ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಇಂದು ದೇಶದ ಮೊದಲ ಚಾಲಕರಹಿತ ರೈಲಿಗೆ ಚಾಲನೆ ನೀಡಿದ್ದಾರೆ. ಈ ರೈಲು ಮೆಜೆಂಟಾ ಮಾರ್ಗದಲ್ಲಿ ಚಲಿಸುವ ದೆಹಲಿಯ ಮೆಟ್ರೋ ರೈಲು ಆಗಿದೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಈ ಹೊಸ ರೈಲಿನ ಜೊತೆಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಚಾಲಕರಹಿತ ರೈಲು ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿರಲಿದೆ. ಈ ಚಾಲಕರಹಿತ ರೈಲು ಮಾನವ ಚಾಲಕರ ಸೇವೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಿದೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಸದ್ಯಕ್ಕೆ ಈ ರೈಲಿಗೆ ಮೆಜೆಂಟಾ ಮಾರ್ಗದಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಪಿಂಕ್ ಮಾರ್ಗದಲ್ಲಿ ಚಾಲನೆ ನೀಡಲಾಗುವುದು. ಈ ಹೊಸ ತಂತ್ರಜ್ಞಾನವು ಪ್ರಯಾಣದ ಸೌಕರ್ಯವನ್ನು ಸುಧಾರಿಸುತ್ತದೆ ಪ್ರಧಾನ ಮಂತ್ರಿಗಳ ಕಚೇರಿಯು ತಿಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ದೆಹಲಿಯ ಜನಕ್ಪುರಿ ಪಶ್ಚಿಮ ಹಾಗೂ ನೋಯ್ಡಾದ ಬಟಾನಿಕಲ್ ಗಾರ್ಡನ್ ನಡುವೆ ಪಿಂಕ್ ಮೆಟ್ರೊ ರೈಲು ಚಲಿಸುತ್ತದೆ. 20 ಕಿ.ಮೀ ವಿಸ್ತಾರದ ಈ ಮಾರ್ಗದಲ್ಲಿ ಚಾಲಕ ರಹಿತ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು 2017ರ ಡಿಸೆಂಬರ್ ತಿಂಗಳಿನಲ್ಲಿ ಆರಂಭಿಸಲಾಯಿತು.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಈ ಚಾಲಕ ರಹಿತ ರೈಲು 2022ರ ವೇಳೆಗೆ ದೆಹಲಿಯ ಮೆಟ್ರೊದಾದ್ಯಂತ ಚಲಿಸಲಿದೆ. ದೆಹಲಿ ಮೆಟ್ರೋದಲ್ಲಿರುವ ಮೂರು ಕಮಾಂಡ್ ಸೆಂಟರ್'ಗಳಿಂದ ಈ ರೈಲು ಸಂಪೂರ್ಣ ಚಾಲನೆಯಾಗಲಿದೆ. ಈ ರೈಲು ಚಲಿಸುವಾಗ ಮನುಷ್ಯರ ಅಗತ್ಯವಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಈ ರೈಲಿನಲ್ಲಿರುವ ಕಮ್ಯೂನಿಕೇಷನ್ ಆಧಾರಿತ ರೈಲು ಕಂಟ್ರೋಲ್ ಸಿಗ್ನಲಿಂಗ್ ತಂತ್ರಜ್ಞಾನವು ರೈಲಿನ ಕಾರ್ಯಾಚರಣೆಯ ಸಮಯದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಹಾರ್ಡ್ ವೇರ್ ಬದಲಿಸುವಾಗ ಮಾತ್ರ ಮನುಷ್ಯನ ಅಗತ್ಯವಿರುತ್ತದೆ. ಕಮಾಂಡ್ ಸೆಂಟರ್'ನಲ್ಲಿರುವ ಇನ್ಫಾರ್ಮೆಷನ್ ಕಂಟ್ರೋಲ್'ನಿಂದ ಪ್ರಯಾಣಿಕರ ಮಾಹಿತಿಯನ್ನು ಪಡೆಯಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಇದರ ಜೊತೆಗೆ ಗುಂಪಿನ ಮೇಲ್ವಿಚಾರಣೆಯನ್ನು ಸಹ ಮಾಡಲಾಗುತ್ತದೆ. ಸಿಸಿಟಿವಿ ನೆರವಿನಿಂದ ರೈಲು ಉಪಕರಣಗಳನ್ನು ಮೇಲ್ವಿಚಾರಣೆ ಮಾಡಬಹುದು. ಈ ಆಟೋಮ್ಯಾಟಿಕ್ ರೈಲು ಸದ್ಯಕ್ಕೆ 7ನೇ ಲೈನ್ ಹಾಗೂ 8ನೇ ಲೈನ್'ಗಳಿಗೆ ಮಾತ್ರ ಸೀಮಿತವಾಗಿದೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಇನ್ನು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಗ್ಗೆ ಹೇಳುವುದಾದರೆ, ಈ ಕಾರ್ಡ್ ಅನ್ನು ಮೊದಲ ಬಾರಿಗೆ ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರ್ಡ್‌ ಮೂಲಕ ಮೆಟ್ರೋ, ಟೋಲ್ ಟ್ಯಾಕ್ಸ್, ರೈಲು ಟಿಕೆಟ್, ಪಾರ್ಕಿಂಗ್ ಶುಲ್ಕ ಹಾಗೂ ಬಸ್ ಶುಲ್ಕಗಳನ್ನು ಪಾವತಿಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ರುಪೇ ಯೋಜನೆಯಡಿ ನೀಡಲಾಗಿದೆ. ರುಪೇ ಎನ್ನುವುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಆರಂಭಿಸಿದ ರಾಷ್ಟ್ರೀಯ ಕಾರ್ಡ್ ಯೋಜನೆಯಾಗಿದೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಈ ಮೂಲಕ ವೀಸಾ ಅಥವಾ ಮಾಸ್ಟರ್ ಕಾರ್ಡ್ ನಂತಹ ವಿದೇಶಿ ಕಾರ್ಡ್ ಯೋಜನೆಗಳ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ರುಪೇ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‌ನಂತಿರುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ರುಪೇ ಕಾರ್ಡಿನ ವಹಿವಾಟು ವೆಚ್ಚಗಳು ಕಡಿಮೆಯಾಗಿರುವ ಕಾರಣ ಗ್ರಾಹಕರ ಮೇಲೆ ಹೆಚ್ಚಿನ ಹೊರ ಬೀಳುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ 25 ಬ್ಯಾಂಕುಗಳು ಈ ಕಾರ್ಡ್ ಅನ್ನು ನೀಡುತ್ತಿವೆ.

ಮನುಷ್ಯರ ನೆರವಿಲ್ಲದೇ ಚಲಿಸುತ್ತದೆ ಈ ಆಟೋಮ್ಯಾಟಿಕ್ ರೈಲು

ಹಣವನ್ನು ವಿತ್ ಡ್ರಾ ಮಾಡಲು ಹಾಗೂ ಶಾಪಿಂಗ್ ಮಾಡಲು ಸಹ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಬಳಸಬಹುದು. ಈ ಕಾರ್ಡ್‌ನ ಮುಖ್ಯ ವಿಷಯವೆಂದರೆ ಈ ಕಾರ್ಡ್ ದೇಶಾದ್ಯಂತ ಮಾನ್ಯತೆಯನ್ನು ಹೊಂದಿದೆ.

Most Read Articles

Kannada
English summary
Prime Minister Narendra Modi inaugurates India's first driverless train. Read in Kannada.
Story first published: Monday, December 28, 2020, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X