ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಭವಿಷ್ಯದ ಕಾರುಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ತರುತ್ತಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಗಳು ಸಹಭಾಗಿತ್ವದ ಯೋಜನೆಯಡಿ ವಿವಿಧ ಮಾದರಿಯ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಯೋಜನೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಸಹ ಬಿಡುಗಡೆಯ ಪಟ್ಟಿಯಲ್ಲಿ ಸ್ಥಾನಪಡೆದಿವೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಇಂಡಿಯಾ 2.0 ಪ್ರೋಜೆಕ್ಟ್ ಯೋಜನೆ ಚಾಲನೆ ನೀಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಸ್ಕೋಡಾ ಹೊಸ ಕಾರುಗಳ ನಿರ್ಮಾಣದ ಮೇಲೂ ಹೂಡಿಕೆ ಮಾಡಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸ್ಕೋಡಾ ಸಂಸ್ಥೆಯು ವಿವಿಧ ಐದು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ವಿಷನ್-ಐ ಕಾನ್ಸೆಪ್ಟ್ ಕಾರು ಪ್ರಮುಖವಾಗಿದ್ದು, ಇದರ ಜೊತೆಯಲ್ಲೇ ಮತ್ತೊಂದು ಬಹುನೀರಿಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿ ಕೂಡಾ ಬಿಡುಗಡೆಯಾಗಲಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಬಿಡುಗಡೆಯ ಕುರಿತಂತೆ ನೆಮ್ ಪ್ಲೇಟ್ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು ಸ್ಕೋಡಾ ಕಂಪನಿಯು ಇದೀಗ ಹೊಸ ಕಾರಿನ ಫೋಟೋ ಟೈಪ್ ಮಾದರಿಯ ಚಿತ್ರಗಳನ್ನು ಬಹಿರಂಗಪಡಿಸಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಹೊಸ ಕಾರು ಎನ್‌ಯಾಕ್(ENYAQ) ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲಾಂಗ್ ವೀಲ್ಹ್ ಬೆಸ್‌ನೊಂದಿಗೆ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳ್ಳಲಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಎಸ್‌ಯುವಿ ಕಾರುಗಳಲ್ಲೇ ಹೊಸ ಮಾದರಿಯ ವಿನ್ಯಾಸ ಹೊಂದಿರುವ ಎನ್‌ಯಾಕ್ ಕಾರು 4,648-ಎಂಎಂ ಉದ್ದ, 1,877-ಎಂಎಂ ಅಗಲ, 1,618-ಎಂಎಂ ಎತ್ತರದೊಂದಿಗೆ ಉತ್ತಮ ಒಳಾಂಗಣ ವಿನ್ಯಾಸ ಹೊಂದಿದೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಮಾಹಿತಿಗಳ ಪ್ರಕಾರ, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರತಿ ಚಾರ್ಜ್‌ಗೆ ಆರಂಭಿಕ ಆವೃತ್ತಿಯು 340ಕಿ.ಮೀ, ಮಧ್ಯಮ ಕ್ರಮಾಂಕದ ಕಾರು 390 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು 500ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ವೆರಿಯೆಂಟ್‌ಗಳಿಗೆ ಅನುಗುಣವಾಗಿ 55kWh, 62kWh ಮತ್ತು 82kWh ಬ್ಯಾಟರಿ ಒದಗಿಸಲಾಗಿದ್ದು, ಫೋಕ್ಸ್‌ವ್ಯಾಗನ್ ನಿರ್ಮಾಣ ಐ.ಡಿ ಕ್ರಾಝ್ ಎಲೆಕ್ಟ್ರಿಕ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಲಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಇನ್ನು ಸ್ಕೋಡಾ ಕಂಪನಿಯು ಕಾರು ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಉತ್ಪಾದನಾ ವೆಚ್ಚಗಳನ್ನು ತಗ್ಗಿಸಲು ಫೋಕ್ಸ್‌ವ್ಯಾಗನ್ ಜೊತೆಗೂಡಿ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, 2021-22ರಲ್ಲಿ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
New Skoda Enyaq Electric SUV Teasers Released: Here Are All The Detail Of Skoda’s First EV Model. Read in Kannada.
Story first published: Friday, May 8, 2020, 19:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X