ಹೊಸ ಜೀಪ್ ವ್ರಾಂಗ್ಲರ್‍ನಲ್ಲಿ ಕಂಡು ಬಂದ ಸೈಫಿನಾ
ನಮ್ಮ ದೇಶದಲ್ಲಿ ಶ್ರೀಮಂತರು, ಉದ್ಯಮಿಗಳು ಹಾಗೂ ಚಿತ್ರತಾರೆಯರು ದುಬಾರಿ ಬೆಲೆಯ ಕಾರು ಹಾಗೂ ಬೈಕ್‍ಗಳನ್ನು ಹೊಂದಿರುವುದು ಸಾಮಾನ್ಯ. ಕೆಲವು ಚಿತ್ರ ತಾರೆಯರು ಹೊಂದಿರುವಂತಹ ಐಷಾರಾಮಿ ಕಾರುಗಳು ಉದ್ಯಮಿಗಳ ಮನೆಗಳಲ್ಲಿಯೂ ಕಂಡುಬರುವುದಿಲ್ಲ.

ಇವರ ಜೊತೆಗೆ ಕೆಲವು ಕ್ರೀಡಾಪಟುಗಳು ಸಹ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಯಾವುದೇ ಹೊಸ ಐಷಾರಾಮಿ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಆ ಕಾರುಗಳು ಸೆಲೆಬ್ರಿಟಿಗಳ ಮನೆ ಸೇರುವುದು ಖಚಿತ. ಆ ಸೆಲೆಬ್ರಿಟಿಗಳು ಆ ಕಾರಿನಲ್ಲಿ ಸುತ್ತಾಡುವುದು ಸಹಜ.

ಸೆಲೆಬ್ರಿಟಿಗಳು ಖರೀದಿಸುವ ಹೊಸ ಕಾರು ಆಟೋ ಮೊಬೈಲ್ ಉದ್ಯಮದಲ್ಲಿ ಸೆನ್ಸೆಷನಲ್ ಸುದ್ದಿಯನ್ನು ಸೃಷ್ಟಿಸುತ್ತದೆ. ಈಗ ಬಾಲಿವುಡ್‍ನ ಇಬ್ಬರು ಸೆಲೆಬ್ರಿಟಿಗಳು ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮತ್ತ್ಯಾರು ಅಲ್ಲ, ಸೈಫಿನಾ ಎಂದೇ ಖ್ಯಾತರಾಗಿರುವ ಬಾಲಿವುಡ್‍ನ ತಾರಾ ದಂಪತಿಗಳಾದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್.

2012ರಲ್ಲಿ ವಿವಾಹವಾದ ಈ ದಂಪತಿ ಮುಂಬೈನಲ್ಲಿ ನೆಲೆಸಿದ್ದಾರೆ. ಈಗ ಮುಂಬೈನಲ್ಲಿ ಈ ದಂಪತಿ ಜೀಪ್ ವ್ರಾಂಗ್ಲರ್ ಅನ್‍ಲಿಮಿಟೆಡ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಜೀಪ್ ವ್ರಾಂಗ್ಲರ್‍ನಲ್ಲಿ ಪ್ರಯಾಣಿಸುತ್ತಿರುವ ಫೋಟೊಗಳು ವೈರಲ್ ಆಗಿವೆ. ಈ ಫೋಟೊಗಳನ್ನು ಫ್ರೀ ಪ್ರೆಸ್ ಜರ್ನಲ್ ಶೇರ್ ಮಾಡಿದೆ.

ಈ ಕಾರು ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುವ ಹಾರ್ಡ್ ಕೋರ್ ಆಫ್ ರೋಡಿಂಗ್‍ಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.63.94 ಲಕ್ಷಗಳಾಗಿದೆ. ಕಾರು ಖರೀದಿಸುವ ವೇಳೆಗೆ ಆಯಾ ರಾಜ್ಯಗಳಲ್ಲಿನ ತೆರಿಗೆ ಸೇರಿದಂತೆ ಈ ಕಾರಿನ ಬೆಲೆಯು ಮತ್ತಷ್ಟು ಹೆಚ್ಚಾಗಲಿದೆ.

