ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಫ್ರೆಂಚ್ ಮೂಲದ ವಾಹನ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಕಂಪನಿಯು ತನ್ನ 2020ರ ಕ್ವಿಡ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಗೊಳಿಸಲಾದ ಬಿಎಸ್-6 ರೆನಾಲ್ಟ್ ಕ್ವಿಡ್ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.92 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಬಿಎಸ್-6 ರೆನಾಲ್ಟ್ ಕ್ವಿಡ್ ಅನ್ನು 6 ವೆರಿಯೆಂಟ್‍‍ಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಪ್ರತಿ ವೆರಿಯೆಂಟ್‍ಗಳ ಮೇಲೆ ಬೆಲೆಯನ್ನು ರೂ.9 ಸಾವಿರದಷ್ಟು ಹೆಚ್ಚಿಸಿದೆ. ಈ ಹ್ಯಾಚ್‍‍ಬ್ಯಾಕ್‍‍ನಲ್ಲಿ ಎರಡೂ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 0.8 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 54 ಬಿ‍‍ಹೆಚ್‍ಪಿ ಪವರ್ ಮತ್ತು 72 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಇನ್ನೂ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 68 ಬಿ‍‍ಹೆಚ್‍‍ಪಿ ಪವರ್ ಮತ್ತು 91 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ನವೀಕರಿಸಿರುವುದನ್ನು ಹೊರತಾಗಿ ವಿನ್ಯಾಸ ಮತ್ತು ಫೀಚರ್ಸ್‍‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಇದಕ್ಕಾಗಿ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿ‍ಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್‍ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ಇತರ ಸುರಕ್ಷತಾ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಬಿಡುಗಡೆಗೊಳಿಸಿದ ಕ್ವಿಡ್ ಕಾರಿನ ಮುಂಭಾಗದ ಹೆಡ್‍‍ಲ್ಯಾಂಪ್‍‍ನಲ್ಲಿ ಸಿ ಆಕಾರದ ಲೈಟ್, ರೆನಾಲ್ಟ್ ಸಂಸ್ಥೆಯ ಲೋಗೋ ಹೈಲೈಟ್ ಮಾಡುವ ಹಾಗೆ ರೇಜರ್ ಶಾರ್ಪ್ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್, ಫುಲ್ ವ್ಹೀಲ್ ಕವರ್‍‍ಗಳು ಮತ್ತು ಬಾಡಿ ಕಲರ್‍ಡ್ ಬಂಪರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಇನ್ನೂ ರೆನಾಲ್ಟ್ ಕ್ವಿಡ್ ಟಾಪ್-ಸ್ಪೆಕ್ ಮಾದರಿಯಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍ಪ್ಲೇ ಜೊತೆಯಲ್ಲಿ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ 2015ರಲ್ಲಿ ತಮ್ಮ ಮೊದಲನೆಯ ತಲೆಮಾರಿನ ಕ್ವಿಡ್ ಹ್ಯಾಚ್‍‍ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಕಡಿಮೆ ಬೆಲೆ ಮತ್ತು ಹೆಚ್ಚಿನ ಫೀಚರ್ಸ್‍‍ಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ರೆನಾಲ್ಟ್ ಸಂಸ್ಥೆಯು ಇತ್ತೀಚೆಗೆ ತನ್ನ ಜನಪ್ರಿಯ ಮಿನಿ ಎಂಪಿವಿ ಆವೃತ್ತಿಯಾದ ಟ್ರೈಬರ್ ಹೊಸ ಕಾರನ್ನು ಬಿಡುಗಡೆಗೊಳಿಸಿತ್ತು. ಟ್ರೈಬರ್ ಆವೃತ್ತಿಯಲ್ಲಿ ಈ ಹಿಂದಿನಂತಯೇ 1.0-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗಿದ್ದು, ಬಿಎಸ್-6 ನಿಯಮ ಅಳವಡಿಕೆ ನಂತರವು ಹೊಸ ಕಾರಿನ ಪರ್ಫಾಮೆನ್ಸ್‌ನಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು

ಬಿಎಸ್-6 ರೆನಾಲ್ಟ್ ಕ್ವಿಡ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೋ, ದಟ್ಸನ್ ರೆಡಿ ಗೋ ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿ‍ಎಸ್-6 ಎಂಜಿನ್‍ನೊಂದಿಗೆ ರೆನಾಲ್ಟ್ ಕ್ವಿಡ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Renault Kwid BS6 launched at Rs 2.92 lakh. Read in Kannada.
Story first published: Wednesday, January 29, 2020, 11:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X