ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆಯು ಜೂನ್ 30ರವರೆಗೆ ಬುಕ್ಕಿಂಗ್ ಮಾಡಲಾದ ಎಲ್ಲಾ ಸಾಮಾನ್ಯ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಿದೆ. ಸಾಮಾನ್ಯ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು, ಬುಕ್ಕಿಂಗ್ ಹಣವನ್ನು ಶೀಘ್ರದಲ್ಲೇ ರಿಫಂಡ್ ಮಾಡಲಾಗುವುದೆಂದು ಭಾರತೀಯ ರೈಲ್ವೆ ಹೇಳಿದೆ.

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆಯು ಸಾಮಾನ್ಯ ರೈಲುಗಳನ್ನು ರದ್ದುಗೊಳಿಸಿದ್ದರೂ, ಸದ್ಯಕ್ಕೆ ಓಡಾಟ ಆರಂಭಿಸಿರುವ ವಿಶೇಷ ರೈಲುಗಳ ಸೇವೆಯು ಮುಂದುವರೆಯಲಿದೆ. ಟಿಕೆಟ್‌ಗಳ ರದ್ದತಿಯು ಈ ರೈಲುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸದ್ಯಕ್ಕೆ ನವದೆಹಲಿಯಿಂದ 12 ವಿಶೇಷ ರೈಲುಗಳು ಸಂಚರಿಸುತ್ತಿವೆ.

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ದೇಶಾದ್ಯಂತ ಓಡಿಸಲಾಗುತ್ತಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕರೆದೊಯ್ಯಲಾಗುತ್ತಿದೆ. ಸಾಮಾನ್ಯ ಜನರಿಗಾಗಿ ನವದೆಹಲಿಯಿಂದ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಈಗ ಸಾಮಾನ್ಯ ರೈಲುಗಳ ಸಂಚಾರವನ್ನು ಮಾತ್ರ ರದ್ದುಪಡಿಸಲಾಗಿದೆ. ಈ ರೈಲುಗಳಿಗೆ ಬುಕ್ಕಿಂಗ್ ಆರಂಭಿಸಲಾಗಿತ್ತು. ರೈಲ್ವೆ ಇಲಾಖೆಯು ಜೂನ್‌ ಕೊನೆಯವರೆಗೆ ಯಾವುದೇ ಸಾಮಾನ್ಯ ರೈಲುಗಳನ್ನು ಓಡಿಸುವುದಿಲ್ಲ.

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಮಾರ್ಚ್ 25ರಿಂದ ಎಲ್ಲಾ ರೀತಿಯ ಎಕ್ಸ್‌ಪ್ರೆಸ್, ಪ್ಯಾಸೆಂಜರ್, ಲೋಕಲ್ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇವುಗಳ ಸೇವೆಯನ್ನು ಇನ್ನೂ ಆರಂಭಿಸಿಲ್ಲ. ಈ ತಿಂಗಳಾಂತ್ಯಕ್ಕೆ ಸಾಮಾನ್ಯ ರೈಲು ಸೇವೆಯನ್ನು ಹಲವು ಸುರಕ್ಷತಾ ಮಾನದಂಡಗಳೊಂದಿಗೆ ಪುನರಾರಂಭಿಸಬಹುದೆಂಬ ವದಂತಿಗಳಿದ್ದವು. ಈಗ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಬಿದ್ದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಈಗ ಆರಂಭಿಸಿರುವ ವಿಶೇಷ ರೈಲುಗಳಿಗೆ ಮೊದಲ ದಿನ 80,000 ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದ್ದು, ಸುಮಾರು ರೂ.16 ಕೋಟಿ ಸಂಗ್ರಹವಾಗಿದೆ. ಪ್ರಯಾಣದ ವೇಟಿಂಗ್ ಲಿಸ್ಟ್ ಅನ್ನು ಮೇ 22ರಿಂದ ಬಿಡುಗಡೆಗೊಳಿಸಲಾಗುವುದು.

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಲಾಕ್‌ಡೌನ್ ಕಾರಣಕ್ಕೆ ದೇಶಾದ್ಯಂತ ವಲಸೆ ಕಾರ್ಮಿಕರು ಮಾತ್ರವಲ್ಲದೇ ಲಕ್ಷಾಂತರ ಜನರು ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ರೈಲು, ವಿಮಾನ ಸೇರಿದಂತೆ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆಗಳು ಇಲ್ಲದಿರುವ ಕಾರಣಕ್ಕೆ ಅವರು ತಮ್ಮ ಊರಿಗೆ ಮರಳಲು ಸಾಧ್ಯವಾಗುತ್ತಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪ್ರಯಾಣಿಕರೇ ಗಮನಿಸಿ: ಟಿಕೆಟ್‌ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ

ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಸೇವೆಯನ್ನು ಹೊಸ ಸುರಕ್ಷತಾ ನಿಯಮಗಳೊಂದಿಗೆ ಮತ್ತೆ ಆರಂಭಿಸಲಾಗುವುದೆಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರವು ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡುವ ನಿರೀಕ್ಷೆಗಳಿವೆ.

Article Published On: Thursday, May 14, 2020, 19:55 [IST]
English summary
Railways cancels tickets booked till 30 June. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+