ಜೀಪ್ ವ್ರಾಂಗ್ಲರ್ ಅನ್‍ಲಿಮಿಟೆಡ್ ಐದು ಡೋರಿನ ಐಷಾರಾಮಿ ಕಾರ್ ಆಗಿದೆ. ಈ ಕಾರ್ ಅನ್ನು ಜೀಪ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರ್ ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಈ ಕಾರು ಅಂತರ್‍ರಾಷ್ಟ್ರೀಯ ಮಾನದಂಡದ ಸೌಲಭ್ಯಗಳನ್ನು ಹೊಂದಿದೆ. ಕ್ಲಾಸಿಕ್ ಆಗಿ ಕಾಣುವ ಈ ಕಾರು ಆಧುನಿಕ ಟೆಕ್ನಾಲಜಿಗಳನ್ನು ಹೊಂದಿದೆ. ಈ ಕಾರಿನಲ್ಲಿ ಎನ್‍ಎಸಿ ಟೆಕ್ನಾಲಜಿ ಹೊಂದಿರುವ ಆಪಲ್ ಕಾರ್‍ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳಿಗೆ ಹೊಂದಿಕೊಳ್ಳುವ 8.4 ಇಂಚಿನ ಟಚ್‍ಸ್ಕ್ರೀನ್ ಸಿಸ್ಟಂ ಅಳವಡಿಸಲಾಗಿದೆ.

ಈ ಕಾರು ಕ್ವಾಲಿಟಿಯಲ್ಲಿ ಮಾತ್ರ ಪ್ರೀಮಿಯಂ ಆಗಿರದೇ, ಐಷಾರಾಮಿಯಲ್ಲೂ ಪ್ರೀಮಿಯಂ ಆಗಿದೆ. ಈ ಕಾರಿನಲ್ಲಿರುವ ಸೀಟು, ಮೃದುವಾಗಿರುವ ಲಗ್ಷುರಿ ಫೀಲ್ ನೀಡುವ ಲೆದರ್ ಬ್ಲಾಂಕೆಂಟ್ ಅನ್ನು ಹೊಂದಿದೆ.

ಈ ಕಾರಿನಲ್ಲಿ ಸ್ಟಾರ್ ಹೋಟೆಲ್‍ಗಳಲ್ಲಿರುವಂತಹ ಸೌಲಭ್ಯಗಳನ್ನು ನೀಡಲಾಗಿದೆ. ಈ ತಾರಾ ದಂಪತಿ ಎಲ್ಲಿಗೆ ಹೋಗುತ್ತಿದ್ದರು ಎಂಬುದು ತಿಳಿದು ಬಂದಿಲ್ಲ. ಕರೀನಾ ಕಪೂರ್‍ರವರು ಸದ್ಯಕ್ಕೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಿತ್ರದಲ್ಲಿ ಹಾಗೂ ಕರನ್ ಜೋಹಾರ್‍ರವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಸೈಫ್ ಅಲಿ ಖಾನ್‍ರವರ ಇತ್ತೀಚಿನ ಚಿತ್ರ ಜವಾನಿ ಜಾನೆಮನ್ ಚಿತ್ರ ಹಿಟ್ ಆಗಿದೆ. ಈ ಚಿತ್ರದಲ್ಲಿ ಟಬು ಸಹ ನಟಿಸಿದ್ದಾರೆ. ಈ ತಾರಾ ದಂಪತಿ ಮಾತ್ರವಲ್ಲದೇ ಇನ್ನು ಹಲವಾರು ಬಾಲಿವುಡ್ ತಾರೆಯರು ತಮ್ಮ ಐಷಾರಾಮಿ ಕಾರುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.


Click it and Unblock the Notifications








