ಸೆಲ್ಫ್ ಡ್ರೈವ್ ಕಾರು, ಬೈಕ್ ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಕಳೆದ ಕೆಲವು ವರ್ಷಗಳಿಂದ ಬಾಡಿಗೆ ಕಾರು ಹಾಗೂ ಬೈಕ್‌ಗಳ ಉದ್ಯಮವು ದೇಶಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಬಾಡಿಗೆ ವಾಹನಗಳ ಸೇವೆಯನ್ನು ಪ್ರವಾಸಿ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಹಲವಾರು ವರ್ಷಗಳಿಂದ, ಈ ಬಾಡಿಗೆ ವಾಹನಗಳ ಚಾಲಕರು ಸಮಸ್ಯೆಯೊಂದನ್ನು ಎದುರಿಸುತ್ತಿದ್ದರು. ಸ್ಥಳೀಯ ಸಂಚಾರಿ ಪೊಲೀಸರು ಈ ಚಾಲಕರನ್ನು ನಿಲ್ಲಿಸಿ ಕಮರ್ಷಿಯಲ್ ಬ್ಯಾಡ್ಜ್‌ಗಳನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದರು.

ಸೆಲ್ಫ್ ಡ್ರೈವ್ ಕಾರು ಹಾಗೂ ಮತ್ತು ಬೈಕುಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಈ ವಾಹನಗಳನ್ನು ಚಾಲನೆ ಮಾಡಲು ಚಾಲಕನು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಸಾಕು, ಕಮರ್ಷಿಯಲ್ ಬ್ಯಾಡ್ಜ್‌ಗಳ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರವು ಹೇಳಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ವಿಷಯದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಮುಂದೆ ಬೇಡಿಕೆಯನ್ನಿಡಲಾಗಿತ್ತು. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಈ ನಿರ್ಧಾರವು ಸೆಲ್ಫ್ ಡ್ರೈವ್ ಕಾರು, ಬೈಕ್ ಚಾಲಕರಿಗೆ ದೊಡ್ಡ ಪರಿಹಾರವನ್ನು ನೀಡಲಿದೆ.

ಇಲಾಖೆ ಹೊರಡಿಸಿರುವ ಅಡ್ವೈಸರಿಯಲ್ಲಿ ಬಾಡಿಗೆಗೆ ವಾಣಿಜ್ಯ ವಾಹನವನ್ನು ಚಾಲನೆ ಮಾಡುವ ವ್ಯಕ್ತಿಗೆ ಯಾವುದೇ ಬ್ಯಾಡ್ಜ್‌ನ ಅಗತ್ಯವಿಲ್ಲ. ಚಾಲಕನು ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಹಾಗೂ ಮೋಟಾರ್ ಕ್ಯಾಬ್ ರೇಟಿಂಗ್ ಲೈಸೆನ್ಸ್ ಇದ್ದರೆ ಸಾಕು ಎಂದು ಹೇಳಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರೆಂಟ್-ಎ-ಬೈಕ್ ಯೋಜನೆಯಡಿಯಲ್ಲಿ ಪರವಾನಗಿ ಪಡೆದ ದ್ವಿಚಕ್ರ ವಾಹನಗಳು ಅಗತ್ಯವಾದ ತೆರಿಗೆ ಪಾವತಿಸಿ ರಾಜ್ಯದ ಯಾವುದೇ ಭಾಗಗಳಲ್ಲಿಯಾದರೂ ಚಲಿಸಬಹುದು ಎಂದು ಇಲಾಖೆಯು ಹೇಳಿದೆ. ಜನರು ಈ ವಾಹನಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸುತ್ತಾರೆ.

ಈ ವಾಹನಗಳನ್ನು ದೇಶಾದ್ಯಂತ ಪ್ರವಾಸಿಗರು, ಕಾರ್ಪೊರೇಟ್ ಕಚೇರಿಗಳು, ಬಿಜಿನೆಸ್ ಟ್ರಾವೆಲರ್‌ಗಳು ಹಾಗೂ ರಜಾ ಕಳೆಯಲು ಹೋಗುವ ಕುಟುಂಬಗಳು ಬಳಸುತ್ತವೆ. ಜೂಮ್‌ಕಾರ್, ರೆವ್ವ್ ಹಾಗೂ ಮೈಲ್ಸ್‌ನಂತಹ ಕಂಪನಿಗಳು ಭಾರತದಲ್ಲಿ ಸೆಲ್ಫ್ ಡ್ರೈವ್ ಸೇವೆಯನ್ನು ನೀಡುತ್ತವೆ.


Click it and Unblock the Notifications