ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಫ್ಯೂಯಲ್ ಎನರ್ಜಿಯನ್ನು ಅನ್ನು ಎಲೆಕ್ಟ್ರಿಕ್ ಎನರ್ಜಿಗೆ ಬದಲಿಸುವುದಾಗಿ ಘೋಷಿಸಿದ್ದಾರೆ. ಮುಖೇಶ್ ಅಂಬಾನಿ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ 2035ರ ವೇಳೆಗೆ ಕಾರ್ಬನ್ ಡೈ ಆಕ್ಸೈಡ್ ನಿಂದ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ಮುಂಬರುವ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪರಿಸರ ಸ್ನೇಹಿ ಎನರ್ಜಿಯ ಉತ್ಪಾದನೆಯನ್ನು ಆರಂಭಿಸಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದನೆಗೆ ಅನುಕೂಲವಾಗುವಂತಹ ಹಾಗೂ ರಾಸಾಯನಿಕ ವಸ್ತುವಾಗಿ ಪರಿವರ್ತಿಸುವ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಟೆಕ್ನಾಲಜಿ ಕಂಪನಿಯ ರಿಫೈನರಿಗಳಿಂದ ಉತ್ಪಾದನೆಯಾಗುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿವರ್ತಿಸಲಿದೆ.

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿರವರು ಮುಂದಿನ 15 ವರ್ಷಗಳ ಅವಧಿಯಲ್ಲಿ ಕಂಪನಿಯು ದೊಡ್ಡ ಬದಲಾವಣೆಯನ್ನು ಮಾಡಲಿದೆ. ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಬಳಸಿಕೊಂಡು ಶುದ್ಧ ಶಕ್ತಿ ಹಾಗೂ ಹೊಸ ರಾಸಾಯನಿಕ ಉತ್ಪನ್ನಗಳನ್ನು ರಚಿಸುವ ಕೆಲಸವನ್ನು ನಾವು ಆರಂಭಿಸಲಿದ್ದೇವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ನಾವು ಪರಿಸರವನ್ನು ಸ್ವಚ್ವಗೊಳಿಸಲು ನಿರ್ಧರಿಸಿದ್ದು, ಅದಕ್ಕೆ ಬದ್ಧರಾಗಿದ್ದೇವೆ. ಮುಂಬರುವ ದಿನಗಳಲ್ಲಿ ನಾವು ಪೆಟ್ರೋಲ್ -ಡೀಸೆಲ್ ವಾಹನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಬೇಕಾಗುತ್ತದೆ ಎಂದು ಹೇಳಿದರು.

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ಇಂಧನ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲಾಗುವುದು. ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೇಡಿಕೆ ಹಾಗೂ ಬಳಕೆ ಕಡಿಮೆಯಾಗಲಿದೆ. ಈಗಿನಿಂದಲೇ ಇವುಗಳ ಬಳಕೆಗೆ ಸಿದ್ಧರಾಗಿರಬೇಕು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಸೋಲಾರ್, ಹೈಡ್ರೋಜನ್, ಬ್ಯಾಟರಿ ಹಾಗೂ ಫ್ಯೂಯಲ್ ಸೆಲ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಬಳಕೆಯನ್ನು ಉತ್ತೇಜಿಸಲು ರಿಲಯನ್ಸ್ ಕಂಪನಿ ಬಯಸಿದೆ.

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ತನ್ನ ಡಿಜಿಟಲ್ ಟೆಕ್ನಾಲಜಿಯ ಮೂಲಕ ಭಾರತದಲ್ಲಿ ಎಲೆಕ್ಟ್ರೋಲೈಸರ್ಸ್ ಹಾಗೂ ಫ್ಯೂಯಲ್ ಸೆಲ್ ಗಳನ್ನು ಅಭಿವೃದ್ಧಿಪಡಿಸಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ರಿಫೈನರಿ ಘಟಕವನ್ನು ಹೊಂದಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಕಾರ್ಬನ್ ಡೈ ಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿಸಲಿದೆ ರಿಲಯನ್ಸ್

ಈ ಘಟಕದಲ್ಲಿ ಪ್ರತಿದಿನ 1.36 ಮಿಲಿಯನ್ ಕಚ್ಚಾ ತೈಲವನ್ನು ರಿಫೈನ್ ಮಾಡಲಾಗುತ್ತದೆ. ಇದರ ಜೊತೆಗೆ ರಿಲಯನ್ಸ್ ವಿಶ್ವದ ಅತಿದೊಡ್ಡ ಪೆಟ್ರೋಕೆಮಿಕಲ್ ಉತ್ಪಾದಕ ಕಂಪನಿಯು ಹೌದು. ಕಂಪನಿಯು ತನ್ನ ಜಾಮ್‌ನಗರ ರಿಫೈನರಿ ಘಟಕದಿಂದ ಹೊರಬರುವ ಇಂಗಾಲದ ಡೈಆಕ್ಸೈಡ್ ಅನ್ನು ಪರಿಸರ ಸ್ನೇಹಿಯಾಗಿ ಪರಿವರ್ತಿಸುವ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುತ್ತಿದೆ.

Most Read Articles

Kannada
English summary
Reliance Industries to convert carbon dioxide into clean energy. Read in Kannada.
Story first published: Thursday, July 16, 2020, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X