ಲಾಕ್‌ಡೌನ್ ಎಫೆಕ್ಟ್: ಉದ್ಯೋಗಿಗಳ ನೆರವಿಗೆ ಧಾವಿಸಿದ ಕಂಪನಿಗಳಿಂದ ದಿಟ್ಟ ನಿರ್ಧಾರ
ಮಾರಣಾಂತಿಕ ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡುತ್ತಿದ್ದು, ಮಾನವ ಜನಾಂಗಕ್ಕೆ ಆಪತ್ತನ್ನು ತಂದಿಟ್ಟಿದೆ. ಈ ವೈರಸ್ ಕಾರಣಕ್ಕೆ ವಿಶ್ವದ ಎಲ್ಲಾ ದೇಶಗಳಲ್ಲಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ವೈರಸ್ ಹರಡದಂತೆ ತಡೆಯಲು ಬಹುತೇಕ ಎಲ್ಲಾ ದೇಶಗಳಲ್ಲೂ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದ್ದು, ಲಾಕ್‌ಡೌನ್ ಕಾರಣಕ್ಕೆ ಎಲ್ಲಾ ಕ್ಷೇತ್ರಗಳು ನಿಷ್ಕ್ರಿಯವಾಗಿವೆ. ಇದರಿಂದಾಗಿ ಬಡ ಜನರು ಹಾಗೂ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ದಿನ ನಿತ್ಯದ ಅಗತ್ಯ ವಸ್ತುಗಳಿಗಾಗಿ ಪರದಾಡುವಂತಾಗಿದೆ.

ಕೆಲವು ಕಂಪನಿಗಳು ತಮಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಸಂಬಳ ಕಡಿತ ಹಾಗೂ ಕೆಲಸದಿಂದ ವಜಾ ಮಾಡುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಂತಹ ಕ್ರಮಕ್ಕೆ ಮುಂದಾಗಬಾರದೆಂದು ಸರ್ಕಾರವು ಸೂಚನೆ ನೀಡಿದ್ದರೂ ಕಂಪನಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಯುರೋಪಿನ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಸ್ಕೋಡಾ-ಫೋಕ್ಸ್‌ವ್ಯಾಗನ್ ಹಾಗೂ ಚೀನಾದ ಎಂಜಿ ಮೋಟಾರ್ಸ್ ಕಂಪನಿಗಳು ಭಾರತದಲ್ಲಿ ಸಂಬಳ ಕಡಿತಗೊಳಿಸುವುದಾಗಲಿ ಅಥವಾ ಕೆಲಸದಿಂದ ವಜಾ ಮಾಡುವುದಾಗಲಿ ಮಾಡುವುದಿಲ್ಲವೆಂದು ತಿಳಿಸಿವೆ.

ರೆನಾಲ್ಟ್ ಕಂಪನಿಯು ಸಹ ಸಂಬಳ ನೀಡುವುದರ ಜೊತೆಗೆ ಸಿಬ್ಬಂದಿಗಳ ಉದ್ಯೋಗಕ್ಕೆ ಕುತ್ತು ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇದರ ಜೊತೆಗೆ ಸ್ಕೋಡಾ-ಫೋಕ್ಸ್‌ವ್ಯಾಗನ್ ಕಂಪನಿಯು ಇನ್ನೂ ಹೆಚ್ಚಿನ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ. ಸ್ಕೋಡಾ-ಫೋಕ್ಸ್‌ವ್ಯಾಗನ್ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಈ ಹೂಡಿಕೆಯನ್ನು ಹೊಸ ಮಾದರಿ ಕಾರುಗಳ ಮೇಲೆ ಮಾಡಲಾಗುವುದು.

ತಮ್ಮ ಉದ್ಯೋಗಿಗಳ ಭಾವನೆಗಳನ್ನು ಗೌರವಿಸುವುದಾಗಿ ತಿಳಿಸಿರುವ ಸ್ಕೋಡಾ-ಫೋಕ್ಸ್‌ವ್ಯಾಗನ್, ಉದ್ಯೋಗಿಗಳಿಗೆ ಬೋನಸ್ ನೀಡುವುದಾಗಿ ಹೇಳಿದೆ. ಆದರೆ ಈ ಬೋನಸ್ ಅನ್ನು ಮಾರುಕಟ್ಟೆ ಚೇತರಿಸಿಕೊಂಡ ನಂತರ ಪಾವತಿಸುವುದಾಗಿ ತಿಳಿಸಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಕೋಡಾ-ಫೋಕ್ಸ್‌ವ್ಯಾಗನ್‌ನ ಭಾರತದ ಸಂಸ್ಥಾಪಕರು ಈ ಬಗ್ಗೆ ಮಾತನಾಡಿ, ಉದ್ಯೋಗಿಗಳ ಕೆಲಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಅವರಿಗೆ ವೇತನವನ್ನು ಪಾವತಿಸಲಾಗುವುದು ಎಂದು ಹೇಳಿದ್ದಾರೆ.

ರೆನಾಲ್ಟ್ ಇಂಡಿಯಾದ ಸಂಸ್ಥಾಪಕರಾದ ವೆಂಕಟ್‌ರಾಮ್ ಮಾಮಿಲಪಲ್ಲೆ ಮಾತನಾಡಿ, ಸದ್ಯದ ಪರಿಸ್ಥಿತಿಯ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಆದರೆ ನಮ್ಮ ಉದ್ಯೋಗಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಎಂಜಿ ಮೋಟರ್ ಕಂಪನಿಯು ಸಹ ತನ್ನ ಉದ್ಯೋಗಿಗಳ ನೆರವಿಗೆ ಧಾವಿಸಿದೆ. ಈ ವರ್ಷದ ಪರಿಸ್ಥಿತಿ ಏನೇ ಇದ್ದರೂ ವೇತನ ಕಡಿತ ಹಾಗೂ ಉದ್ಯೋಗ ಕಡಿತದಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳಿದೆ.


Click it and Unblock the Notifications