ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಸುಮಾರು ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲದಿಂದ ಸ್ಥಗಿತಗೊಂಡಿದ್ದ ತತ್ಕಾಲ್ ಬುಕ್ಕಿಂಗ್ ಸೇವೆಯನ್ನು ಭಾರತೀಯ ರೈಲ್ವೆ ಪುನರಾರಂಭಿಸಿದೆ. ಇಂದಿನಿಂದ ಪುನರಾರಂಭಗೊಂಡಿರುವ ಈ ಸೇವೆ ಸದ್ಯಕ್ಕೆ ವಿಶೇಷ ಶ್ರಮಿಕ್ ರೈಲು ಹಾಗೂ ವಿಶೇಷ ರಾಜಧಾನಿ ರೈಲುಗಳಿಗೆ ಮಾತ್ರ ಅನ್ವಯಿಸಲಿದೆ.

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಸದ್ಯದ ಪರಿಸ್ಥಿಯಲ್ಲಿ ಭಾರತೀಯ ರೈಲ್ವೇ ಪ್ಯಾಸೆಂಜರ್ ಟ್ರೇನ್ ಹಾಗೂ ಲೋಕಲ್ ಟ್ರೇನ್ ಗಳ ಸಂಚಾರವನ್ನು ಆಗಸ್ಟ್ 12ರವರೆಗೆ ಸ್ಥಗಿತಗೊಳಿಸಿದೆ. ಸದ್ಯಕ್ಕೆ ಎರಡು ರೀತಿಯ ವಿಶೇಷ ಕಾರ್ಮಿಕ ರೈಲು ಹಾಗೂ ವಿಶೇಷ ರಾಜಧಾನಿ ರೈಲುಗಳ ಸಂಚಾರವನ್ನು ಮಾತ್ರ ಆರಂಭಿಸಲಾಗಿದೆ. ಈ ತತ್ಕಾಲ್ ಬುಕ್ಕಿಂಗ್ ಸೇವೆಯು ಈ ರೈಲುಗಳಿಗೆ ಮಾತ್ರ ಅನ್ವಯವಾಗಲಿದೆ.

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಕರೋನಾ ವೈರಸ್ ಕಾರಣದಿಂದಾಗಿ ಮಾರ್ಚ್‌ನಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ವಿಶೇಷ ರೈಲುಗಳ ಸಂಚಾರ ಆರಂಭವಾಗಿರುವ ಕಾರಣಕ್ಕೆ ಸೇವೆಯನ್ನು ಆರಂಭಿಸಲಾಗಿದೆ. ಎಸಿ ಕ್ಲಾಸ್‌ಗಳಿಗಾಗಿ ಬೆಳಿಗ್ಗೆ 10 ಗಂಟೆಯಿಂದ ಹಾಗೂ ಸ್ಲೀಪರ್ ಕ್ಲಾಸ್‌ಗಳಿಗೆ ಬೆಳಿಗ್ಗೆ 11 ಗಂಟೆಯಿಂದ ತತ್ಕಾಲ್ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಭಾರತೀಯ ರೈಲ್ವೆ ಮುಂಗಡ ಬುಕ್ಕಿಂಗ್ ಅವಧಿಯನ್ನು 30 ದಿನಗಳಿಂದ 120 ದಿನಗಳವರೆಗೆ ವಿಸ್ತರಿಸಿದೆ. ಈ ಸೌಲಭ್ಯವು ಎಲ್ಲಾ ವಿಶೇಷ ರೈಲುಗಳಿಗೂ ಅನ್ವಯಿಸಲಿದೆ. ಇದರಿಂದಾಗಿ ಪ್ರಯಾಣಿಕರು ಈಗ 120 ದಿನಗಳ ಮೊದಲು ಟಿಕೆಟ್ ಬುಕ್ಕಿಂಗ್ ಮಾಡಬಹುದು.

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಇದರ ಜೊತೆಗೆ ಎಲ್ಲಾ ರೈಲುಗಳಲ್ಲಿ ಪಾರ್ಸೆಲ್ ಸೌಲಭ್ಯವನ್ನು ಮುಂದುವರಿಸಲಾಗುತ್ತದೆ. ತತ್ಕಾಲ್ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡುವ ಪ್ರಯಾಣಿಕರು ತಮ್ಮೊಂದಿಗೆ ಐಡಿ ಪ್ರೂಫ್ ಹೊಂದಿರುವುದು ಕಡ್ಡಾಯವಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ಸಾಕಷ್ಟು ಜನರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ, ಒಬ್ಬ ಪ್ರಯಾಣಿಕರ ಐಡಿ ಸಾಕಾಗುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಗಳನ್ನು ಗುರುತಿನ ಚೀಟಿಯ ದಾಖಲೆಗಳನ್ನಾಗಿ ಪರಿಗಣಿಸಲಾಗುವುದು.

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ತತ್ಕಾಲ್ ಟಿಕೆಟ್ ಬುಕಿಂಗ್ ಪುನರಾರಂಭದ ಬಗ್ಗೆ ಸೆಂಟ್ರಲ್ ರೈಲ್ವೆಯ ಪ್ರೊ ಶಿವಾಜಿ ಸುತಾರ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ 0 ನಂಬರ್ ನಿಂದ ಆರಂಭವಾಗುವ ರೈಲುಗಳಲ್ಲಿ ಬುಕ್ಕಿಂಗ್ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ದೇಶದಲ್ಲಿ ಕರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ರವರೆಗಿನ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಎಲ್ಲಾ ಟಿಕೆಟ್ ಹಣವನ್ನು ಶೀಘ್ರದಲ್ಲೇ ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದೆಂದು ತಿಳಿಸಿದೆ.

ತತ್ಕಾಲ್ ಸೇವೆಗಳನ್ನು ಪುನರಾರಂಭಿಸಿದ ರೈಲ್ವೇ ಇಲಾಖೆ

ದೇಶದಲ್ಲಿ ಪ್ರಸ್ತುತ 20,000ಕ್ಕೂ ಹೆಚ್ಚು ರೈಲ್ವೆ ಬೋಗಿಗಳನ್ನು ಕರೋನಾ ಐಸೊಲೇಷನ್ ವಾರ್ಡ್‌ಗಳಾಗಿ ಬಳಸಲಾಗುತ್ತಿದೆ. ದೇಶದ ಅನೇಕ ನಗರಗಳಲ್ಲಿ ರೈಲ್ವೆ ಬೋಗಿಗಳನ್ನು ಮಾರ್ಪಡಿಸುವ ಮೂಲಕ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

Most Read Articles

Kannada
English summary
Railways starts Tatkal ticket booking service from today. Read in Kannada.
Story first published: Monday, June 29, 2020, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X