ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಸೀಟ್ ಸ್ಪೇನ್‌ನ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದು. ಈ ಕಂಪನಿಯು ಭತ್ತದ ಹೊಟ್ಟಿನಿಂದ ಕಾರುಗಳಿಗೆ ಅಗತ್ಯವಿರುವ ಬಿಡಿ ಭಾಗಗಳನ್ನು ತಯಾರಿಸುವುದಾಗಿ ತಿಳಿಸಿದೆ. ಸಾಮಾನ್ಯವಾಗಿ ಕಾರಿನ ಭಾಗಗಳನ್ನು ತಯಾರಿಸಲು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ.

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಆದರೆ ಪ್ಲಾಸ್ಟಿಕ್ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ಲಾಸ್ಟಿಕ್ ಅನ್ನು ಹಲವು ವಿಷಯುಕ್ತ ಅಂಶಗಳಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬಹುದಾದರೂ, ಪ್ಲಾಸ್ಟಿಕ್ ಹಲವು ವಿಧದ ಹಾನಿಕಾರಕ ಅನಿಲಗಳನ್ನು ಹೊರಸೂಸುತ್ತದೆ. ಈ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ವಿಶ್ವದ ಹಲವು ದೇಶಗಳು ತಮ್ಮ ಜನರಿಗೆ ಸಲಹೆ ನೀಡುತ್ತಿವೆ.

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಈಗ ಸ್ಪ್ಯಾನಿಷ್ ಕಾರು ತಯಾರಕ ಕಂಪನಿಯಾದ ಸೀಟ್ ತನ್ನ ವಾಹನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಲು ಮುಂದಾಗಿದೆ. ಪ್ಲಾಸ್ಟಿಕ್ ಗೆ ಬದಲು ಭತ್ತದ ಹೊಟ್ಟು ಬಳಸಿ ಬಿಡಿ ಭಾಗಗಳನ್ನು ತಯಾರಿಸಲು ಚಿಂತನೆ ನಡೆಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಸೀಟ್ ಕಂಪನಿಯು ಮೊದಲಿಗೆ ಇವುಗಳನ್ನು ಕಾನ್ಸೆಪ್ಟ್ ಮಾದರಿಗಳಲ್ಲಿ ಬಳಸಲು ಯೋಜಿಸಿದೆ. ಜಾಗತಿಕವಾಗಿ ಪ್ರತಿ ವರ್ಷ 700 ಮಿಲಿಯನ್ ಟನ್ ಭತ್ತವನ್ನು ಕೊಯ್ಲು ಮಾಡಲಾಗುತ್ತದೆ. ಇದರಲ್ಲಿ 20% ಅಂದರೆ 140 ಮಿಲಿಯನ್ ಟನ್ ವ್ಯರ್ಥವಾಗುತ್ತದೆ.

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಇದನ್ನು ಮರುಬಳಕೆ ಮಾಡುವ ಉದ್ದೇಶದಿಂದ ಸೀಟ್ ಕಂಪನಿಯು ಈ ಯೋಜನೆಯನ್ನು ಹಮ್ಮಿ ಕೊಂಡಿದೆ. ಪಾಲಿಯುರೆಥೇನ್ ಅಥವಾ ಪಾಲಿಪ್ರೊಪಿಲೀನ್ ನಂತಹ ಇತರ ಕಾಂಫೋನೆಂಟ್ ಗಳೊಂದಿಗೆ ಇದನ್ನು ಬಳಸಲಾಗುವುದು ಎಂದು ಹೇಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಹೀಗೆ ತಯಾರಾದ ಬಿಡಿ ಭಾಗಗಳು ಸೀಟ್ ಕಂಪನಿಯ ಹೊಸ ವಾಹನಗಳಲ್ಲಿ ಬಳಕೆಯಾಗಲಿವೆ. ಇವುಗಳನ್ನು ಕಾರಿನ ಸೈಡ್ ಪ್ಯಾನೆಲ್ ಅಥವಾ ಡೆಕೊರೇಟಿವ್ ಪ್ಯಾನೆಲ್ ಗಳಾಗಿ ಬಳಸಲಾಗುವುದು. ಇದರಿಂದ ಸೀಟ್ ಕಂಪನಿಯು ಕಾರ್ಬನ್ ಡೈಆಕ್ಸೈಡ್ ಬಳಕೆಯನ್ನು ಕಡಿಮೆ ಮಾಡಲಿದೆ.

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಕಾರು ಉತ್ಪಾದನಾ ವೆಚ್ಚವೂ ಸಹ ಗಮನಾರ್ಹವಾಗಿ ಕಡಿಮೆಯಾಗಲಿದೆ. ಕಾರ್ಬನ್ ವಸ್ತುಗಳಿಗೆ ಬದಲು ಭತ್ತದ ಹೊಟ್ಟಿನ ಕಾಂಪೋನೆಂಟ್ ಗಳಿಂದ ಉತ್ಪಾದನೆಯಾಗುವ ಕಾರಣಕ್ಕೆ ವಾಹನಗಳ ತೂಕವು ಸಹ ಕಡಿಮೆಯಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಕಾರಣಕ್ಕೆ ಸೀಟ್ ಕಂಪನಿಯ ಭವಿಷ್ಯದ ವಾಹನಗಳು ವಿಶಿಷ್ಟವಾಗಿದ್ದು, ಹಗುರವಾಗಿರಲಿವೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ವಾಹನಗಳ ಕಡಿಮೆ ತೂಕವು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

ಭತ್ತದ ಹೊಟ್ಟಿನಿಂದ ತಯಾರಾಗಲಿವೆ ಕಾರಿನ ಬಿಡಿ ಭಾಗಗಳು

ಸೀಟ್ ಕಂಪನಿಯು ಭತ್ತದ ಹೊಟ್ಟಿನ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಲು ಮುಂದಾಗಿದೆ. ಸೀಟ್ ಕಂಪನಿಯು ಇತ್ತೀಚಿಗೆ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಈ ಬಗ್ಗೆ ಸೀಟ್ ಕಂಪನಿಯು ಅಧ್ಯಯನವನ್ನು ಆರಂಭಿಸಿದೆ. ಸೀಟ್ ಕಂಪನಿಯು 2050ರ ವೇಳೆಗೆ ಕಾರ್ಬನ್ ಡೈಆಕ್ಸೈಡ್ ಮುಕ್ತ ವಾಹನಗಳನ್ನು ಉತ್ಪಾದಿಸಲು ಯೋಜಿಸಿದೆ.

Most Read Articles

Kannada
English summary
Seat company planning to make car parts from rice husk. Read in Kannada.
Story first published: Friday, November 20, 2020, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X