ಗಂಟೆಗೆ ಗರಿಷ್ಠ 196 ಕಿ.ಮೀ ವೇಗ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಹಾಗೆಯೇ ಹೊಸ ಹೊರಭಾಗದ ವಿನ್ಯಾಸವು ಸಹ ಸೆಡಾನ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾನ್ಸೆಪ್ಟ್ ಮಾದರಿಯನ್ನು ಟೂ ಡೋರ್ ಕೂಪೆ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ. ಆದರೆ ಉತ್ಪಾದನಾ ಆವೃತ್ತಿಯು ಫೋರ್ ಡೋರ್ ಮಾದರಿಯಾಗಿರಲಿದ್ದು, ಭಾರತೀಯ ಕಾರು ಖರೀದಿದಾರರ ಅಭಿರುಚಿಗೆ ತಕ್ಕಂತೆ ಹೊಸ ಕಾರನ್ನು ಸಿದ್ದಪಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಹೊಸ ಕಾರಿನ ಮೈಲೇಜ್ ಮಾಹಿತಿ ಹೊರತಾಗಿ ತಾಂತ್ರಿಕ ಅಂಶಗಳ ಮಾಹಿತಿಯು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್ ಮೂಲಕ ಬಹಿರಂಗ ಪಡಿಸಲಾಗುತ್ತಿದ್ದು, ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯು ಸಹ ಸಿದ್ದಪಡಿಸಿದ್ದೆ ಆದಲ್ಲಿ ಹೊಸ ಕಾರು ದೇಶಿಯ ಆಟೋ ಉದ್ಯಮದಲ್ಲಿ ದೊಡ್ಡ ಸಂಚಲನ ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ಹಾಗೆಯೇ ಹೊಸ ಕಾರಿನ ಬೆಲೆಯು ಕೂಡಾ ಎಲೆಕ್ಟ್ರಿಕ್ ಕಾರಿನ ಭವಿಷ್ಯವನ್ನು ನಿರ್ಧರಿಸಿದ್ದು, ದೇಶಿಯ ಮಾರುಕಟ್ಟೆಯಲ್ಲೇ ಪೂರ್ಣ ಪ್ರಮಾಣದಲ್ಲಿ ಸಿದ್ದವಾಗುತ್ತಿರುವುದರಿಂದ ಕಾರಿನ ಬೆಲೆಯು ಆಕರ್ಷಕವಾಗಿರಲಿದೆ ಎನ್ನಲಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಪ್ರತಿ ಚಾರ್ಜ್‌ಗೆ 504ಕಿ.ಮೀ ಮೈಲೇಜ್ ನೀಡಲಿದೆ ಈ ಇವಿ ಕಾರು

ದೀಪಾವಳಿ ಹೊತ್ತಿಗೆ ಅನಾವರಣಗೊಳ್ಳಲಿರುವ ಪ್ರವೈಗ್ ಡೈಮಾನಿಕ್ ನಿರ್ಮಾಣದ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಸೆಡಾನ್ ಕಾರು ಮಾದರಿಯು 2021ರ ಆರಂಭದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಟೆಸ್ಲಾ ಮಾದರಿಯಲ್ಲೇ ಈ ಕಾರು ಕೂಡಾ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

Most Read Articles

Kannada
English summary
Pravaig Extinction MK1 Electric Car Specs Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X