ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಕರೋನಾ ವೈರಸ್ ಸೋಂಕು ಇಡೀ ಪ್ರಪಂಚವನ್ನು ತತ್ತರಿಸುವಂತೆ ಮಾಡಿದೆ. ಈ ವೈರಸ್ ಸೋಂಕಿನಿಂದಾಗಿ ದೇಶಾದ್ಯಂತ ಸುಮಾರು ಎರಡು ತಿಂಗಳ ಕಾಲ ಲಾಕ್‌ಡೌನ್ ವಿಧಿಸಲಾಗಿತ್ತು. ಇದರಿಂದಾಗಿ ಇಡೀ ದೇಶದ ಆರ್ಥಿಕ ವ್ಯವಸ್ಥೆಯು ಕುಸಿದಿದೆ.

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಸರ್ಕಾರಿ ವಿಮಾನಯಾನ ಕಂಪನಿಯಾದ ಏರ್ ಇಂಡಿಯಾದ ಪರಿಸ್ಥಿತಿ ಸಹ ಹದಗೆಟ್ಟಿದೆ. ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಿದ ನಂತರ ದೇಶಿಯ ವಿಮಾನಯಾನವನ್ನು ಪುನರಾರಂಭಿಸಲಾಗಿದೆ. ಆದರೂ ಸಹ ಏರ್ ಇಂಡಿಯಾ ನಿರಂತರ ನಷ್ಟವನ್ನು ಅನುಭವಿಸುತ್ತಿದೆ.

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಈ ಬಗ್ಗೆ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿರವರು ಏರ್ ಇಂಡಿಯಾವನ್ನು ನಷ್ಟದಿಂದ ಚೇತರಿಸಿಕೊಳ್ಳುವಂತೆ ಮಾಡಲು ಉಳಿದಿರುವ ಏಕೈಕ ಮಾರ್ಗವೆಂದರೆ ಅದನ್ನು ಖಾಸಗೀಕರಣಗೊಳಿಸುವುದು. ಸರ್ಕಾರದ ಧನಸಹಾಯದಿಂದ ಮಾತ್ರ ಏರ್ ಇಂಡಿಯಾ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಕರೋನಾ ವೈರಸ್ ಸೋಂಕಿನಿಂದಾಗಿ ಲಾಕ್ ಡೌನ್ ಹೇರಿದ ನಂತರ, ಕೇಂದ್ರ ಸರ್ಕಾರವು ಏರ್ ಇಂಡಿಯಾಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ನೀಡುವ ಸ್ಥಿತಿಯಲ್ಲಿಲ್ಲ. ಏರ್ ಇಂಡಿಯಾವನ್ನು ಹೇಗೆ ನಡೆಸಬೇಕೆಂದು ತಿಳಿದಿರುವವರಿಗೆ ಅದನ್ನು ಹಸ್ತಾಂತರಿಸಬೇಕೆಂದು ಸಚಿವರು ಹೇಳಿದರು.

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಏರ್ ಇಂಡಿಯಾ ಇತ್ತೀಚಿಗೆ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ವಯ ನೌಕರರು ಆರು ತಿಂಗಳಿನಿಂದ ಐದು ವರ್ಷಗಳವರೆಗೆ ವೇತನವಿಲ್ಲದ ರಜೆ ತೆಗೆದುಕೊಳ್ಳಬಹುದು. ಇದರ ಜೊತೆಗೆ ಏರ್ ಇಂಡಿಯಾ ಮ್ಯಾನೇಜ್ ಮೆಂಟ್, ಬಯಸಿದವರಿಗೆ ರಜೆ ಮೇಲೆ ಕಳುಹಿಸುವ ಆಯ್ಕೆಯನ್ನು ಸಹ ನೀಡಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಈ ಮಾಹಿತಿಯನ್ನು ಏರ್ ಇಂಡಿಯಾ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ನಿರ್ದೇಶಕರ ಮಂಡಳಿಯ 102ನೇ ಸಭೆಯಲ್ಲಿ ವೇತನವಿಲ್ಲದೆ ರಜೆ ತೆಗೆದುಕೊಳ್ಳುವ ಹಾಗೂ ನೌಕರರನ್ನು ರಜೆ ಮೇಲೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಏರ್ ಇಂಡಿಯಾ ಉಳಿವಿಗೆ ಖಾಸಗೀಕರಣವೇ ಮದ್ದು ಎಂದ ಸಚಿವ

ಈ ಷರತ್ತನ್ನು ದಕ್ಷತೆ, ಪರ್ಫಾಮೆನ್ಸ್, ಸಿಬ್ಬಂದಿಯ ಆರೋಗ್ಯ, ನೌಕರನು ಈ ಹಿಂದೆ ಕರ್ತವ್ಯಕ್ಕೆ ಹಾಜರಾಗಿರುವುದು, ಅನಾರೋಗ್ಯ ಮುಂತಾದ ಅಂಶಗಳ ಆಧಾರದ ಮೇಲೆ ಅನ್ವಯಿಸಲಾಗುವುದು.

Most Read Articles

Kannada
English summary
Privatization is the only way for the survival of Air India says minister. Read in Kannada.
Story first published: Friday, July 17, 2020, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X