ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಛಾಗುತ್ತಿವೆ. ಪ್ರತಿದಿನ ಸಾವಿರಾರು ಜನ ಭೇಟಿ ನೀಡುವ ಪೆಟ್ರೋಲ್ ಬಂಕ್, ಸರ್ವೀಸ್ ಸೆಂಟರ್ ಹಾಗೂ ಶೋ ರೂಂಗಳಲ್ಲಿ ಕೆಲಸ ಮಾಡುವವರು ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಪುಣೆ ನಗರದಲ್ಲಿರುವ ಪೆಟ್ರೋಲ್ ಬಂಕ್‌ಗಳು ತಮ್ಮ ಸಿಬ್ಬಂದಿಗಳನ್ನು ಸೋಂಕಿನಿಂದ ರಕ್ಷಿಸಲು ಹೊಸ ಕ್ರಮಗಳಿಗೆ ಮುಂದಾಗಿವೆ. ಪೆಟ್ರೋಲ್ ಬಂಕ್‌ಗಳಿಗೆ ಇಂಧನ ತುಂಬಿಸಿಕೊಳ್ಳಲು ಬರುವ ಗ್ರಾಹಕರಿಗೆ ವಾಹನದಲ್ಲಿ ಸ್ವತಃ ತಾವೇ ಇಂಧನ ತುಂಬಿಕೊಳ್ಳುವಂತೆ ಹೇಳಲಾಗುತ್ತಿದೆ. ಇದರಿಂದ ಗ್ರಾಹಕರು ಹಾಗೂ ಸಿಬ್ಬಂದಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದೆಂಬುದು ಪೆಟ್ರೋಲ್ ಬಂಕ್‌ಗಳ ಅಭಿಪ್ರಾಯ.

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಬಂಕ್‌ಗಳ ಸಿಬ್ಬಂದಿ ಗ್ರಾಹಕರಿಗೆ ಸಾಮಾಜಿಕ ಅಂತರದ ಬಗ್ಗೆ ಹೇಳುತ್ತಿದ್ದಾರೆ. ಜೊತೆಗೆ ಗ್ರಾಹಕರಿಗೆ ಇಂಧನವನ್ನು ಹೇಗೆ ತುಂಬಿಸಿಕೊಳ್ಳಬೇಕು ಎಂಬುದನ್ನು ತೋರಿಸುತ್ತಿದ್ದಾರೆ, ಗ್ರಾಹಕರು ಸಹ ಸ್ವತಃ ತಾವೇ ವಾಹನಗಳಲ್ಲಿ ಇಂಧನವನ್ನು ತುಂಬಿಸಿಕೊಳ್ಳುತ್ತಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಮೊದಲು ಬಂಕ್‌ಗಳಿಗೆ ಬರುವ ಗ್ರಾಹಕರ ಕೈಗಳನ್ನು ಸ್ಯಾನಿಟೈಜರ್‌ನಿಂದ ಸ್ವಚ್ವಗೊಳಿಸಲಾಗುತ್ತದೆ. ನಂತರ ಪೆಟ್ರೋಲ್ ಬಂಕ್ ಮಿಷನ್‌ಗಳನ್ನು ಬಳಸಿ ಇಂಧನವನ್ನು ತುಂಬಿಸಿಕೊಳ್ಳಬಹುದು. ಗ್ರಾಹಕರು ಪೆಟ್ರೋಲ್ ಬಂಕ್‌ಗಳ ಈ ಕ್ರಮವನ್ನು ಮೆಚ್ಚಿ ಕೊಂಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಇದರಿಂದಾಗಿ ಗ್ರಾಹಕರಿಗೆ ಸಿಬ್ಬಂದಿಗಳಿಂದ ಸೋಂಕು ತಗುಲುವ ಅಪಾಯವಿಲ್ಲದಂತಾಗುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯ. ಪೆಟ್ರೋಲ್ ಬಂಕ್‌ಗಳಿಗೆ ಬರುವ ಗ್ರಾಹಕರಿಗೆ ಇಂಧನ ತುಂಬಿಸಿಕೊಳ್ಳಲು ತರಬೇತಿ ನೀಡಬೇಕಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಇದಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡರೂ ಕರೋನಾ ಸೋಂಕು ಹರಡುವುದನ್ನು ತಪ್ಪಿಸಲು ಈ ಕ್ರಮವು ಪರಿಣಾಮಕಾರಿಯಾಗಿದೆ ಎಂದು ಗ್ರಾಹಕರು ಹೇಳಿದ್ದಾರೆ. ಪೆಟ್ರೋಲ್ ‌ಬಂಕ್‌ಗಳಂತಹ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ ಅಲ್ಲಿನ ಸಿಬ್ಬಂದಿಗೆ ವೈರಸ್ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಮುಂಬೈ ಹಾಗೂ ಪುಣೆನಲ್ಲಿರುವ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ಫೇಸ್ ಮಾಸ್ಕ್ ಧರಿಸದ ಗ್ರಾಹಕರಿಗೆ ಪೆಟ್ರೋಲ್ ನೀಡುತ್ತಿಲ್ಲ. ಪಂಪ್ ಬಂಕ್‌ಗಳ ಮಾಲೀಕರು ಸೋಂಕು ತಡೆಗಟ್ಟುವ ಬಗ್ಗೆ ಗ್ರಾಹಕರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಹೊಸ ಪದ್ದತಿಗೆ ನಾಂದಿ ಹಾದಿ ಹಾಡಿದ ಪೆಟ್ರೋಲ್ ಬಂಕ್‌ಗಳು

ಮಹಾರಾಷ್ಟ್ರದಲ್ಲಿ ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 3,390 ಹೊಸ ಪ್ರಕರಣಗಳು ವರದಿಯಾಗಿವೆ. ಕರೋನಾದಿಂದಾಗಿ ಮಹಾರಾಷ್ಟ್ರದಲ್ಲಿ ಇದುವರೆಗೂ 3,890 ಜನರು ಸಾವನ್ನಪ್ಪಿದ್ದಾರೆ.

Most Read Articles

Kannada
English summary
Pune Petrol Bunks allow customers to refuel themselves. Read in Kannada.
Story first published: Monday, June 15, 2020, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X