ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕರೆತರಲು ದೇಶಾದ್ಯಂತ ಹಲವಾರು ಬಸ್ಸು ಹಾಗೂ ರೈಲುಗಳನ್ನು ಓಡಿಸಲಾಗುತ್ತಿದೆ. ಈಗ ಪಂಜಾಬ್ ಸರ್ಕಾರವು ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕರೆದೊಯ್ಯಲು ಉಚಿತ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಸೇವೆಯನ್ನು ಸೋಮವಾರದಿಂದ ಆರಂಭಿಸಲಾಗಿದೆ.

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಮೊದಲ ಬಸ್‌ನಲ್ಲಿ ಜಲಂಧರ್‌ನಿಂದ 30 ವಲಸೆ ಕಾರ್ಮಿಕರನ್ನು ಕರೆದೊಯ್ಯಲಾಗಿದೆ. ಈ ಎಲ್ಲಾ ಬಸ್‌ಗಳ ವೆಚ್ಚವನ್ನು ಪಂಜಾಬ್ ಸರ್ಕಾರವು ಭರಿಸಲಿದೆ. 55 ರೈಲುಗಳ ಸಂಚಾರವನ್ನು ಸೇವೆಯನ್ನು ಆರಂಭಿಸಿದ ನಂತರ ಈ ಸೇವೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ಉತ್ತರ ಪ್ರದೇಶದಲ್ಲಿರುವ ಅನೇಕ ಊರುಗಳಿಗೆ ಜನರನ್ನು ಸಾಗಿಸಲಾಗುವುದು.

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಜನರು ಸಿಟಿ ಬಸ್ ನಿಲ್ದಾಣವನ್ನು ತಲುಪಿದ ತಕ್ಷಣ, ಆರೋಗ್ಯ ಇಲಾಖೆಯ ವಿಶೇಷ ತಂಡವು ಅವರನ್ನು ಪರೀಕ್ಷೆಗೆ ಒಳಪಡಿಸಿತು. ನಂತರ 30 ಜನರನ್ನು ಮಾತ್ರ ಬಸ್‌ನಲ್ಲಿ ಕೂರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಯಿತು. ಇದರ ಜೊತೆಗೆ ಪ್ರಯಾಣಿಕರಿಗೆ ನೀರು, ಆಹಾರ ಒದಗಿಸಲಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಎಲ್ಲಾ ಬಸ್ ವ್ಯವಸ್ಥೆಗಳನ್ನು ಸಂಬಂಧಪಟ್ಟ ಜಿಲ್ಲಾಡಳಿತಗಳು ಮಾಡಿದ್ದು, ಮುಂದಿನ ದಿನಗಳಲ್ಲಿ ಉಚಿತ ಕಾರ್ಮಿಕ ಬಸ್ ಆರಂಭಿಸಲಾಗುವುದು. ಈ ಬಸ್ಸುಗಳು ಪೂರ್ತಿಯಾಗಿ ಉಚಿತವಾಗಿರಲಿದ್ದು, ವಲಸೆ ಕಾರ್ಮಿಕರು ಒಂದು ಪೈಸೆಯನ್ನೂ ನೀಡಬೇಕಾಗಿಲ್ಲ.

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಪಂಜಾಬ್ ಸರ್ಕಾರ ನೀಡುತ್ತಿರುವ ಈ ಉಚಿತ ಬಸ್ಸುಗಳು ಗೌತಮ್ ಬುದ್ಧ ನಗರ, ಮೀರತ್, ಗಾಜಿಯಾಬಾದ್, ಬುಲ್ಯಾಂಡ್ ನಗರ, ಅಲಿಗಢ, ಮುಜಫರ್ ನಗರ, ಬಾಗಪತ್, ಸಹರಾನ್‌ಪುರ, ಮಥುರಾಗಳಿಗೆ ಹೋಗಲಿದ್ದು, ಕಾರ್ಮಿಕರನ್ನು ಸಂಬಂಧಪಟ್ಟ ಊರುಗಳಿಗೆ ತಲುಪಿಸಲಿವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಇದರ ಜೊತೆಗೆ ಪಂಜಾಬ್‌ನಿಂದ ಮೂರು ಕಾರ್ಮಿಕ ರೈಲುಗಳನ್ನು ಪೂರ್ಣಿಯಾ, ಅರೇರಿಯಾ, ಬಿಹಾರ ಹಾಗೂ ಉತ್ತರ ಪ್ರದೇಶದ ಜೈನಪುರಕ್ಕೆ ಓಡಿಸಲಾಗಿದೆ. ವಲಸೆ ಕಾರ್ಮಿಕರನ್ನು ಜಲಂಧರ್‌ನಿಂದ ಅವರ ಊರುಗಳಿಗೆ ಕಳುಹಿಸಲು ರೂ.3.93 ಕೋಟಿ ಖರ್ಚು ಮಾಡಲಾಗಿದೆ.

ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದ ಪಂಜಾಬ್

ಉತ್ತರಪ್ರದೇಶ ಸರ್ಕಾರವು ಸಹ 1000 ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ದೇಶಾದ್ಯಂತ ಕಾರ್ಮಿಕ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಸದ್ಯಕ್ಕೆ ಪ್ರತಿದಿನ 300ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Punjab starts free bus service for migrant workers. Read in Kannada.
Story first published: Wednesday, May 20, 2020, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X