ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ರಾಜಸ್ಥಾನ ಸರ್ಕಾರವು 2019ರ ಮೋಟಾರು ವಾಹನ ಕಾಯ್ದೆಯನ್ನು ರಾಜಸ್ಥಾನದಲ್ಲಿ ಜಾರಿಗೊಳಿಸಿದೆ. ಮೋಟಾರು ವಾಹನ ಕಾಯ್ದೆ 2019ರ ಅನ್ವಯ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ದಂಡದ ಮೊತ್ತವನ್ನು ಹೆಚ್ಚಿಸಿರುವುದನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರು ಸ್ವಾಗತಿಸಿದ್ದಾರೆ.

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ದಂಡದ ಮೊತ್ತವನ್ನು ಹೆಚ್ಚಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.ಭಿಲ್ವಾರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘವು ಆಯೋಜಿಸಿದ್ದ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಲು ಉತ್ಪಾದಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ರಾಜಸ್ಥಾನ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಸ್ತೆ ಸುರಕ್ಷತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು. ಇದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಲಿದೆ ಎಂದು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ಹಾಲು ಉತ್ಪಾದಕರಿಗೆ 15 ಸಾವಿರ ಹೆಲ್ಮೆಟ್‌ಗಳನ್ನು ವಿತರಿಸಲು ಹಾಲು ಉತ್ಪಾದಕರ ಸಹಕಾರ ಸಂಘವು ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ಜಿಲ್ಲಾ ಕೇಂದ್ರಗಳಲ್ಲಿ ಚಾಲನಾ ತರಬೇತಿ ಸಂಸ್ಥೆಗಳನ್ನು ತೆರೆಯುವಂತೆಯೂ ಸಹ ಅವರು ಹೇಳಿದರು. ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳು ಅಪಘಾತ ಸಂಭವಿಸಿದಲ್ಲಿ ಅಪಾಯದ ಪ್ರಮಾಣವನ್ನು 50%ನಷ್ಟು ಕಡಿಮೆಗೊಳಿಸುತ್ತವೆ ಎಂದು ಅವರು ಹೇಳಿದರು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದ್ದು, ಅವುಗಳ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ರಸ್ತೆ ಅಪಘಾತಗಳನ್ನು 50%ನಷ್ಟು ಕಡಿಮೆಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಶೀಘ್ರದಲ್ಲೇ ಪಠ್ಯದ ಭಾಗವಾಗಲಿವೆ ಸಂಚಾರಿ ಸುರಕ್ಷತಾ ನಿಯಮಗಳು

ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ ಎಂದು ರಾಜಸ್ಥಾನದ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಖಚಾರಿವಾಸ್ ಹೇಳಿದ್ದಾರೆ. ರಾಶ್ ಡ್ರೈವಿಂಗ್ ಮತ್ತು ಅಪಘಾತಗಳಿಂದ ಜನರನ್ನು ರಕ್ಷಿಸಲು ರಾಜ್ಯದಲ್ಲಿ 2019ರ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Road safety awareness to be included in academic curriculum. Read in Kannada.
Story first published: Friday, July 10, 2020, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X